Site icon Vistara News

ಬಿಬಿಎಂಪಿಯಿಂದ ಆಪ್‌ ವಿಜಯ ಯಾತ್ರೆ ಶುರುವಾಗುತ್ತಾ? ಹೊಸ ಕಚೇರಿ ಆರಂಭಿಸಿ ದಿಲೀಪ್‌ ಪಾಂಡೆ ಹೇಳಿದ್ದೇನು?

app party

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯ ನೂತನ ರಾಜ್ಯ ಪ್ರಧಾನ ಕಚೇರಿಯನ್ನು ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ವಕ್ತಾರ ದಿಲೀಪ್‌ ಪಾಂಡೆ ಗುರುವಾರ ಉದ್ಘಾಟನೆ ಮಾಡಿದರು.

ಬೆಂಗಳೂರಿನ ಕುಮಾರ ಪಾರ್ಕ್‌ ವೆಸ್ಟ್‌ನಲ್ಲಿ ತೆರೆಯಲಾಗಿರುವ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲೀಪ್‌ ಪಾಂಡೆ, ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ದೆಹಲಿ, ಪಂಜಾಬ್‌ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಭರ್ಜರಿ ಬಹುಮತದೊಂದಿಗೆ ಎಎಪಿ ಅಧಿಕಾರಕ್ಕೆ ಬರಲಿದೆ. ಬಿಬಿಎಂಪಿ ಚುನಾವಣೆಯಿಂದಲೇ ಎಎಪಿಯ ವಿಜಯಯಾತ್ರೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ | ವಾಜಪೇಯಿ ಕ್ರೀಡಾಂಗಣ ಗ್ಯಾಲರಿ ಕುಸಿತ 40% ಕಮಿಷನ್‌ ಕಾರಣ ಎಂದ ಆಮ್‌ ಆದ್ಮಿ

ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಎಎಪಿ ಸೇರ್ಪಡೆಯು ಜನಾಂದೋಲನವಾಗಲಿದ್ದು, ಇದಕ್ಕೆ ಈ ನೂತನ ಕಚೇರಿ ಸಹಕಾರಿಯಾಗಲಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಎಎಪಿಯನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡಬೇಕು.

ಭ್ರಷ್ಟ ಹಾಗೂ ನಿಷ್ಕ್ರಿಯ ಪಕ್ಷಗಳನ್ನು ಬದಿಗೊತ್ತಿ, ಸ್ವಚ್ಛ ಹಾಗೂ ಜನಪರ ಆಡಳಿತ ನೀಡುವ ಎಎಪಿಯನ್ನು ಅಧಿಕಾರಕ್ಕೆ ತರಲು ಕೈಜೋಡಿಸಬೇಕು ಎಂದು ಹೇಳಿದರು. ಇದೇ ವೇಳೆ ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ಭಾಸ್ಕರ್‌ ರಾವ್‌, ಮುಖ್ಯಮಂತ್ರಿ ಚಂದ್ರು ಮತ್ತಿತರ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ | ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಈಶ್ವರಪ್ಪ ಅವರನ್ನು ಬಂಧಿಸಿ ಎಂದ AAP

Exit mobile version