Site icon Vistara News

Anna Bhagya : ಶೀಘ್ರದಲ್ಲೇ ಸರ್ಕಾರದಿಂದ ಧನ ಭಾಗ್ಯಕ್ಕೆ ಬ್ರೇಕ್! ಅಕ್ಟೋಬರ್‌ನಿಂದಲೇ 10 ಕೆ.ಜಿ. ಅಕ್ಕಿ

KH Miniyappa talk about Anna Bhagya scheme

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election 2023) ಐದು ಗ್ಯಾರಂಟಿಗಳಲ್ಲಿ (Congress Guarantee Scheme) ಒಂದಾಗಿದ್ದ ಅನ್ನಭಾಗ್ಯ ಯೋಜನೆಯ (Anna Bhagya Scheme) ಅಡಿ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬಳಿಕ 5 ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ವರ್ಗಾವಣೆ ಮಾಡುತ್ತಲಿತ್ತು. ಈಗ ಆ ಧನ ಭಾಗ್ಯಕ್ಕೆ ಬ್ರೇಕ್‌ ಬೀಳಲಿದೆ. ಮುಂದಿನ ಅಕ್ಟೋಬರ್‌ ತಿಂಗಳಿನಿಂದಲೇ ಕೇಂದ್ರ ಸರ್ಕಾರದ ಐದು ಕೆ.ಜಿ. ಅಕ್ಕಿಯ ಜತೆ ರಾಜ್ಯ ಸರ್ಕಾರವೂ 5 ಕೆ.ಜಿ. ಅಕ್ಕಿಯನ್ನು ಸೇರಿಸಿ ವಿತರಣೆ (5 kg Distribution of rice) ಮಾಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ, ಮುಂದಿನ ತಿಂಗಳಿಂದ ಅಕ್ಕಿ ಕೊಡುತ್ತೇವೆ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Bandh : ನಾಳೆ ಬಂದ್‌ ಮಾಡಿದ್ರೆ ಹುಷಾರ್‌ ಎಂದ ಪರಮೇಶ್ವರ್; ಹೋರಾಟ ಹತ್ತಿಕ್ಕಲು ಮುಂದಾಯಿತಾ ಸರ್ಕಾರ?

170 ರೂ. ವರ್ಗಾವಣೆ ಮಾಡುತ್ತಿತ್ತು

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಸರ್ಕಾರದ ಬಳಿ ಹೆಚ್ಚುವರಿ ಅಕ್ಕಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಆಹಾರ ಭದ್ರತೆ ಹಿನ್ನೆಲೆಯಲ್ಲಿ ಕೇಂದ್ರವು ಕರ್ನಾಟಕದ ಅಕ್ಕಿ ಬೇಡಿಕೆಯನ್ನು ತಿರಸ್ಕಾರ ಮಾಡಿತ್ತು. ಕೊನೆಗೆ ಬೇರೆ ರಾಜ್ಯಗಳ ಜತೆಗೆ ಸರ್ಕಾರ ಮಾತುಕತೆ ನಡೆಸಿತ್ತು. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಐದು ಕೆಜಿ ಅಕ್ಕಿ ಕೊಡುವುದರ ಜತೆಗೆ ಉಳಿದ ಐದು ಕೆಜಿಗೆ ಆಹಾರ ಇಲಾಖೆಯಿಂದ ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು.

ರಾಜ್ಯ ಸರ್ಕಾರದಿಂದ ಕೊಡುವ ಐದು ಕೆಜಿ ಬದಲಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ 170 ರೂಪಾಯಿಯನ್ನು ರಾಜ್ಯ ಸರ್ಕಾರದಿಂದ ನೇರವಾಗಿ ಹಾಕಲಾಗುತ್ತಿತ್ತು. ಫಲಾನುಭವಿಗಳ ಖಾತೆಗೆ ಆಗಸ್ಟ್ ತಿಂಗಳ ಹಣ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. 10,251,882 ರೇಷನ್ ಕಾರ್ಡ್‌ಗಳ ಫಲಾನುಭವಿಗಳಿಗೆ ಒಟ್ಟು 598.85 ಕೋಟಿ ರೂಪಾಯಿ ಸಂದಾಯ ಆಗಿದೆ.

ಸೆಪ್ಟೆಂಬರ್‌ ತಿಂಗಳ ಹಣ ವರ್ಗಾವಣೆ ಆಗಲಿದೆ

ಸೆಪ್ಟೆಂಬರ್ ತಿಂಗಳ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಪ್ರಕ್ರಿಯೆಗೆ ಆಹಾರ ಇಲಾಖೆ ಈಗಾಗಲೇ ಚಾಲನೆ ನೀಡಿದೆ ಎನ್ನಲಾಗಿದೆ. ಈಗ ಹಣದ ಬದಲಾಗಿ ಮತ್ತೆ ಅಕ್ಕಿ ಕೊಡುವ ಗಂಭೀರ ಚಿಂತನೆಯನ್ನು ನಡೆಸಲಾಗಿದೆ. ‌

ಇದನ್ನೂ ಓದಿ: Bengaluru Power Cut : ಇಂದಿನಿಂದ ಇಲ್ಲೆಲ್ಲ ‌3 ದಿನ ಇರಲ್ಲ ಕರೆಂಟ್‌; ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ಪವರ್‌ ಕಟ್!

ತೆಲಂಗಾಣದಿಂದ ಅಕ್ಕಿ ಪೂರೈಕೆ?

2.28,000 ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಆಗಬೇಕಾಗಿದೆ. ತೆಲಂಗಾಣ ಸರ್ಕಾರದ ಜತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾತುಕತೆ ನಡೆಸಿದ್ದಾರೆ. ಎಫ್‌ಸಿಐ ದರದಲ್ಲಿ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಚಿಂತನೆ ನಡೆಸಿದೆ. ಅಕ್ಕಿ ಪೂರೈಕೆಗೆ ದರ ಪೈನಲ್ ಆಗಬೇಕಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಸಚಿವ ಮುನಿಯಪ್ಪ ನೀಡಿರುವ ಹೇಳಿಕೆ ಅನ್ವಯ ಈ ಮಾತುಕತೆ ಕೂಡಾ ಫೈನಲ್‌ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದಿನ ತಿಂಗಳು ಪಡಿತರ ಮೂಲಕ ಫಲಾನುಭವಿಗಳು 10 ಕೆ.ಜಿ. ಅಕ್ಕಿಯನ್ನು ಪಡೆಯಲಿದ್ದಾರೆ.

Exit mobile version