ಉಡುಪಿ: ಮತ ಎಣಿಕೆ ಏಜೆಂಟ್ ಒಬ್ಬ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ತಪಾಸಣೆ ನಡೆಸಿದ ಪೊಲೀಸರು ಆತನನ್ನು ಹಿಡಿದು ವಾಪಸ್ ಕಳುಹಿಸಿದ ಘಟನೆಯೂ ನಡೆದಿದೆ. ಬಿಜೆಪಿಯ ಬೂತ್ ಏಜೆಂಟ್ ಕೇಸರಿ ಶಾಲಿನ ಸಮೇತ ಮತ ಕೇಂದ್ರಕ್ಕೆ ಪ್ರವೇಶ ಪಡೆಯಲು ಯತ್ನಿಸಿದ್ದರು.
ಮತ ಎಣಿಕೆ ಕೇಂದ್ರದ ಒಳಗೆ ಆಯಾಯ ಪಕ್ಷದ ಏಜೆಂಟರುಗಳಿಗೆ ಬರಲು ಅವಕಾಶವಿದೆ. ಆದರೆ, ಅವರು ಸಂವಹನ ಸಾಧನ ಸೇರಿದಂತೆ ಯಾವುದೇ ಡಿಜಿಟಲ್ ವಸ್ತುಗಳನ್ನು ಕೊಂಡೊಯ್ಯುಂತಿಲ್ಲ. ಆದರೆ ಬಿಜೆಪಿ ಏಜೆಂಟ್ ಕೇಸರಿ ಶಾಲಿನ ಜತೆಗೆ ಪ್ಯಾಂಟ್ನೊಳಗೆ ಮೊಣಕಾಲಿಗೆ ಮೊಬೈಲ್ ಕಟ್ಟಿಕೊಂಡು ಹೋಗಿದ್ದರು. ತಪಾಸಣೆ ನಡೆಸುವ ವೇಳೆ ಪೊಲೀಸರಿಗೆ ಮೊಬೈಲ್ ಇಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು.
ಏಜೆಂಟ್ ತನ್ನ ಕಾಲಿಗೆ ಪ್ಯಾಕಿಂಗ್ ಟೇಪ್ ಬಳಸಿಕೊಂಡು ಮೊಣಕಾಲಿಗೆ ಮೊಬೈಲ್ ಕಟ್ಟಿಕೊಂಡು ಹೋಗಿದ್ದರು. ಪೊಲೀಸರು ತಡೆದ ಬಳಿಕ ಮರು ಮಾತನಾಡದೇ ವಾಪಸ್ ಹೋಗಿದ್ದರು.