ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ತಂಬಾಕಿನಿಂದ ಮಕ್ಕಳ ರಕ್ಷಣೆಯ ಅಂಶವನ್ನು ಸೇರ್ಪಡೆ ಮಾಡಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ (Karnataka Election) ತಂಬಾಕು ಮುಕ್ತ ಕರ್ನಾಟಕಕ್ಕಾಗಿ ಒಕ್ಕೂಟ (ಸಿಎಫ್‌ಟಿಎಫ್‌ಕೆ), ತಂಬಾಕು ನಿಯಂತ್ರಣ ಸಂಸ್ಥೆ ಮತ್ತು ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಯ ಸಂಘ (ಕೆಎಎಂಎಸ್), ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿರುವ ಖಾಸಗಿ ಶಾಲೆಗಳ ಜಾಲ ಮನವಿ ಮಾಡಿದೆ.
ಈ ಬಗ್ಗೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್.ಜೆ.ಚಂದರ್ ಮತ್ತು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ʼತಂಬಾಕಿನಿಂದ ಮಕ್ಕಳ ರಕ್ಷಣೆ ಅಂಶʼ ಸೇರ್ಪಡೆ ಮಾಡುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ.
ತಂಬಾಕು ಸೇವನೆಯಿಂದ ಮಾರಕ ಕ್ಯಾನ್ಸರ್ ಸೇರಿ ವಿವಿಧ ರೋಗಗಳು ಬರುತ್ತವೆ. ತಂಬಾಕು ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಹದಿಹರೆಯದ ವಯಸ್ಸಿನಲ್ಲಿ ತಂಬಾಕು ಸೇವನೆಯಿಂದ ದೀರ್ಘಾವಧಿಯ ನಂತರ ಮನೋವೈದ್ಯಕೀಯ ಅಸ್ವಸ್ಥತೆ ಮತ್ತು ಅರಿವಿನ ದುರ್ಬಲತೆ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯಿಂದ ಭಾರತದ ಭರವಸೆಯಾಗಿರುವ ಮಕ್ಕಳನ್ನು ರಕ್ಷಿಸಲು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ತಂಬಾಕಿನಿಂದ ಮಕ್ಕಳ ರಕ್ಷಣೆ ಎಂಬ ಅಂಶವನ್ನು ಸೇರ್ಪಡೆ ಮಾಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ | Inside Story: ವಿಜಯೇಂದ್ರ ವಿಷಯದಲ್ಲಿ ಯಡಿಯೂರಪ್ಪ ಹೈಅಲರ್ಟ್: ಮೂರನೇ ಬಾರಿಗೆ ಮುಗ್ಗರಿಸೋದು ಬೇಡವೆಂಬ ಮುನ್ನೆಚ್ಚರಿಕೆ
ಅಸ್ತಿತ್ವದಲ್ಲಿರುವ ತಂಬಾಕು ನಿಯಂತ್ರಣ ಕಾನೂನಿನಲ್ಲಿ ಅನೇಕ ನಿಬಂಧನೆಗಳಿವೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ತಿದ್ದುಪಡಿ ಮತ್ತು ಬಲಪಡಿಸುವ ಅಗತ್ಯವಿದೆ. ಆದರೆ ತಂಬಾಕು ಕಂಪನಿಗಳಿಂದ ಜಾರಿ ಮತ್ತು ಅನುಸರಣೆಯಲ್ಲಿ ಲೋಪಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ವಯಸ್ಕರು ಧೂಮಪಾನ ಮಾಡುವುದರಿಂದ ಮಕ್ಕಳು ಕೂಡ ಧೂಮಪಾನವನ್ನು ಸಾಮಾಜಿಕವಾಗಿ ಸ್ವೀಕಾರಾರ್ಹ ನಡವಳಿಕೆ ಎಂದು ಭಾವಿಸುತ್ತಾರೆ. ಸೆಕ್ಷನ್-4 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಮಕ್ಕಳ ಆಲೋಚನೆಯನ್ನು ಬದಲಾಯಿಸಬಹುದು ಎಂದು ತಿಳಿಸಿದ್ದಾರೆ.
ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, “ತಂಬಾಕು ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಆದರೆ ತಂಬಾಕು ಕಂಪನಿಗಳು ವಿವಿಧ ರೀತಿಯ ಜಾಹೀರಾತುಗಳೊಂದಿಗೆ ತೊಡಗಿಸಿಕೊಂಡಿವೆ. ಸೆಲೆಬ್ರಿಟಿಗಳು ತಂಬಾಕು ಜಾಹೀರಾತುಗಳಲ್ಲಿ ಕಾಣುವುದರಿಂದ ಮಕ್ಕಳು ತಂಬಾಕು ಬಗ್ಗೆ ಆಕರ್ಷಿತರಾಗುತ್ತಾರೆ. ಇದು ತಂಬಾಕು ಕಂಪನಿಗಳು ಮಕ್ಕಳನ್ನು ಸೆಳೆಯಲು ನಿಯೋಜಿಸುವ ಇನ್ನೊಂದು ಮಾರ್ಗವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಿಎಫ್‌ಟಿಎಫ್‌ಕೆ ಸಂಚಾಲಕರಾದ ಎಸ್.ಜೆ.ಚಂದರ್ ಮಾತನಾಡಿ, ತಂಬಾಕು ಕಂಪನಿಗಳು ಶೇ.85 ಚಿತ್ರಾತ್ಮಕ ಎಚ್ಚರಿಕೆಯನ್ನು ಹಿಮ್ಮೆಟ್ಟಿಸುವ ಹೋರಾಟದಲ್ಲಿ ಸೋತರೂ, ಅವರು ಉದ್ದೇಶಪೂರ್ವಕವಾಗಿ ಸಿಗರೇಟ್ ಮತ್ತು ಚೂಯಿಂಗ್ ತಂಬಾಕು ಸ್ಯಾಚೆಟ್‌ನಲ್ಲಿ ಎಚ್ಚರಿಕೆಯ ಚಿತ್ರಗಳನ್ನು ಮಸುಕುಗೊಳಿಸುತ್ತಿವೆ. ಇದು ಗಂಭೀರ ಆರೋಗ್ಯ ಎಚ್ಚರಿಕೆಯಿಂದ ಮಕ್ಕಳನ್ನು ದಾರಿ ತಪ್ಪಿಸುವ ಮಾರ್ಗವಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ | BJP Karnataka: ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಕಾಂಗ್ರೆಸ್ ಸೃಷ್ಟಿ ಎಂದ ಬಿಜೆಪಿ: ಪೊಲೀಸ್ ದೂರು ದಾಖಲು
ಹಿರಿಯ ವಿಕಿರಣ ಆಂಕೊಲಾಜಿಸ್ಟ್ ಮತ್ತು ತಂಬಾಕು ಮುಕ್ತ ಕರ್ನಾಟಕದ ಒಕ್ಕೂಟದ ಅಧ್ಯಕ್ಷ ಡಾ. ರಮೇಶ್ ಬಿಳಿಮಗ ಮಾತನಾಡಿ, “ತಂಬಾಕು ಒಳಗೊಂಡಿರುವ 7000ಕ್ಕೂ ಹೆಚ್ಚು ವಿಷಕಾರಿ ಪದಾರ್ಥಗಳಲ್ಲಿ ಒಂದಾದ ನಿಕೋಟಿನ್, ಕೊಕೇನ್ ಅಥವಾ ಹೆರಾಯಿನ್‌ನಂತೆಯೇ ವಿಷಕಾರಿ ಮತ್ತು ವ್ಯಸನಕಾರಿ ಮತ್ತಷ್ಟು ನಿಕೋಟಿನ್ ಹದಿಹರೆಯದ ವಯಸ್ಸಿನ ತಂಬಾಕು ಮೆದುಳಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.