ಹುಬ್ಬಳ್ಳಿ: ವಿಷ ಸೇವಿಸಿ ಎಎಸ್ಐ ಆತ್ಮಹತ್ಯೆ (ASI Death) ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ (Hubballi News) ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಘಟನೆ ನಡೆದಿದೆ. ಗುಡಗೇರಿ ಪೊಲೀಸ್ ಠಾಣೆಯ ಎಎಸ್‌ಐ ಬಸವರಾಜ ಪಾಯಣ್ಣವರ (54) ಮೃತ ದುರ್ದೈವಿ.
ರಾತ್ರಿಪಾಳಿ ಕೆಲಸ ಮುಗಿಸಿ ವಸತಿ ಗೃಹಕ್ಕೆ ಹೋಗಿದ್ದ ಬಸವರಾಜ, ವಸತಿ ಗೃಹದ ಆವರಣದ ದೇಗುಲದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಎಎಸ್‌ಐ ಬಸವರಾಜ, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗುಡಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗುಡಗೇರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Drowned In Canal : ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!
ವಿವಾಹಿತೆ Honey trapನಲ್ಲಿ ನಿವೃತ್ತ ಯೋಧ; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶಂಕೆ
ಮಡಿಕೇರಿ: ನಿವೃತ್ತ ಸೇನಾ ಯೋಧನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ನಗರದ ಉಕ್ಕುಡ ನಿವಾಸಿ ಸಂದೇಶ್ (40) ಮೃತ ದುರ್ದೈವಿ. ವಿವಾಹಿತ ಮಹಿಳೆಯೊಬ್ಬಳ ಸಂಗಕ್ಕೆ ಬಿದ್ದು ಆಕೆಯಿಂದಲೇ ಹನಿಟ್ರ್ಯಾಪ್‌ಗೆ ಒಳಗಾಗಿ ಸಂದೇಶ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ.
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಒಂದು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಸಂದೇಶ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಡಿಕೇರಿ ನಗರದ ಗಣಪತಿ ಬೀದಿಯ ವಿವಾಹಿತ ಮಹಿಳೆ ಟಾರ್ಚರ್ ನೀಡುತ್ತಿದ್ದಾಳೆ. ಆಕೆಯ ಕಾಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸಂದೇಶ್ ಪತ್ನಿ ನೀಡಿದ ದೂರಿನನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಡಿದ ಪೊಲೀಸರಿಗೆ ಸಂದೇಶ್ ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಹಿನ್ನಲೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದೆಲ್ಲದರ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂದೇಶ್ ಪತ್ನಿ ಯಶೋಧ, ನನ್ನ ಪತಿಗೆ ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆಯೊಬ್ಬಳು ಫ್ರೆಂಡ್ ಅಂತ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆಕೆ ನನ್ನ ಪತಿಯನ್ನು ಮರುಳು ಮಾಡಿ ಅವರೊಂದಿಗೆ ಸುತ್ತಾಡಿ ಕೊನೆಗೆ ಅವರನ್ನು ಬ್ಲಾಕ್‌ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ ಅಂತ ಆರೋಪಿಸಿದ್ದಾರೆ.
ಇದೇ ಸಂದೇಶ್ ಹಾಗೂ ವಿವಾಹಿತ ಮಹಿಳೆ ದೇಶದ ಹಲವೆಡೆ ಸುತ್ತಾಡಿರುವ ಫೋಟೋಗಳು ಲಭ್ಯವಾಗಿದ್ದು, ಸಂದೇಶ್ ಪತ್ನಿಯ ಜೊತೆಗೂ ಆಕೆ ಫ್ರೆಂಡ್ ಅಂತ ಪರಿಚಯ ಮಾಡಿಕೊಂಡಿದ್ದಳಂತೆ. ಕೊನೆ ಕೊನೆಗೆ ಸಂದೇಶ್ ಪತ್ನಿಗೆ ವಿಚಾರ ತಿಳಿದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಅನ್ನುವ ಮಾಹಿತಿ ಕೂಡ ಲಭ್ಯವಾಗಿದೆ.
ಒಟ್ಟಿನಲ್ಲಿ ಪರಸ್ತ್ರಿ ಸಂಗ ಮಾಡಿ ಆಕೆಯಿಂದಲೇ ಟಾರ್ಚರ್‌ಗೆ ಒಳಗಾಗಿ ನಿವೃತ್ತ ಯೋಧ ಪ್ರಾಣವನ್ನಂತೂ ಕಳೆದುಕೊಳ್ಳುವಂತಾಗಿದೆ. ಅದೇನೇ ಆದ್ರೂ ಪೊಲೀಸ್ ತನಿಖೆಯ ಬಳಿಕ ಇಡೀ ಪ್ರಕರಣಕ್ಕೆ ಒಂದು ಕ್ಲಾರಿಟಿ ಸಿಗಲಿದೆ.
ಡೆತ್ ನೋಟ್‌ನಲ್ಲಿ ಏನಿದೆ?
ವಿವಾಹಿತ ಮಹಿಳೆ, ಆಕೆಯ ತಾಯಿ ಮತ್ತು ತಂಗಿ ಸೇರಿಕೊಂಡು ನನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಮೂವರು ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.
ಮಹಿಳೆಯ ಅನೈತಿಕ ಸಂಬಂಧಗಳು ನನಗೆ ತಿಳಿದುಬಂದ ಬಳಿಕ ಅವರೆಲ್ಲರೂ ನನ್ನನ್ನು ಫಾಲೋ ಮಾಡಲು, ಮೆಂಟಲ್ ಟಾರ್ಚರ್ ನೀಡಲು ಶುರು ಮಾಡಿದರು ಎಂದು ರೆಸಾರ್ಟ್ ಒಂದರ ಮಾಲೀಕ, ಒಬ್ಬ ಪೊಲೀಸ್ ಹಾಗೂ ಇಬ್ಬರು ಇತರರ ಹೆಸರನ್ನು ಸಂದೇಶ್ ಉಲ್ಲೇಖಿಸಿದ್ದಾರೆ. ನನ್ನ ಒಂದು ಕಾರು ಮತ್ತು ಎಲ್ಲ ಡಾಕ್ಯುಮೆಂಟ್ಸ್ ಆಕೆಯ ಮನೆಯಲ್ಲಿದೆ ಎಂದು ಸಂದೇಶ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ