Site icon Vistara News

Amrit Mahotsav: ಹುತಾತ್ಮ ಯೋಧರ ಕುಟುಂಬಕ್ಕೆ ನೌಕರಿ, 25 ಲಕ್ಷ ರೂ, ಕಾಯಕ ಯೋಗಿಗಳಿಗೆ 50,000 ರೂ. ಸಹಾಯಧನ

ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಡುವ ನಮ್ಮ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದರೆ ಅವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರಕಾರಿ ಉದ್ಯೋಗ ಮತ್ತು ೨೫ ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಡುವ ಸೈನಿಕರ ಕುಟುಂಬದ ಜೀವನ ಭದ್ರತೆಗೆ ಸರಕಾರ ಈ ಕ್ರಮ ಕೈಗೊಂಡಿದೆ ಎಂದರು.

ಕಾಯಕಯೋಗಿಗಳಿಗೆ ೫೦,೦೦೦ ರೂ.
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ೫೦,೦೦೦ ರೂ.ವನ್ನು ಸಾಲ ರೂಪದ ಸಹಾಯ ಧನವಾಗಿ ನೀಡಲಾಗುವುದು ಎಂದು ಸಿಎಂ ಘೋಷಿಸಿದರು.

ಇನ್ನೂ ಹಲವು ಹೊಸ ಘೋಷಣೆ
– ಪ್ಯಾರಿಸ್‌ ಒಲಂಪಿಕ್ ಗೆ 75 ಕ್ರೀಡಾಪಟುಗಳ ರೂಪಿಸಲು ಒಬ್ಬ ಕ್ರೀಡಾಪಟುವಿಗೆ 5 ಲಕ್ಷ ಅನುದಾನ.
– ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದಕ್ಕೆ 250 ಕೋಟಿ ಅನುದಾನ ಕೊಡಲು ತೀರ್ಮಾನ
– ಭೂಮಿ ಇಲ್ಲದ ಕಾರ್ಮಿಕರಿಗೆ ವಿಶೇಷ ಯೋಜನೆ
– ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು 4000 ಅಂಗನವಾಡಿ ತೆರೆಯಲು ನಿರ್ಧಾರ. ಇವುಗಳನ್ನು ಕೂಲಿ ಕಾರ್ಮಿಕರು ಹೆಚ್ಚಿರುವ ಕಡೆ ನಿರ್ಮಾಣ.

ಸಾಧನೆ ಹೇಳಿಕೊಂಡ ಮುಖ್ಯಮಂತ್ರಿ
-ಅಮೃತ ಆರೋಗ್ಯ ಮೂಲ ಸೌಲಭ್ಯದ ಅಡಿಯಲ್ಲಿ 750 ಆಸ್ಪತ್ರೆಗಳಿಗೆ ತಲಾ 20 ಲಕ್ಷ ರೂಪಾಯಿಗಳಂತೆ 150 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
-ಅಮೃತ ಕೌಶಲ ಅಭಿವೃದ್ಧಿ ತರಬೇತಿ ಯೋಜನೆಯಡಿ 75 ಸಾವಿರ ಯುವಕರಿಗೆ ತರಬೇತಿ ಕೊಡಲು 112 ಕೋಟಿ ಒದಗಿಸಲಾಗಿದೆ. 60,645 ಅಭ್ಯರ್ಥಿ ಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ.
-ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಯೋಜನೆ ಅಡಿಯಲ್ಲಿ 225 ಕೋಟಿ ಅನುದಾನ. ಇದರಿಂದ 324 ರೈತ ಸಂಘಗಳಿಗೆ ಅನುಕೂಲ
– ಅಮೃತ ನಿರ್ಮಲ ನಗರ ಯೋಜನೆಯಡಿ ಪ್ರತಿ ಸ್ಥಳೀಯ ಸಂಸ್ಥೆಗೆ ಒಂದು ಕೋಟಿ – 75 ನಗರಗಳಿಗೆ 75 ಕೋಟಿ ಅನುದಾನ ಒದಗಿಸಿದೆ.
– ಅಮೃತ ಅಂಗನವಾಡಿ ಕೇಂದ್ರಗಳ ಯೋಜನೆಯಡಿ 750 ಅಂಗನವಾಡಿಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಒಂದು ಲಕ್ಷದಂತೆ 7.5 ಕೋಟಿ ಅನುದಾನ – 392 ಕಾಮಗಾರಿ ಪೂರ್ಣವಾಗಿದೆ.
– ರೈತರ ಮಕ್ಕಳಿಗೆ ಸ್ಕಾಲರ್‌ಷಿಪ್‌ ನೀಡಲು 430 ಕೋಟಿ ಬಿಡುಗಡೆ

ಇದನ್ನೂ ಓದಿ ವಿವಾದಕ್ಕೆ ತೆರೆ: ನೆಹರೂ ಸೇರಿದಂತೆ ಯಾವ ಪ್ರಧಾನಿಯನ್ನೂ ಮರೆಯುವ ಪ್ರಶ್ನೆಯೇ ಇಲ್ಲ ಎಂದ ಬೊಮ್ಮಾಯಿ

Exit mobile version