Site icon Vistara News

Karnataka Election: ಅಮಿತ್‌ ಶಾ ಜೇವರ್ಗಿ, ಅಫಜಲಪುರ ಪ್ರವಾಸ ದಿಢೀರ್‌ ರದ್ದು; ಕಾರಣ ಏನು?

Amit Shah's visit to Jevargi, Afzalpur cancelled due to incessant rains

Amit Shah's visit to Jevargi, Afzalpur cancelled due to incessant rains

ಕಲಬುರಗಿ: ಕೇಂದ್ರ ಸಚಿವ ಅಮಿತ್‌ ಶಾ ಅವರು ಗುರುವಾರ ಜಿಲ್ಲೆಯ ಜೇವರ್ಗಿ ಹಾಗೂ ಅಫಜಲಪುರದಲ್ಲಿ ಪ್ರಚಾರ ನಡೆಸಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಅವರ ಪ್ರವಾಸ ರದ್ದಾಗಿದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಸಮಾವೇಶಗಳು (Karnataka Election) ನಡೆದಿವೆ. ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ದಿಢೀರ್‌ ಜಿಲ್ಲಾ ಪ್ರವಾಸ ರದ್ದು ಮಾಡಿ, ನವ ದೆಹಲಿಗೆ ತೆರಳಿದ್ದರಿಂದ ಪ್ರಚಾರ ಕಾರ್ಯಕ್ರಗಳು ರದ್ದಾಗಿವೆ.

ಮಣಿಪುರದಲ್ಲಿ ಮೈತೈ ಸಮುದಾಯವನ್ನು ಎಸ್​​ಟಿ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಆಲ್​ ಟ್ರೈಬಲ್​ ಸ್ಟುಡೆಂಟ್ಸ್​​ ಯೂನಿಯನ್​​ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆ ಮಣಿಪುರದ ವಿವಿಧೆಡೆ ಹಿಂಸಾರೂಪ ಪಡೆದುಕೊಂಡಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಖ್ಯಾತ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಅವರು “ಮಣಿಪುರ ಹೊತ್ತಿ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ” ಎಂದು ಟ್ವೀಟ್‌ ಮಾಡಿದ್ದರು. ಆದ್ದರಿಂದ ಅಮಿತ್‌ ಶಾ ಅವರು, ಜಿಲ್ಲಾ ಪ್ರವಾಸ ರದ್ದುಗೊಳಿಸಿ ವಾಪಸ್‌ ನವ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸ್ಥಳೀಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಸಮಾವೇಶ

ಜೇವರ್ಗಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶ ಕೇಂದ್ರ ಗೃಹ ಸಚಿವರಿಲ್ಲದೆ ಸ್ಥಳೀಯ ನಾಯಕರ ನೇತೃತ್ವದಲ್ಲಿ ನಡೆಯಿತು. ಜೇವರ್ಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ್ ರದ್ದೇವಾಡಗಿ ಪರ ಮತಯಾಚಿಸಲು ಅಮಿತ್‌ ಶಾ ಅವರು ಬರಬೇಕಿತ್ತು. ಮಧ್ಯಾಹ್ನ 3.30ಕ್ಕೆ ಕಲಬುರಗಿಗೆ ಅಮಿತ್ ಶಾ ಆಗಮಿಸಬೇಕಿತ್ತು. ಆದರೆ, ಅವರು ಆಗಮಿಸರಿರಲಿಲ್ಲ. ಒಂದೆಡೆ ಸಮಾವೇಶಕ್ಕೆ ಆಗಮಿಸಿದ್ದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಗಳ ಆಸರೆ ಪಡೆದರು.

ಇದನ್ನೂ ಓದಿ | Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ 1 ದಿನದ ಬದಲು 2 ದಿನ; ಮಾರ್ಗವೂ ಬದಲಾವಣೆ

ನಂತರ ಸಂಜೆ ವೇಳೆಗೆ ಕೂಡ ಕೇಂದ್ರ ಸಚಿವರು ಆಗಮಿಸದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ನೇತೃತ್ವದಲ್ಲಿ ಜೇವರ್ಗಿಯಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಗೃಹ ಸಚಿವರು ಬರುವುದಿಲ್ಲ ಎಂಬ ಮಾಹಿತಿ ಪಡೆದು ಸಮಾವೇಶದ ಆರಂಭದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನಿರ್ಗಮಿಸಿದರು.

Exit mobile version