Site icon Vistara News

Anekal Election Results : ಆನೇಕಲ್​ನಲ್ಲಿ ಶಿವಣ್ಣನ ಸಾಮ್ರಾಜ್ಯ ಮುಂದುವರಿಕೆ

Anekal Election Results Results Shivanna Winner

#image_title

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಿ. ಶಿವಣ್ಣ (134435) ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಹುಲ್ಲಳ್ಳಿ ಶ್ರೀನಿವಾಸ್ (103031) ವಿರುದ್ಧ 31404 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಬಿ ಶಿವಣ್ಣ ಎರಡನೇ ಬಾರಿ ಬಿಜೆಪಿಯ ಎ ನಾರಾಯಣ ಸ್ವಾಮಿಯವರನ್ನು ಸೋಲಿಸಿದ್ದರು. ಇಲ್ಲಿ ಶಿವಣ್ಣ 1,13,894, ಹಾಗೂ ನಾರಾಯಣಸ್ವಾಮಿ 1,05,267 ವೋಟುಗಳನ್ನು ಪಡೆದಿದ್ದರು. ಇಬ್ಬರ ನಡುವಿನ ಗೆಲುವಿನ ಅಂತರ 8627 ಮತಗಳದ್ದಾಗಿತ್ತು.

1952ರಲ್ಲಿ ಈ ಕ್ಷೇತ್ರವು ಸ್ಥಾಪನೆಯಾಯಿತು. 1997ರಿಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಪಾರುಪತ್ಯ ಸ್ಥಾಪನೆಯಾಯಿತು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಜಯ ಸಾಧಿಸಿತು.

ಎಸ್ಸಿ ಮೀಸಲಾತಿ ಕ್ಷೇತ್ರವಾಗಿರುವ ಇಲ್ಲಿ ವಲಸಿಗ ಮತದಾರರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 3,59,546 ಮತದಾರರಿದ್ದು, ಇವರಲ್ಲಿ 1,90,488 ಪುರುಷರು, 1,68,976 ಮಹಿಳೆಯರು, ಇತರೆ 82 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದವರ ಮತ ನಿರ್ಣಾಯಕವಾಗಿದೆ. ಈ ಪೈಕಿ (ಅಂದಾಜು) ಎಸ್‌ಸಿ-ಎಸ್‌ಟಿ – 1,60,000, ಒಕ್ಕಲಿಗ – 83,000, ಅಲ್ಪ ಸಂಖ್ಯಾತ – 34,000, ಕುರುಬ ಮತದಾರರು 16,000 ಹಾಗೂ ಇತರೇ ವರ್ಗದ ಮತದಾರರು 66,000 ಮಂದಿಯಿದ್ದಾರೆ.

Read more: Karnataka Election Results: ಜಯದ ಹಿನ್ನೆಲೆ ಕಾಂಗ್ರೆಸ್‌ಗೆ ಮೋದಿ ಅಭಿನಂದನೆ; ಕರ್ನಾಟಕದ ಜನತೆಗೂ ಧನ್ಯವಾದ

Exit mobile version