Site icon Vistara News

Afzalpur Election Results: ಅಫಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ವೈ ಪಾಟೀಲ್‌ಗೆ ಒಲಿದ ಜಯ

aphjalpur assembly constituency winner congress my patil

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ ಪಾಟೀಲ್ ವಿಜಯ ಸಾಧಿಸಿದ್ದಾರೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಎಂ.ವೈ.ಪಾಟೀಲ್, ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್, ಸ್ವತಃ ಹಿರಿಯಣ್ಣನ ವಿರುದ್ಧವೇ ತೊಡೆತಟ್ಟಿ ಕಣದಲ್ಲಿದ್ದ ಸ್ವತಂತ್ರ ಅಭ್ಯರ್ಥಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಜೆಡಿಎಸ್ ಪಕ್ಷದ ಶಿವಕುಮಾರ್ ನಾಟಿಕಾರ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿ ಆರ್.ಡಿ.ಪಾಟೀಲ್ ನಡುವಿನ ಹಣಾಹಣಿಯಿಂದ ಇದು ಹೈವೋಲ್ಟೇಜ್ ಕ್ಷೇತ್ರವಾಗಿತ್ತು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನ ಎಂ.ವೈ ಪಾಟೀಲ 71,735 ಮತ ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಮಾಲಿಕಯ್ಯ ಗುತ್ತೇದಾರ 10594 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಈ ಕ್ಷೇತ್ರದಲ್ಲಿರುವ ಒಟ್ಟು ಮತಗಳು 218,719. ಪುರುಷರ ಸಂಖ್ಯೆ 112,215 ಹಾಗೂ 106,488 ಮಹಿಳೆಯರು.

Exit mobile version