Site icon Vistara News

Karnataka Election: ದೇಗುಲದಲ್ಲಿದ್ದ ಬಜರಂಗಬಲಿಯನ್ನು ಕಾಂಗ್ರೆಸ್‌ ಬೀದಿಗೆ ತಂದಿತು: ಅಮಿತ್‌ ಶಾ

Amit Shah says Congress brought Bajrang Bali from temple to the streets

Amit Shah says Congress brought Bajrang Bali from temple to the streets

ಬಾಗಲಕೊಟೆ: ನಾನು ರಾಜ್ಯಕ್ಕೆ ಬಂದಾಗ ಮಾಧ್ಯಮದವರು, ಪೂರ್ತಿ ಚುನಾವಣೆಯು ಬಜರಂಗಬಲಿ‌ ಹೆಸರಲ್ಲಿ ನಡೆಯಿತಲ್ಲ ಎಂದು ಕೇಳಿದರು. ಆಗ ನಾನು ʼಬಜರಂಗಬಲಿ ದೇವಸ್ಥಾನದಲ್ಲಿದ್ದ. ಆದರೆ, ಕಾಂಗ್ರೆಸ್‌ನವರು ಚುನಾವಣೆಯಲ್ಲಿ ಬೀದಿಗೆ ತಂದರು ಎಂದು ಹೇಳಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಜಿಲ್ಲೆಯ ಇಳಕಲ್‌ ಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿ ಸಮಾಪ್ತಿ ಮಾಡಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ತೆಗೆದಿದ್ದು ಸರಿಯಾ ತಪ್ಪಾ? ಲಿಂಗಾಯತ, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ಆದರೆ, ಕಾಂಗ್ರೆಸ್‌ನವರು ಮುಸ್ಲಿಂರಿಗೆ ಶೇ.4ರ ಬದಲಿಗೆ ಶೇ. 6 ಮೀಸಲಾತಿ ನೀಡುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ, ಲಿಂಗಾಯತರದ್ದು ಮಾಡುತ್ತೀರಾ? ಎಸ್‌ಸಿ, ಎಸ್‌ಟಿಯವರದ್ದು ಕಡಿಮೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Election 2023: ರಾಜ್ಯಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ; ನೇತ್ರಾಣಿ ದ್ವೀಪದ ಕಡಲಾಳದಲ್ಲಿ ಬ್ಯಾನರ್‌ ಪ್ರದರ್ಶನ

ಬಿಜೆಪಿ ಯಾರ ಮೀಸಲಾತಿಯನ್ನು ಕಡಿಮೆ ಮಾಡಲು ಬಿಡುವುದಿಲ್ಲ. ಇದು ನಾವು ಕೊಡುವ ಮಾತಾಗಿದೆ. ಮೊದಲು ಮಹದಾಯಿ ವಿವಾದವಿತ್ತು. ಉತ್ತರ ಕರ್ನಾಟಕಕ್ಕೆ ನೀರು ಸಿಗುತ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಮಹದಾಯಿ ವಿವಾದ ಬಗೆಹರಿಸಿ ಉತ್ತರ ಕರ್ನಾಟಕಕ್ಕೆ ನೀರು ಕೊಡುವಂತೆ ಮಾಡಿದರು. ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಮ್ ಇದ್ದ ಹಾಗೆ. ಕರ್ನಾಟಕವನ್ನು ಎಟಿಎಂ ಮಾಡಿ ಹಣ ಲೂಟಿ ಮಾಡಿ ದೆಹಲಿಗೆ ಒಯ್ಯುತ್ತಾರೆ ಎಂದು ಹೇಳಿದರು.

ಅರೆ ರಾಹುಲ್ ಬಾಬಾ ನಿಮಗೆ ಗೊತ್ತಾ? ಇವರು ಗ್ಯಾರಂಟಿ ನೀಡುತ್ತಿದ್ದಾರೆ. ಎಲ್ಲೆಲ್ಲಿ ಗ್ಯಾರಂಟಿ ಕೊಟ್ಟಿರಿ ಅಲ್ಲೆಲ್ಲಾ ಸೋತಿರಿ. ತ್ರಿಪುರಾ, ಉತ್ತರಾಖಂಡ ಎಲ್ಲ ಕಡೆ ನೀವು ಸೋತಿದ್ದೀರಿ ಎಂದ ಕಿಡಿಕಾರಿದ ಅವರು, ಚುನಾಚಣೆ ಬಂದಿದೆ, ಕಾಂಗ್ರೆಸ್‌ನವರ ಬಾಯಲ್ಲಿ ಲಿಂಗಾಯತರ ಮಾತು ಹರಿದಾಡುತ್ತಿದೆ. ಆದರೆ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಮಾತ್ರ ಲಿಂಗಾಯತ ‌ಮುಖ್ಯಮಂತ್ರಿ ಮಾಡಿದ್ದಾರೆ. ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಆಗಿದ್ದರು. ನಿಜಲಿಂಗಪ್ಪ ಅವರನ್ನು ಇಂದಿರಾ ಗಾಂಧಿ ಅವಮಾನ ಮಾಡಿ ಕೆಳಗಿಳಿಸಿದರು. ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರಿಗೆ ಅವಮಾನ ಮಾಡಿ ಕೆಳಗಿಳಿಸಿದರು. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗ ಲಿಂಗಾಯತರೇ ಆದ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆವು ಎಂದು ಹೇಳಿದರು.

ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಕೆರೂರು ಏತ ನೀರಾವರಿ, ಬಾಗಲಕೋಟೆಯಲ್ಲಿ ಏರ್‌ಪೋರ್ಟ್‌ ಮಾಡುವ ಕೆಲಸಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದ ಪ್ರಧಾನಿ ಮೋದಿ

ಸಿದ್ದರಾಮಯ್ಯ. ಡಿ.ಕೆ. ಶಿವಕುಮಾರ್ ಅವರನ್ನು ಕೇಳುತ್ತೇನೆ. ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇತ್ತು. ಆದರೆ ನೀವು ರಾಜ್ಯಕ್ಕೆ ಏನು ಮಾಡಿದಿರಿ. ಕಾಂಗ್ರೆಸ್ ಪಾರ್ಟಿ ದೇಶದ ರಕ್ಷಣೆ ಮಾಡುವುದಿಲ್ಲ. ದೇಶದ ವಿಕಾಸ ಕೂಡ ಮಾಡೋದಿಲ್ಲ ಎಂದು ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೋ ಬೇಡವೋ? ಕಾಂಗ್ರೆಸ್ ಪಾರ್ಟಿ ಹಲವಾರು ವರ್ಷಗಳ ಕಾಲ ಈ ವಿಚಾರವನ್ನು ಜೀವಂತವಾಗಿರಿಸಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲಿದೆ

ಬೆಳಗಾವಿ: ಕುಂದಾನಗರಿಯಲ್ಲಿ ಎರಡನೇ ದಿನವೂ ಬಿಜೆಪಿ ಚಾಣಕ್ಯ ಪ್ರಚಾರ ನಡೆಸಿದರು. ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಭಾನುವಾರ ಕೇಂದ್ರ ಸಚಿವ ಅಮಿತ್ ಶಾ ಅವರು ಭರ್ಜರಿ ರೋಡ್ ಶೋ ನಡೆಸಿದ್ದರು. ಈ ವೇಳೆ ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ, ಸಂಸದೆ ಮಂಗಲಾ ಅಂಗಡಿ ಭಾಗಿಯಾಗಿದ್ದರು.

ವಡಗಾವಿಯ ಪಿಂಪಳಕಟ್ಟಾದಿಂದ ಆರಂಭವಾದ ಅಮಿತ್ ಶಾ ರೋಡ್ ಶೋ, ರೇಣುಕಾ ಹೋಟೆಲ್, ವಡಗಾವಿ ಮೇನ್ ರೋಡ್, ನಾಥಫೈ ಸರ್ಕಲ್, ಶಹಪುರ ಖಡೇಬಜಾರ್‌ವರೆಗೂ ನಡಯಿತು. ನಂತರ ಅಮಿತ್‌ ಶಾ ಅವರು ಅರ್ಧದಲ್ಲೇ ರೋಡ್‌ ಶೋ ಮೊಟಕುಗೊಳಿಸಿ ಬಾಗಲಕೋಟೆಗೆ ತೆರಳಿದ್ದು ಕಂಡುಬಂತು.

ಇದಕ್ಕೂ ಮುನ್ನ ರೋಡ್ ಶೋನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ ಪಾಟೀಲ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಕಳೆದ ಚುನಾವಣೆಗಿಂತ‌ ದುಪ್ಪಟ್ಟು ಮತಗಳ ಅಂತರದ ಗೆಲುವನ್ನು ನಮ್ಮ ಅಭ್ಯರ್ಥಿ ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election 2023: ಆರ್‌ಎಸ್‌ಎಸ್‌ ಹಿನ್ನೆಲೆಯ ಶೆಟ್ಟರ್ ಪರ ಪ್ರಚಾರ : ಸೋನಿಯಾ ವಿರುದ್ಧ ಓವೈಸಿ ಕಿಡಿ

ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಬೆಳಗಾವಿಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಮರ್ಪಿತವಾಗಲಿದೆ. ಕಾಂಗ್ರೆಸ್ ಧರ್ಮ-ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶ ಸುಭದ್ರವಾಗಿದೆ, ಸಮೃದ್ಧಿಯಾಗಿದೆ. ಜಾಗತಿಕ ಮಟ್ಟದಲ್ಲಿ ದೇಶದ ಗೌರವವೂ ವೃದ್ಧಿಯಾಗಿದೆ ಎಂದು ತಿಳಿಸಿದರು.

Exit mobile version