ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ ಜಯಭೇರಿ ಬಾರಿಸಿದ್ದಾರೆ.
ಈ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಆರ್ ಪಾಟೀಲ, ಜೆಡಿಎಸ್ ಅಭ್ಯರ್ಥಿಯಾಗಿ ಮಹೇಶ್ವರಿ ವಾಲೆ, ಆಪ್ನಿಂದ ಶಿವಕುಮಾರ್ ಖೇಡ್, ಬಿಜೆಪಿಯಿಂದ ಸುಭಾಷ್ ಗುತ್ತೇದಾರ ಕಣದಲ್ಲಿದ್ದರು. ಬಿ. ಆರ್ ಪಾಟೀಲ 88,147 ಮತ ಪಡೆದು 9953 ಮತಗಳ ಅಂತರದಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸುಭಾಷ್ ಆರ್. ಗುತ್ತೇದಾರ್ 76,815 ಮತ ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಬಿ. ಆರ್ ಪಾಟೀಲ ಕೇವಲ 697 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈ ಬಾರಿ ಸೇಡು ತೀರಿಸಿಕೊಂಡಿದ್ದಾರೆ. ಸುಭಾಷ್ ಗುತ್ತೇದಾರ್ ಅವರು ಇಲ್ಲಿ 1994, 1999, 2008, 2013ರ ಚುನಾವಣೆಗಳಲ್ಲಿ ಗೆದ್ದಿದ್ದಾರೆ. 2013ರವರೆಗೂ ಜೆಡಿಎಸ್ನಲ್ಲಿದ್ದ ಅವರು ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇಲ್ಲಿ ಇರುವ ಒಟ್ಟು ಮತಗಳು 229,638. ಪುರುಷರ ಸಂಖ್ಯೆ 119,328 ಹಾಗೂ ಸ್ತ್ರೀಯರು 110,276.