ಚಿಕ್ಕೋಡಿ: ಮೂರು ವರ್ಷದ ಮಕ್ಕಳು ಸರಿಯಾಗಿ ಮಾತನಾಡಿದರೆ ಹೆಚ್ಚು. ಆದರೆ, ಇಲ್ಲೊಬ್ಬ ಮೂರು ವರ್ಷದ ಕಂದ ತನ್ನ ತೊದಲು ನುಡಿಗಳಲ್ಲಿ ಎ.ಆರ್.ರೆಹಮಾನ್ ಸಂಗೀತ ಹಾಗೂ ಕಂಠಸಿರಿಯಲ್ಲಿ ಮೂಡಿ ಬಂದಿರುವ ವಂದೇ ಮಾತರಂ ಗೀತೆಯನ್ನು ನಟನೆಯೊಂದಿಗೆ ಹಾಡಿ ಸೈ ಎನಿಕೊಂಡಿದ್ದಾನೆ.
ಇಡೀ ದೇಶವೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Amrit Mahotsav) ಸಂಭ್ರಮದಲ್ಲಿದ್ದು, ಮನೆ ಮನೆಯ ಮೇಲೆ ತಿರಂಗಾಗಳು ರಾರಾಜಿಸುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಮೂರು ವರ್ಷ ಪ್ರಾಯದ ಓಜಸ್ ಎಂಬ ಬಾಲಕ ಹಾಡಿರುವ ಹಾಡು ವೈರಲ್ ಆಗುತ್ತಿದೆ.
ದೀಪಕ್ ಧಾಬಡೆ ಹಾಗೂ ಸುಷ್ಮಾ ದಾಬಡೆ ದಂಪತಿಯ ಮೂರು ವರ್ಷದ ಮಗ ಓಜಸ್ ಹಾಡು ಹಾಡಿ ಅದಕ್ಕೆ ನಟನೆ ಮಾಡಿ ತನ್ನ ದೇಶಾಭಿಮಾನ ಮೆರೆದಿದ್ದಾನೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿರುವ ದೀಪಕ್ ಸುಷ್ಮಾ ದಂಪತಿ ಮೂಲತಃ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದವಾರಾಗಿದ್ದಾರೆ. ಓಜಸ್ ಹಾಡಿರುವ ಹಾಡು ಮತ್ತು ಆತನ ನಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ.
ಇದನ್ನೂ ಓದಿ | Har Ghar Tiranga Dharwad | ಒಂದೇ ಮಾತರಂನೊಂದಿಗೆ ಮುತಾಲಿಕ್ ಧ್ವಜಾರೋಹಣ