Site icon Vistara News

Contaminated Water: ಚಿತ್ರದುರ್ಗದಲ್ಲಿ ಮತ್ತೊಂದು ಕಲುಷಿತ ನೀರಿನ ದುರಂತ; ವೃದ್ಧ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Elderly man hospitalised

ಚಿತ್ರದುರ್ಗ: ಕವಾಡಿಗರ ಹಟ್ಟಿ ವಿಷ ಜಲದ ದುರಂತದ ಬೆನ್ನಲ್ಲೇ ಮತ್ತೊಂದು ದುರ್ಘಟನೆ ನಗರದಲ್ಲಿ ನಡೆದಿದೆ. ಕಲುಷಿತ ನೀರು ಕುಡಿದು 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ (Contaminated Water) ಕವಾಡಿಗರಹಟ್ಟಿ ಪಕ್ಕದಲ್ಲಿರುವ ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿ ನಡೆದಿದ್ದು, ಈ ಪೈಕಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿ ಕಲುಷಿತ ನೀರು ಕುಡಿದು ವಾಂತಿ, ಭೇದಿ, ತೀವ್ರ ಸುಸ್ತಿನಿಂದ ಅಸ್ವಸ್ಥರಾದವನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥರಾದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ವಾಂತಿ ಬೇಧಿಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಫಕ್ರುದ್ದೀನ್ ಸಾಬ್ (75) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿಗೆ ಕಲುಷಿತ ನೀರು ಸೇವನೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿ ಹೇಳುತ್ತಿದ್ದಾರೆ.

ತಿಮ್ಮೇಶ (40), ಓಬಳೇಶ್ (8), ಜೋಯಾ (7), ರಂಗನಾಥ್ (7), ಪ್ರಮೋದ(37) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬೆಳಗ್ಗೆಯಿಂದ ಹಲವರು ಆಸ್ಪತ್ರೆಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರದಿದ್ದು, ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Murder Case: ಖಾಸಗಿ ವಿಡಿಯೊ ವಿಚಾರಕ್ಕೆ ಸ್ನೇಹಿತನ ಕೊಲೆಗೈದು ರುಂಡದೊಂದಿಗೆ ಗ್ರಾಮಕ್ಕೆ ಬಂದ!

ಗುರುವಾರ ತಡರಾತ್ರಿ ಆಶ್ರಯ ಬಡಾವಣೆಗೆ ಸೂಳೆಕೆರೆಯಿಂದ ನೀರು ಬಿಡಲಾಗಿತ್ತು. ಆ ನೀರು ಕುಡಿದು ಜನರು ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ. ಕುಡಿಯಲು ಯೋಗ್ಯವಲ್ಲ ಎಂದು ವರದಿ ಇದ್ದರೂ ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ ನೀರು ಕುಡಿದು ನಮಗೆ ಹೀಗೆ ಆಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು

ತುಮಕೂರು: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ (Woman dead) ತುಮಕೂರು ತಾಲ್ಲೂಕಿನ (Tumkur News) ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಊರ್ಡಿಗೆರೆ ಹೋಬಳಿ ತಿಮ್ಮನಾಯಕನಹಳ್ಳಿ ಗ್ರಾಮದ ಸೌಂದರ್ಯ(26) ಅವರು ಇಲ್ಲಿನ ಗೋಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ನಿಜವೆಂದರೆ ಸೌಂದರ್ಯ ಅವರಿಗೆ ಮದುವೆಯಾಗಿದ್ದು ಗಂಡನ ಮನೆಯಲ್ಲೇ ಇದ್ದರು. ಗುರುವಾರ ಅವರು ತಿಮ್ಮನಾಯಕನಹಳ್ಳಿಯ ತವರು ಮನೆಗೆ ಬಂದಿದ್ದರು.

ಈ ವೇಳೆ ಅವರು ಗುರುವಾರ ಮಧ್ಯಾಹ್ನ ಗುರುವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಗೋಕಟ್ಟೆಗೆ ಹೋಗಿದ್ದರು. ಆದರೆ, ಅವರು ಗೋಕಟ್ಟೆಗೆ ಹೋಗಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ.

ಮನೆಯಲ್ಲಿದ್ದ ಸೌಂದರ್ಯ ಸಂಜೆಯವರೆಗೂ ಮರಳಿ ಬಾರದೆ ಇದ್ದರೂ ಯಾರಿಗೂ ಸಂಶಯ ಬರಲಿಲ್ಲ. ಮನೆಯಲ್ಲಿದ್ದವರು ಮನೆಗೆ ವಾಪಸ್ ಬಾರದೇ ಇದ್ದಾಗ ಆಕೆ ಗಂಡನ ಮನೆಗೆ ಹೋಗಿರಬೇಕು ಎಂದು ಭಾವಿಸಿದ್ದರು. ಆದರೆ ಯಾರಿಗೂ ಹೇಳದೆ ಹೋಗಿದ್ದೇಕೆ ಎಂಬ ಸಂಶಯವೊಂದು ಕೊರೆದಿತ್ತು.

ಇದನ್ನೂ ಓದಿ: Road Accident: ಮಾಗಡಿ ರಸ್ತೆಯಲ್ಲಿ ಮಹಿಳೆ ಮೇಲೆ ಹರಿದ ಶಾಲಾ ಬಸ್‌; ತಲೆ ಹೋಳು

ಈ ನಡುವೆ, ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಯಾರೋ ಗೋಕಟ್ಟೆ ಬಳಿ ಹೋದಾಗ ಅಲ್ಲಿ ಮಹಿಳೆಯೊಬ್ಬರ ಶವ ನೀರಿನಲ್ಲಿ ಮುಖ ಕೆಳಗಾಗಿ ಬಿದ್ದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಮೇಲೆತ್ತಿ ನೋಡಿದಾಗ ಸೌಂದರ್ಯ ಅವರು ಪ್ರಾಣ ಕಳೆದುಕೊಂಡಿದ್ದು ಪತ್ತೆಯಾಗಿದೆ. ಇದನ್ನು ನೋಡಿ ತಾಯಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಗೋಕಟ್ಟೆಯಲ್ಲಿ ಒಂದು ದೊಡ್ಡ ಕಲ್ಲು ಇದ್ದ ಅದರ ಕೆಳಗಡೆ ನೀರು ಹರಿಯುತ್ತದೆ. ಬಹುಶಃ ಸೌಂದರ್ಯ ಅವರು ಕಲ್ಲಿನ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದು, ಈ ವೇಳೆ ಕಾಲು ಜಾರಿ ಇಲ್ಲವೇ ಆಯತಪ್ಪಿ ನೀರಿಗೆ ಬಿದ್ದಿರಬೇಕು ಎಂದು ಭಾವಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version