ಹುಬ್ಬಳ್ಳಿ: ಕುಡಿತದ ಕೆಡುಕುಗಳ ಬಗ್ಗೆ ಮಕ್ಕಳಿಗೆ, ಕುಟುಂಬಕ್ಕೆ ತಿಳಿಹೇಳಬೇಕಾದ ತಾಯಿಯೊಬ್ಬಳು ತಾನೇ ಕುಡಿದು ಬೀದಿಯಲ್ಲಿ ರಂಪಾಟ (Alcoholic woman)Alcoholic woman ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಇನ್ನೂ ೨೦ರ ಆಸುಪಾಸಿನಲ್ಲಿರುವ ಮಹಿಳೆಯೊಬ್ಬಳು ಕುಡಿದು ರಂಪಾಟ ಮಾಡಿದ್ದಲ್ಲದೆ, ತನ್ನ ಪುಟ್ಟ ಮಗುವನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾಳೆ.
ಮಹಿಳೆ ರಸ್ತೆಯಲ್ಲಿ ಸರಿಯಾಗಿ ನಡೆಯಲಾಗದೆ ಅಲ್ಲೇ ಬಿದ್ದಿದ್ದಳು. ಎದ್ದೇಳಲು ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿರಲಿಲ್ಲ. ಅವಳ ಜತೆಗೆ ಒಂದು ಪುಟ್ಟ ಮಗು ಕೂಡಾ ಇತ್ತು. ಆಕೆಯ ಸ್ಥಿತಿಯನ್ನು ನೋಡಿ ಪೊಲೀಸರು ಗಮನಿಸಿ ರಕ್ಷಣೆಗೆ ಮುಂದಾದರು. ಆದರೆ, ಅವರಿಗೇ ಬೈದು, ಗೋಳಾಡಿ ಏನೆಲ್ಲ ಕಿರಿಕಿರಿಗಳನ್ನು ಮಾಡಿದಳು. ಕಂಡಕಂಡವರನ್ನೆಲ್ಲ ಬೈದಾಡಿದಳು. ಕೊನೆಗೆ ತನಗೊಂದು ಮಗುವಿದೆ, ಅದನ್ನು ಹಿಡಿದುಕೊಂಡು ಬಂದಿದ್ದೇನೆ ಎನ್ನುವುದನ್ನೂ ಮರೆತು ಎಲ್ಲೋ ತೂರಾಡುತ್ತಾ ನಡೆದುಹೋದಳು.
ಆಗ ಪೊಲೀಸರೇ ಅನಾಥವಾಗಿ ರಸ್ತೆಯಲ್ಲಿ ಕುಳಿತಿದ್ದ ಮಗುವನ್ನು ಎತ್ತಿಕೊಂಡು ರಕ್ಷಣೆ ಒದಗಿಸಿದರು. ಕುಡಿತದ ಮತ್ತು ಇಳಿದ ಬಳಿಕ ಆಕೆ ಬಂದು ಮಗುವನ್ನು ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ : Swami Koragajja : ಕಾಫಿನಾಡಲ್ಲಿ ಕೊರಗಜ್ಜನ ಪವಾಡ; ಕುಡಿತ, ಧೂಮಪಾನದಿಂದ ಮುಕ್ತಿ ನೀಡುವ ದೈವವಾಗಿ ಪ್ರಸಿದ್ಧಿ!