Site icon Vistara News

Vistara News Launch | ಕಲ್ಲಿನಲ್ಲೇ ಕಾವ್ಯ ಅರಳಿಸುವ ಮೈಸೂರಿನ ಕಾಯಕಯೋಗಿ ರಾಜ

Vistara News Launch

ಮೈಸೂರಿನ ಕಲಾವಿದ ಶ್ರೀ ಅರುಣ್ ಯೋಗಿರಾಜ್ ಅವರ ಕಿರು ಪರಿಚಯ ಇಲ್ಲಿದೆ;
ಕಲ್ಲಿನಲ್ಲೇ ಕಾವ್ಯ ಬರೆಯುವ, ಅದನ್ನು ಹೂವಾಗಿ ಅರಳಿಸುವ, ದೇವರ ರೂಪ ನೀಡುವ ಪ್ರತಿಭಾವಂತ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್. ಕೇದಾರನಾಥದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರು ದೇಹ ತ್ಯಜಿಸಿದ ಜಾಗದಲ್ಲಿ ಅವರ ಎರಡಾಳೆತ್ತರದ ಆಕರ್ಷಕ ಪ್ರತಿಮೆ ನಿರ್ಮಿಸಿರುವ ಶ್ರೀ ಅರುಣ್ ಯೋಗಿರಾಜ್(Vistara News Launch) ಈಗ ದೇಶಾದ್ಯಂತ ಜನಪ್ರಿಯ ಶಿಲ್ಪಿ.

ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ 30 ಅಡಿ ಎತ್ತರದ ಸುಭಾಶ್ ಚಂದ್ರ ಬೋಸ್ ಪ್ರತಿಮೆಯ ಶಿಲ್ಪಿಯೂ ಇವರೇ. ಶಿಲ್ಪ ಕಲಾ ಸಾಧಕರ ಕುಟುಂಬದಿಂದ ಬಂದಿರುವ ಶ್ರೀ ಅರುಣ್‌ ಯೋಗಿರಾಜ್‌ ಅವರು ಕುಟುಂಬದಲ್ಲಿ ಐದನೇ ತಲೆಮಾರಿನ ಶಿಲ್ಪಿ. ಮೈಸೂರು ರಾಜಮನೆತನದಿಂದ ಗೌರವಿಸಲ್ಪಟ್ಟ ಕುಟುಂಬವಿದು. ಈ ಕುಟುಂಬ ನೂರಾರು ವಿಗ್ರಹ ಪ್ರತಿಮೆಗಳನ್ನು ನಿರ್ಮಿಸಿದೆ.

ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು ಅರುಣ್ ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ಬೆನ್ನು ತಟ್ಟಿದ್ದಾರೆ. ಕೇಂದ್ರ ಸರ್ಕಾರದ ಯಂಗ್ ಟ್ಯಾಲೆಂಟ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಅದ್ಭುತ ಶಿಲ್ಪವೈಭವಕ್ಕೆ ಹೆಸರಾದ ಕರುನಾಡಿನ ಹೆಮ್ಮಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್‌ ಸಿದ್ಧತೆಗೆ ಮೆಚ್ಚುಗೆ

Exit mobile version