Site icon Vistara News

Anganawadi Workers: ಕೊರೆಯುವ ಚಳಿಯಲ್ಲಿ ಮುಂದುವರಿದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Anganawadi Workers protest

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಕಾಲದ ಪ್ರತಿಭಟನೆ ರಾತ್ರಿ ಕೊರೆಯುವ ಚಳಿಯಲ್ಲೂ ಮುಂದುವರಿದಿದೆ.

CITU ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ ರಸ್ತೆ ಮೇಲೆ‌ ಮಲಗಿದ್ದಾರೆ. ಕಾಳಿದಾಸ ರಸ್ತೆ ಹಾಗೂ ಶೇಷಾದ್ರಿ ರಸ್ತೆಯ ಒಂದು ಭಾಗ ಬಂದ್ ಮಾಡಿ ಬಿಡಾರ ಹೂಡಿರುವ ಇವರು, ನಿತ್ಯವಿಧಿಗಳಿಗಾಗಿ ಪರದಾಡುತ್ತಿದ್ದಾರೆ. ಹಲವರು ಬಟ್ಟೆಬರೆ ಸಮೇತ ಮಕ್ಕಳನ್ನೂ ಕರೆತಂದಿದ್ದಾರೆ. ಬೆಂಗಳೂರಿನ ಕೊರೆಯುವ ಚಳಿಯೂ ಅವರನ್ನು ಧೃತಿಗೆಡಿಸುತ್ತಿಲ್ಲ. ಸರ್ಕಾರ ಲಿಖಿತ ರೂಪದ ಆದೇಶ ನೀಡುವವರೆಗೆ ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಹೇಳಿದ್ದಾರೆ.

CITU ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು:

  1. ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶಕ ನೀಡಬೇಕು.
  2. ಅನ್ನ ದಾಸೋಹ ಜೊತೆಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಿಸಬೇಕು.
  3. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು.
  4. ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂಬ ಪದನಾಮದಿಂದ ಕರೆಯಬೇಕು
  5. ಅಂಗನವಾಡಿ ನೌಕರರ ಮೇಲೆ ಹೆಚ್ಚುತ್ತಿರುವ ಶಿಸ್ತುಕ್ರಮ ನಿಲ್ಲಿಸಿ.
  6. ಉಚಿತ ಕೆಲಸ ನಿಲ್ಲಿಸಿ, ಸಮಯಕ್ಕೆ ಸರಿಯಾಗಿ ವೇತನ ಪಾವತಿಸಿ
  7. ನ್ಯಾಯಯುತ ಮುಂಬಡ್ತಿಗಳನ್ನು ಕೊಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು
  8. ದಿನನಿತ್ಯದ ಸಮಸ್ಯೆಗಳಿಗೆ ಇಲಾಖಾಧಿಕಾರಿಗಳು ಸ್ಪಂದಿಸುವ ವಿಧಾನ ಕುಂಠಿತವಾಗುತ್ತಿದೆ
  9. ICDS ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು, ಅನುದಾನವನ್ನು ಹೆಚ್ಚಿಸಬೇಕು.

ಇದನ್ನೂ ಓದಿ : Anganawadi Workers: 2ನೇ ದಿನವೂ ಮುಗಿಯದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ; ಜ.25ಕ್ಕೆ ವಿಧಾನಸೌಧ ಮುತ್ತಿಗೆ

Exit mobile version