Site icon Vistara News

Alcohol Effect : ಕುಡಿದ ಮತ್ತಿನಲ್ಲಿ 6 ದಿನದ ಹಸುಗೂಸನ್ನು ದಾರಿಯಲ್ಲೇ ಇಟ್ಟು ಹೋದ ತಂದೆ!

Child kept at bus stand in Lakshmeshwara by father

ಗದಗ: ಕುಡಿತದ ಅಮಲು, ಬೇಜವಾಬ್ದಾರಿತನ, ಅಮಾನವೀಯತೆಗಳು ಸೇರಿದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇಲ್ಲೊಬ್ಬ ವ್ಯಕ್ತಿ ಎಷ್ಟು ನಿರ್ಲಕ್ಷ್ಯದಿಂದ ವರ್ತಿಸಿದ್ದಾನೆ ಎಂದರೆ ಇನ್ನೂ ಆರು ದಿನದ ಹಸುಗೂಸನ್ನು (New born Child) ತಾಯಿಯ ಮಡಿಲಿನಿಂದ ಎತ್ತಿಕೊಂಡು ಹೋಗಿ ದಾರಿ ಮಧ್ಯೆ (Man takes 6 days child from Mother side) ಬಿಟ್ಟುಬಂದಿದ್ದಾನೆ. ಅವನ ಕುಡಿತದ ಅಮಲು (Alcohol Effect) ಎಷ್ಟರ ಮಟ್ಟಿಗೆ ಇತ್ತೆಂದರೆ ಅಮಲು ಇಳಿದ ಮೇಲೆ ಮಗುವನ್ನು ಎಲ್ಲಿ ಬಿಟ್ಟಿದ್ದೇನೆ ಎನ್ನುವುದೇ ನೆನಪಿರಲಿಲ್ಲ. ಈ ಘಟನೆ ನಡೆದಿರುವುದು ಗದಗ ಜಿಲ್ಲೆಯಲ್ಲಿ (Gadaga News). ತಂದೆ-ತಾಯಿ ಇಬ್ಬರೂ ಇದ್ದರೂ ಹಸುಗೂಸು ಅನಾಥವಾದ ಮನಕಲಕುವ ವಿದ್ಯಮಾನ ಇದು.

ಅವಳಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಬಾಣಂತಿ ತಾಯಿ ಹಾಗೂ ಮಗು ಗದಗದಲ್ಲಿ ವಾಸವಾಗಿದ್ದರು. ಈ ನಡುವೆ, ಗಂಡ ಕುಡಿದ ಮತ್ತಿನಲ್ಲಿದ್ದ. ರಾತ್ರಿ ಅನಾಮತ್ತಾಗಿ ಆರು ದಿನದ ಹಸುಗೂಸನ್ನು ತಾಯಿ ಪಕ್ಕದಿಂದ ಎತ್ತಿಕೊಂಡು ಹೋಗೇ ಬಿಟ್ಟಿದ್ದ!

ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಮಗುವಿನ ಆರೈಕೆ

ಇದಾದ ಬಳಿಕ ತಡರಾತ್ರಿ ಲಕ್ಷ್ಮೇಶ್ವರ ಪಟ್ಟಣದ ರಸ್ತೆಯಲ್ಲಿ ಮಗು ಸಮೇತ ಪ್ರತ್ಯಕ್ಷವಾಗಿದ್ದ. ಈ ರಾತ್ರಿಯ ಹೊತ್ತು ಮಗುವನ್ನು ಹಿಡಿದುಕೊಂಡು ಈ ರೀತಿ ಹುಚ್ಚನಂತೆ ಅಲೆಯುತ್ತಿರುವುದನ್ನು ಯಾರೋ ಗಮನಿಸಿ ಲಕ್ಷ್ಮೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು.

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಪೊಲೀಸರು ಬರುತ್ತಿದ್ದಂತೆಯೇ ಆ ವ್ಯಕ್ತಿ ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು‌ ಹಾಗೂ ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಯಲ್ಲಿ ಸೂಕ್ತ‌ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: Child theft: ನವಜಾತ ಶಿಶು ಕಳ್ಳರಿಂದ ಕೆಲವೇ ಗಂಟೆಗಳಲ್ಲಿ ರಕ್ಷಣೆ, ಮಗುವನ್ನು ಬಿಗಿದಪ್ಪಿ ಕಣ್ಣೀರಾದ ತಾಯಿ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಲ್ಯಾಣ‌ ಸಮಿತಿಯಲ್ಲಿ ಪ್ರಕರಣ ದಾಖಲಾಗಿ ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವನ್ನು ಆರೈಕೆ ಮಾಡಲಾಗುತ್ತಿದೆ.

ಇದಾದ ಮರುದಿನ ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿಕೊಂಡು ಮಗುವನ್ನು ಕೊಡಿ ಎಂದು ಕೇಳಿಕೊಂಡು ಬಂದಿದ್ದಾರೆ. ಆದರೆ, ಮಧ್ಯರಾತ್ರಿ ಮಗುವನ್ನು ಎತ್ತಿಕೊಂಡು ಬಂದಿದ್ದೇಕೆ? ಎಳೆ ಹಸುಳೆಯನ್ನು ಯಾಕೆ ಈ ರೀತಿ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ ಅವರಲ್ಲಿ ಉತ್ತರವಿರಲಿಲ್ಲ.

ಹೀಗಾಗಿ ಮಗುವನ್ನು ಅವರ ಕೈಗೆ ಹಸ್ತಾಂತರಿಸಲು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಸೂಕ್ತ ತನಿಖೆ ಬಳಿಕವೇ ತಂದೆ ತಾಯಿಗೆ ಮಗು ನೀಡಲು ಅಧಿಕಾರಿಗಳ‌ ನಿರ್ಧರಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ನಡೆದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಲಿದೆ. ಅಲ್ಲಿವರೆಗೆ ಮಗು ದತ್ತು ಸ್ವೀಕಾರ ಕೇಂದ್ರದಲ್ಲಿ ಪೋಷಣೆಯಲ್ಲಿ ಇರಲಿದೆ.

Exit mobile version