ಬೆಳಗಾವಿ, ಕರ್ನಾಟಕ: ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ(Karnataka Election Voting). ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಕೇಸರಿ ಶಾಲು ಧರಿಸಿ ಪ್ರಚಾರ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ದೇವಲತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ(Karnataka Election 2023).
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಕೇಸರಿ ಶಾಲು ಧರಿಸಿ ನಿಂತು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಈ ಕುರಿತು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಪ್ರಶ್ನಿಸಿದ್ದಾರೆ. ಹಿಂದೂ ಬಗ್ಗೆ ನಮಗೂ ಗೌರವಿ ಇದೆ. ಗ್ಯಾಸ್ ಬೆಲೆ 1200 ರೂ. ಹೆಚ್ಚಾಗಿದೆ ಅದರ ಬಗ್ಗೆಯೂ ಗೌರವ ಇದೆ. ಆ 1200 ರೂ. ಕಾಣುತ್ತಿಲ್ಲ, ಧರ್ಮ ನಿಮಗೆ ಕಾಣುತ್ತಿದೆ ಎಂದು ಡಾ. ಅಂಜಲಿ ನಿಂಬಾಳ್ಕರ್ ಅವರು ಹೇಳಿದ್ದಾರೆ.
ಕೊರಳಲ್ಲಿದ್ದ ತಾಳಿಯನ್ನು ತೋರಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರು, ಧರ್ಮದ ಬಗ್ಗೆ ನಿಮಗಿಂತ (ಬಿಜೆಪಿ) ಜಾಸ್ತಿ ನಮಗೆ ಅಭಿಮಾನ ಇದೆ. ನಿಮ್ಮ ಜೇಬಿನಲ್ಲಿ ಏನು ಇಟ್ಟುಕೊಂಡಿದ್ದೀರಾ ಇದು ಧರ್ಮನಾ ಎಂದು ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದಾರೆ.
ಧರ್ಮದ ಬಗ್ಗೆ ನಮಗೆ ಏನು ಪಾಠ ಹೇಳುತ್ತಿದ್ದೀರಾ? ಒಬ್ಬ ಹೆಣ್ಣು ಮಗಳ ಮೇಲೆ ಮುಗಿ ಬೀಳುತ್ತಿದ್ದೀರಾ ಇದು ಧರ್ಮನಾ ಎಂದು ಪ್ರಶ್ನೆ ಮಾಡಿದ್ದಾರೆ. ಜಾಸ್ತಿ ಮಾತನಾಡಿದ್ರೆ ನನಗೂ ಮಾತನಾಡಲು ಬರುತ್ತೆ. ನನಗೆ ದಬಾಯಿಸಬೇಡ ಗ್ಯಾಸ್ ಬೆಲೆ ಎಷ್ಟಾಗಿದೆ ಎಂದು ನಿಮ್ಮ ಹೆಂಡತಿಯನ್ನು ಹೋಗಿ ಕೇಳಿ ಎಂದು ಡಾ. ಅಂಜಲಿ ನಿಂಬಾಳ್ಕರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದುರೇ ಸ್ವತಂತ್ರ ಅಭ್ಯರ್ಥಿ ಮೇಲೆ ಹಲ್ಲೆ, ಕಲಬುರಗಿಯಲ್ಲೂ ಗಲಾಟೆ
ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ಮಧ್ಯೆ ವಾಗ್ವಾದ ಡಾ.ಅಂಜಲಿ ನಿಂಬಾಳ್ಕರ್ ತೆರಳುತ್ತಿದ್ದಂತೆ ಜೈ ಶ್ರೀರಾಮ, ಭಜರಂಗಿ ಭಜರಂಗಿ ಎಂದು ಘೋಷಣೆ ಕೂಗಿದ್ದಾರೆ.