Site icon Vistara News

Amit Shah: ಮುಸ್ಲಿಂ ಮೀಸಲಾತಿ ಸಂವಿಧಾನಬದ್ಧವಲ್ಲ: ಮೀಸಲಾತಿ ಕತ್ತರಿಗೆ ಅಮಿತ್‌ ಶಾ ಸಮರ್ಥನೆ

amit-shah-says-muslim-reservation-is-not-according-to-cosntitution

#image_title

ಬೀದರ್:‌ ಯಾವುದೇ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸಂವಿಧಾನ ಬದ್ಧವಲ್ಲ ಎಂದಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ, ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಕತ್ತರಿಸಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದ್ದಾರೆ.

ಬೀದರ್‌ನಲ್ಲಿ ಗೊರಟ ಸ್ಮಾರಕ ಹಾಗೂ ಸರ್ದಾರ್‌ ಪಟೇಲ್‌ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಮಾತನಾಡಿದ್ದಾರೆ.

ಕಾಂಗ್ರೆಸ್‌ನ ತುಷ್ಟೀಕರಣ ರಾಜನೀತಿಯ ಕಾರಣಕ್ಕೆ ಅವರು ಎಂದಿಗೂ ಹೈದರಾಬಾದ್‌ ಮುಕ್ತಿಗೆ ಹೋರಾಡಿದವರನ್ನು ನೆನೆಸಿಕೊಂಡಿಲ್ಲ. ಸರ್ದಾರ್‌ ಪಟೇಲ್‌ ಇಲ್ಲದಿದ್ದರೆ ಹೈದರಾಬಾದ್‌ ಸ್ವಾತಂತ್ರ್ಯವಾಗುತ್ತಿರಲಿಲ್ಲ, ಬೀದರ್‌ ಸಹ. ಮೀಸಲಾತಿಯಲ್ಲಿ ಬಿಜೆಪಿ ಸರ್ಕಾರ ಬದಲಾವಣೆ ಮಾಡಿದೆ. ಓಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಸರ್ಕಾರ ಶೇ.4 ಮುಸ್ಲಿಂ ಮೀಸಲಾತಿ ನೀಡಿತ್ತು. ಇದರಲ್ಲಿ ಶೇ. 2 ಹಾಗೂ ವೀರಶೈವ ಲಿಂಗಾಯತರಿಗೆ ಶೇ.2 ಮೀಸಲಾತಿ ನೀಡಿದ್ದೇವೆ. ಎಸ್‌ಸಿಎಸ್‌ಟಿ ಮೀಸಲಾತಿಯಲ್ಲೂ ಬದಲಾವಣೆ ಮಾಡಿ ಅನ್ಯಾಯ ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದು ಸಂವಿಧಾನಬದ್ಧವಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದೀಗ ಆ ಮೀಸಲಾತಿಯನ್ನು ತೆಗೆದು ಸಂವಿಧಾನದ ಆಶಯ ಅನುಷ್ಠಾನ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷವು ಕರ್ನಾಟಕಕ್ಕೆ ಎಂದಿಗೂ ಅನುಕೂಲ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಕರ್ನಾಟಕ ಒಂದು ಎಟಿಎಂ ಆಗಿ ಬೇಕಾಗಿದೆ. ಕರ್ನಾಟಕದ ವಿಕಾಸ ಕೇವಲ ನರೇಂದ್ರ ಮೋದಿ ನೇತೃತ್ವದಲ್ಲಿ ಆಗುತ್ತದೆ. ಬಿಜೆಪಿ ಸರ್ಕಾರ ಮಾತ್ರ ಈ ಅಭಿವೃದ್ಧಿ ಆಗುತ್ತದೆ.

ಕಳೆದ ಚುನಾವಣೆಯಲ್ಲಿ 104 ಸ್ಥಾನ ನೀಡಿದಿರಿ. ತಕ್ಷಣವೇ ಜೆಡಿಎಸ್‌ನವರು ಕಾಂಗ್ರೆಸ್‌ ಮಡಿಲಲ್ಲಿ ಕುಳಿತರು. ಹೆಚ್ಚು ಸ್ಥಾನಗಳನ್ನು ಪಡೆದಿದ್ದು ಬಿಜೆಪಿಯ ಯಡಿಯೂರಪ್ಪ, ಆದರೆ ಸಿಎಂ ಆಗಿದ್ದು ಕುಮಾರಸ್ವಾಮಿ. ಇಂಥವರು ಕರ್ನಾಟಕಕ್ಕೆ ಒಳ್ಳೆಯದು ಮಾಡುವುದಿಲ್ಲ. ಕೇವಲ ಮೋದಿ ನೇತೃತ್ವ ಮಾತ್ರ ಕರ್ನಾಟಕಕ್ಕೆ ಒಳಿತು ಮಾಡಲು ಸಾಧ್ಯ. ಈ ಭಾಗವನ್ನು ಹೈದರಾಬಾದ್‌ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈ ಗುಲಾಮಿತನದ ಗುರುತಿನ ಹೆಸರನ್ನು ಯಡಿಯೂರಪ್ಪ ಬದಲಾಯಿಸಿ ಈ ಪ್ರದೇಶದ ವಿಕಾಸಕ್ಕೆ 300 ಕೋಟಿ ರೂ. ನೀಡಿದರು. ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ 5 ಸಾವಿರ ಕೋಟಿ ರೂ. ನೀಡಿದೆ.

ಇದನ್ನೂ ಓದಿ: Amit Shah Visit: ಭಾನುವಾರ ಅಮಿತ್‌ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

Exit mobile version