ತುಮಕೂರು: ತುಮಕೂರು ನಗರದ ಟೌನ್ ಹಾಲ್ ಸರ್ಕಲ್‌ನಲ್ಲಿ ನಡೆಯುವ ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮದಲ್ಲಿ ಪ್ರಮುಖ ಉಪನ್ಯಾಸವನ್ನು ಡಾ.ಬಿ.ವಿ.ವಸಂತಕುಮಾರ್ ನೀಡಬೇಕಿತ್ತು.
ಆದರೆ ಕಾರ್ಯಕ್ರಮದಲ್ಲಿ ಪ್ರಮುಖ ಉಪನ್ಯಾಸ ನೀಡಬೇಕಿದ್ದವರ ಹೆಸರನ್ನು ರಾತ್ರೋರಾತ್ರಿ ಬದಲಿಸಿ ರೋಹಿತ್ ಚಕ್ರತೀರ್ಥ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿದೆ. ಈ ರೀತಿ ರಾತ್ರೋರಾತ್ರಿ ಹೆಸರು ಬದಲಾಯಿಸಿದ್ದು ಏತಕ್ಕೆ ಎಂಬುದು ಮಾತ್ರ ತಿಳಿದುಬಂದಿಲ್ಲ.
ಬಿ.ವಿ. ವಸಂತಕುಮಾರ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು. ರೋಹಿತ್ ಚಕ್ರತೀರ್ಥ ಅವರು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರು. ಇತ್ತೀಚಿನ ದಿನಗಳಲ್ಲಿ ವಿವಾದಕ್ಕೊಳಗಾಗಿರುವ ನಡುವೆಯೇ ರೋಹಿತ್ ಚಕ್ರತೀರ್ಥ ಅವರ ಹೆಸರು ನಮೂದಾಗಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮೇ 28 ರಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಆರಂಭ: ವಿ.ಸುನಿಲ್ ಕುಮಾರ್