Site icon Vistara News

Anna Bhagya: ಇಂದು ಸಂಜೆ ಅನ್ನ ಭಾಗ್ಯ ಯೋಜನೆಗೆ ಚಾಲನೆ, ಫಲಾನುಭವಿ ಖಾತೆಗೆ ಬರಲಿದೆ 170 ರೂ.

Siddaramaiah annabhagya scheme

ಬೆಂಗಳೂರು: ಇಂದು ಸಂಜೆ 5 ಗಂಟೆಗೆ‌ ಅನ್ನ ಭಾಗ್ಯ (Anna Bhagya) ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಇದು ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ 3ನೇ ಗ್ಯಾರಂಟಿ (congress guarantee) ಯೋಜನೆಯಾಗಿದೆ. ಇದರಲ್ಲಿ ಫಲಾನುಭವಿಗಳ ಅಕೌಂಟ್‌ಗೆ 170 ರೂಪಾಯಿ ಹಣ ಬಂದು ಬೀಳಲಿದೆ.

ಸಂಜೆ 5 ಗಂಟೆಗೆ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಿದ್ದು, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಮೂಲಕ ಹಣ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಹಾಗು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಇಬ್ಬರ ಸಮ್ಮುಖದಲ್ಲಿ ಅನ್ನ ಭಾಗ್ಯ ಯೋಜನೆಗೆ (anna bhagya scheme) ಚಾಲನೆ ಸಿಗಲಿದೆ. ಇಂದಿನಿಂದಲೇ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಲಿದ್ದು, 15 ದಿನಗಳೊಳಗೆ ಫಲಾನುಭವಿಗಳ ಅಕೌಂಟ್‌ಗೆ 170 ರೂ. ಜಮೆಯಾಗಲಿದೆ.

ಯೋಜನೆಯ ರೂಪರೇಷೆ ಪ್ರಕಾರ 10 ಕಿಲೋ ಅಕ್ಕಿ ನೀಡಬೇಕಿತ್ತು. ಇದರಲ್ಲಿ 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉಳಿದ 5 ಕಿಲೋ ಅಕ್ಕಿ ಲಭ್ಯವಿಲ್ಲದುದರಿಂದ ಅದರ ಬದಲಿಗೆ 1 ಕೆಜಿಗೆ 34 ರೂಪಾಯಿಯಂತೆ 5 ಕಿಲೋ ಅಕ್ಕಿಗೆ 170 ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಬಜೆಟ್‌ನಲ್ಲೂ ಸಿಎಂ ಸಿದ್ದರಾಮಯ್ಯ ಹಣ ಮೀಸಲಿಟ್ಟಿದ್ದಾರೆ.

ರಾಜ್ಯದಲ್ಲಿ ಸುಮಾರು 1.29 ಕೋಟಿ ಬಿಪಿಎಲ್‌ ಕಾರ್ಡ್‌ಗಳು ಬಳಕೆಯಲ್ಲಿವೆ. ಬಿಪಿಎಲ್ ಕಾರ್ಡ್‌ ಆಧಾರದಲ್ಲಿ 4.41 ಕೋಟಿ ಫಲಾನುಭವಿಗಳು ಈ ಯೋಜನೆಯನ್ನು ಅವಲಂಬಿಸಿದ್ದಾರೆ. ಇದರಲ್ಲಿ ಪ್ರತಿಯೊಬ್ಬನ ಅಕೌಂಟ್‌ಗೆ ಮಾಸಿಕ 170 ರೂ. ಬರಲಿದೆ.

ಇದನ್ನೂ ಓದಿ: Congress Guarantee: ಸೋಮವಾರದಿಂದ ಅನ್ನಭಾಗ್ಯ ಚಾಲನೆ: ನೇರವಾಗಿ ಅಕೌಂಟಿಗೆ ಬಂದು ಬೀಳಲಿದೆ 170 ರೂ.!

Exit mobile version