Site icon Vistara News

Amit Shah Muslim reservation: ಮೀಸಲಾತಿ ರದ್ದುಪಡಿಸುವ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ: ಬಿಜೆಪಿಯಿಂದ ನವ ಕರ್ನಾಟಕದ ಕನಸು ನನಸು ಎಂದ ಅಮಿತ್ ಶಾ

Ban on SIMI Terror Group extended for another five years

amit shah

ವಿಜಯಪುರ: ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು (muslim reservation) ರದ್ದುಗೊಳಿಸಿ ಹೊಸ ಮೀಸಲಾತಿ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಜಾರಿ ಮಾಡಿದೆ. ರಿವರ್ಸ್ ಗೇರ್ ಹೊಂದಿರುವ ಕಾಂಗ್ರೆಸ್ ಲಿಂಗಾಯತ (lingayat reservation) , ದಲಿತ ಬಾಂಧವರ ಮೀಸಲಾತಿ (dalit reservation) ರದ್ದುಗೊಳಿಸಿ ಪುನಃ ಮುಸ್ಲಿಮರಿಗೆ ನೀಡುವುದಾಗಿ ಹೇಳುತ್ತಿದೆ, ಆದರೆ ಯಾವ ಕಾರಣಕ್ಕೂ ಬಿಜೆಪಿ ಇದನ್ನು ಸಹಿಸುವುದಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (amit shah) ವಿಶ್ವಾಸದಿಂದ ನುಡಿದರು.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಇಂದು ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ (amit shah) ಲಿಂಗಾಯತರ ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು.

ಧರ್ಮ ಆಧಾರಿತವಾಗಿ ಮೀಸಲಾತಿ ಏಕೆ ಎಂದು ನಗರ ಶಾಸಕ ಯತ್ನಾಳ ಪದೇ ಪದೇ ಕೇಳುತ್ತಲೇ ಇದ್ದರು. ವೋಟ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಮುಸ್ಲಿಂ ಮೀಸಲಾತಿ ಕೊಟ್ಟಿತ್ತು. ಭಾರತೀಯ ಜನತಾ ಪಕ್ಷ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ತಳವಾರ-ಪರಿವಾರ, ದಲಿತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದೆ; ಇದು ಮಾಡಿದ್ದು ಒಳ್ಳೆಯದೇ? ಕೆಟ್ಟದ್ದೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧ್ಯಕ್ಷರು ಒಳಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸಿ ಮುಸ್ಲಿಂರಿಗೆ ಮಿಸಲಾತಿ, ಸರ್ಕಾರ ಬರುವುದೇ ಇಲ್ಲ, ಮೀಸಲಾತಿ ರದ್ದಾಗುವುದೇ ಇಲ್ಲ; ಚಿಂತೆ ಮಾಡಬೇಡಿ.

ಮೀಸಲಾತಿಯ ಮೇಲೆ ದಲಿತರ, ಆದಿವಾಸಿಗಳ, ಲಿಂಗಾಯತರಿಗೆ ನೀಡುವ ಮೀಸಲಾತಿ ಅಭಯ ಎಂದೂ ಕೊನೆಗೊಳಿಸುವುದಿಲ್ಲ, ಪಿಎಫ್‍ಐ ಹಿಂಸೆಯ ತಾಂಡವವಾಡುತ್ತಿದ್ದ ಪಿಎಫ್‍ಐ ಸಂಘಟನೆಯನ್ನು ನಮ್ಮ ಸರ್ಕಾರ ಬ್ಯಾನ್ ಮಾಡಿದೆ, ಇದು ಒಳ್ಳೆಯದಲ್ಲವೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‍ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು, ಆದರೆ ಬಿಜೆಪಿ ಅವರನ್ನು ಹುಡುಕಿ ಹುಡುಕಿ ಜೈಲಿಗಟ್ಟುತ್ತಿದೆ, ಆದರೆ ರಿವರ್ಸ್ ಗೇರ್ ಕಾಂಗ್ರೆಸ್ ಪಿಎಫ್‍ಐ ನಿಷೇಧವನ್ನು ಹಿಂದಕ್ಕೆ ಪಡೆಯುವ ಮಾತು ಹೇಳಲಿದೆ, ದೇಶಕ್ಕೆ ದೊಡ್ಡಮಟ್ಟದ ಅಪಾಯದ ಎಚ್ಚರಿಕೆ ಗಂಟೆಯಾಗಿರುವ ಪಿಎಫ್‍ಐನ್ನು ವೋಟ್ ಬ್ಯಾಂಕ್‍ಗಾಗಿ ಪೆÇ್ರೀತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವ ಕರ್ನಾಟಕದ ಕನಸು ನನಸಾಗುವುದು ಮೋದಿ ಅವರಿಂದ ಮಾತ್ರ ಸಾಧ್ಯ, ವಿಕಾಸದ ಮಂತ್ರ ಜಪಿಸುವ ಪಕ್ಷ ಬಿಜೆಪಿ ಮಾತ್ರ ಎಂದರು. ಬಿಜೆಪಿ ಅಧಿಕಾರದಲ್ಲಿ ಇರುವ ಕಾರಣ ಅಭಿವೃದ್ಧಿಯ ಪರ್ವ ಮುಂದುವರೆಯುತ್ತಲೇ ಇದೆ ಎಂದರು.

ಲಿಂಗಾಯತರನ್ನು ಕಾಂಗ್ರೆಸ್ ಅವಮಾನ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಲಿಂಗಾಯತರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿರುವುದು ಹೊಸತಲ್ಲ, ವೀರೇಂದ್ರ ಪಾಟೀಲ, ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನ ಮಾಡಿದೆ, ಲಿಂಗಾಯತರನ್ನು ಅವಮಾನ ಕಾಂಗ್ರೆಸ್ ಮಾಡುತ್ತಲೇ ಇದೆ. ನಮ್ಮ ನಾಯಕ ಅಲ್ಲಿ ಹೋಗಿದ್ದಾರೆ, ಆದರೆ ಹುಬ್ಬಳ್ಳಿಯಲ್ಲಿ 25 ಸಾವಿರ ಅಂತರದಿಂದ ಸೋಲು ಕಾಣುವುದಂತೂ ಸತ್ಯ ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಜೆಡಿಎಸ್‍ಗೆ ಮತ ನೀಡಿದರೆ ಕಾಂಗ್ರೆಸ್‍ಗೆ ಮತ, ಕಾಂಗ್ರೆಸ್‍ಗೆ ಮತ ನೀಡುವುದು ಪಿಎಫ್‍ಐಗೆ ಪರೋಕ್ಷ ಬೆಂಬಲ ನೀಡಿದಂತೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಚುನಾವಣೆಯಲ್ಲಿ ಎಲ್ಲ ಸಮುದಾಯಗಳ ಮತಗಳು ಅತ್ಯಂತ ಅವಶ್ಯ, ಸರಳ ಸ್ವಭಾವದ ಸೋಮನಗೌಡರು ಈ ಭಾಗಕ್ಕೆ ನೀರಾವರಿ ಮಾಡಿದ್ದಾರೆ, ಎರಡು ಲಕ್ಷ ಎಕರೆ ಜಮೀನುಗಳಿಗೆ ನೀರು ಹರಿಸುವ ದೊಡ್ಡ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಶಾಸಕ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Election: ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗಲು ನಂಬರ‍್ರೇ ಬಂದಿಲ್ಲ; ಈ ಬಾರಿ ಬಿಜೆಪಿಯವರೇ ಸಿಎಂ: ಅಮಿತ್‌ ಶಾ

Exit mobile version