ಕರ್ನಾಟಕ: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇಮಕ ಆಗಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಘವೇಂದ್ರ ಔರಾದ್ಕರ್ ನೇಮಕಗೊಳಿಸಲು ಆದೇಶ ನೀಡಲಾಗಿದೆ. ಈ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತಾದರೂ ಇತ್ತೀಚಿನ ವರ್ಷಗಳಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳೇ ಹೆಚ್ಚಾಗಿ ನೇಮಕ ಆಗುತ್ತಿದ್ದರು. ಇದೀಗ ನಿವೃತ್ತ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಮುಂದಿನ 4 ವರ್ಷ ಅಥವಾ ತಮ್ಮ 67 ವರ್ಷ ಪೂರ್ಣಗೊಳ್ಳುವವರೆಗೂ ಸೇವೆಯನ್ನು ಸಲ್ಲಿಸಲಿದ್ದಾರೆ. ಕೇಂದ್ರ ಸರ್ಕಾರದ ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ರಾಜ್ಯಪೊಲೀಸ್ ಸಿಬ್ಬಂದಿಯ ವೇತನ ಹಾಗೂ ಬಡ್ತಿ ಕುರಿತಂತೆ ಔರಾದ್ಕರ್ ವರಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದು ಔರಾದ್ಕರ್ ವರದಿ ಎಂದೇ ಪ್ರಸಿದ್ಧವಾಗಿದೆ. ಈ ವರದಿ ಜಾರಿಯಿಂದ ಪೊಲೀಸ್ ಸಿಬ್ಬಂದಿಗೆ ಉತ್ತಮ ವೇತನ ಹಾಗೂ ಬಡ್ತಿ ಸಿಗುತ್ತದೆ ಎಂಬ ವಾದವಿದ್ದು, ಈಗಾಗಲೆ ಸರ್ಕಾರ ಜಾರಿ ಆರಂಭಿಸಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಸಹ ಆಗಿದ್ದ ಔರಾದ್ಕರ್ 2020ರ ಡಿಸೆಂಬರ್ 31ರಂದು ನಿವೃತ್ತರಾಗಿದ್ದರು.
ಇದನ್ನೂ ಓದಿ: ಸಿಡಿಎಸ್ ನೇಮಕಾತಿ ನಿಯಮ ಬದಲಾವಣೆ, ಸೇನಾಪಡೆಗಳ ನಿವೃತ್ತ ಮುಖ್ಯಸ್ಥರಿಗೆ ಚಾನ್ಸಿಲ್ಲ