Site icon Vistara News

ಅರಸೀಕೆರೆ ಗಣಪತಿ ವಿಸರ್ಜನೆ ವೇಳೆ ರಾಜಕೀಯ ಗುಂಪು ಘರ್ಷಣೆ; ಪೊಲೀಸರಿಂದ ಲಾಠಿ ಚಾರ್ಜ್‌

ಅರಸೀಕೆರೆ

ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮ ರಾಜಕೀಯ ಗದ್ದಲದ ತಾಣವಾಗಿ ಬದಲಾಗಿತ್ತು. ಶಾಸಕ ಶಿವಲಿಂಗೇಗೌಡ ಮತ್ತು ಬಿಜೆಪಿ ನಾಯಕ ಎನ್.ಆರ್ ಸಂತೋಷ್ ಗುಂಪುಗಳ ನಡುವೆ ಗಣಪತಿ ಮುಂದೆ ತೆರಳುವ ವಿಷಯವಾಗಿ ಘರ್ಷಣೆ ಏರ್ಪಟ್ಟಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದರು.

ಅರಸೀಕೆರೆ ಕೃಷಿ ಮಾರುಕಟ್ಟೆ ಬಳಿ ಶನಿವಾರ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಗಣಪತಿ ಮೂರ್ತಿಯ ಮುಂದೆ ತೆರಳಲು ಎರಡೂ ಗುಂಪುಗಳ ಯುವಕರು ಪಟ್ಟು ಹಿಡಿದರು. ನಾವು ಮುಂದೆ ಹೋಗಬೇಕು ಎಂದು ಎರಡೂ ಗುಂಪುಗಳ ಯುವಕರು ಘರ್ಷಣೆಗಿಳಿದಿದ್ದರಿಂದ ಪರಿಸ್ಥಿತಿಯನ್ನು ಶಾಂತಗೊಳಿಸಲು ಪೊಲೀಸರು ಲಾಠಿ ಬೀಸಿದರು.

ಗಣಪತಿ ವಿಸರ್ಜನೆ ಕಾರ್ಯಕ್ರಮವನ್ನು ಎರಡು ಗುಂಪುಗಳ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಎರಡೂ ಬಣಗಳನ್ನು ನಿಯಂತ್ರಿಸಲು ಪೊಲೀಸರ ಹರ ಸಾಹಸಪಟ್ಟರು. ನಂತರ ಖಾಕಿ ಸರ್ಪಗಾವಲಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.

ಇದನ್ನೂ ಓದಿ | ಸಚಿವರಿಂದಲೇ ಸರ್ಕಾರಕ್ಕೆ ಸಂಕಷ್ಟ: ಪೊಲೀಸ್‌ ಇಲಾಖೆ ಭ್ರಷ್ಟಾಚಾರ ವಿಷಯ ಹೈಲೈಟ್‌ ಮಾಡಿದ ಕಾಂಗ್ರೆಸ್‌

Exit mobile version