ಬೆಂಗಳೂರು: ಕ್ಲಾಸ್ ರೂಮ್‌ನಲ್ಲಿ ಉಪನ್ಯಾಸಕರ ಮುಂದೆಯೇ ಯುವಕನೊಬ್ಬ ಯುವತಿಗೆ ಪ್ರೇಮ ನಿವೇದನೆ (love propose) ಮಾಡಿದ್ದಾನೆ. ಮಾತ್ರವಲ್ಲದೆ ಯುವತಿಗೆ ನೀನು ನನ್ನ ಪ್ರೀತಿಸಬೇಕು. ಇಲ್ಲದಿದ್ದರೆ ನಿನ್ನ ಸಾಯಿಸಿಬಿಡುತ್ತೇನೆ ಹುಷಾರ್ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾನೆ. ಈತನ ಕಾಟಕ್ಕೆ ಬೇಸತ್ತ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಚಿತ್ತೂರು ಮೂಲದ ಪವನ್ ಕುಮಾರ್ ಎಂಬಾತ ನಟ ವಿಜಯ್ ದೇವರಕೊಂಡ ಅಭಿಯಾನದ ಅರ್ಜುನ್ ರೆಡ್ಡಿ ಸಿನಿಮಾದಂತೆ ಕ್ಲಾಸ್ ರೂಮಿಗೆ ಹೋಗಿ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಕಾಲೇಜಿನ ಕ್ಲಾಸ್ ರೂಮ್‌ಗೆ ತೆರಳಿ ಉಪನ್ಯಾಸಕರ ಮುಂದೆಯೇ ಯುವತಿಗೆ ʻಇವಳು ನನ್ನ ಲವರ್ʼ ಎಂದು ಹೇಳಿದ್ದಾನೆ.
ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾಲೇಜಿನಲ್ಲಿ ಯುವತಿ ಬಿ.ಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈಕೆಗೆ ಈ ಪವನ್ ಕುಮಾರ್ ಕಿರುಕುಳ ನೀಡುತ್ತಿದ್ದಾನೆ. ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜಿಗೆ ಹೋಗಿ, ಉಪನ್ಯಾಸಕರ ಎದುರೇ ಇವಳು ನನ್ನ ಲವರ್ ಎಂದು ಹೇಳಿ ಹೋಗಿದ್ದಾನೆ. ನೀನು ನನ್ನ ಪ್ರೀತಿಸಬೇಕು, ಇಲ್ಲದಿದ್ದರೆ ಕೊಲ್ಲುವುದಾಗಿ ಹೆದರಿಸಿದ್ದಾನೆ.
ಯುವಕನ ಕಿರುಕುಳ ತಾಳಲಾರದೆ ಯುವತಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಚಿತ್ತೂರಿನಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಿದ್ದಾರೆ. ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ