ಮಂಡ್ಯ: ಟಿಕೆಟ್ ಕೊಡಿ ಅಜ್ಜಿ ಎಂದು ಕೇಳಿದ್ದಕ್ಕೆ ಸಿಟ್ಟಿಗೆದ್ದ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕಿ (Lady Conductor) ವಿದ್ಯಾರ್ಥಿನಿಗೆ ಕಪಾಳಮೋಕ್ಷ (Assault case) ಮಾಡಿದ್ದಾರೆ. ಈ ಘಟನೆ ಮಂಡ್ಯ– ಭಾರತೀನಗರ ಬಸ್ನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಕಾವ್ಯಶ್ರೀ ಎಂಬಾಕೆ ಕೆ.ಎಂ ದೊಡ್ಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದಳು. ಈ ವೇಳೆ ಟಿಕೆಟ್ ಪಡೆಯುವಾಗ ಕಂಡಕ್ಟರ್ ಸೌಭಾಗ್ಯರಿಗೆ ಅಜ್ಜಿ ಟಿಕೆಟ್ ಕೊಡಿ ಎಂದಿದ್ದಾರೆ. ಇದರಿಂದ ಕೋಪಗೊಂಡ ಸೌಭಾಗ್ಯ, ನಾನು ನಿನಗೆ ಅಜ್ಜಿಯಂತೆ ಕಾಣ್ತಿನಾ ಎಂದು ವಿದ್ಯಾರ್ಥಿನಿ ಜತೆಗೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಸೌಭಾಗ್ಯ, ಕಾವ್ಯಶ್ರೀ ಕೆನ್ನೆಗೆ ಬಾರಿಸಿದ್ದಾರೆ.
ಹೀಗಾಗಿ ಕೂಡಲೇ ಸ್ಥಳದಲ್ಲೇ ಬಸ್ ನಿಲ್ಲಿಸುವಂತೆ ಹೇಳಿ ನಿರ್ವಾಹಕಿ ಸೌಭಾಗ್ಯ ವಿರುದ್ಧ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲೇಡಿ ಕಂಡಕ್ಟರ್ ನಡವಳಿಕೆಗೆ ಸಿಟ್ಟಿಗೆದ್ದ ಕುಟುಂಬಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ. ಸದ್ಯ ನಿರ್ವಾಹಕಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Road Accident : ಅತಿವೇಗ ತಂದ ಆಪತ್ತು; ಎದೆ ಝಲ್ ಎನಿಸುವ ಟಿಪ್ಪರ್ ಲಾರಿ- ಕಾರು ಆ್ಯಕ್ಸಿಡೆಂಟ್
Assault Case : ಜಸ್ಟ್ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿದ ಕಂಡಕ್ಟರ್!
ಹಿಂದೊಮ್ಮೆ ತಾಳ್ಮೆ ಕಳೆದುಕೊಂಡ ಬಸ್ ಕಂಡಕ್ಟರ್ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿರುವ (Assault Case) ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿತ್ತು. ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ್ದರು. ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್ ಬರುವಾಗ ಈ ಘಟನೆ ನಡೆದಿತ್ತು.
ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್ವೊಂದು ತೆರಳುತಿತ್ತು. ರಶ್ ಇದ್ದ ಬಸ್ಸಿನಲ್ಲಿ ಕಂಡಕ್ಟರ್ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್ ಕಂಡಕ್ಟರ್ಗೆ ಟಚ್ ಆಗಿದೆ. ಆಗ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದರು. ಕಂಡಕ್ಟರ್ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಬಸ್ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಳು.
ಪಾಲಕರ ಪ್ರತಿಭಟನೆ
ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ವರ್ತನೆಗೆ ಕಿಡಿಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿತ್ತು.
ಇದು ಫ್ರೀ ಬಸ್ ಎಫೆಕ್ಟಾ?
ಕರ್ನಾಟಕದಲ್ಲಿ ಸರ್ಕಾರಿ ಬಸ್ಗಳಲ್ಲಿ (Government bus) ಮಹಿಳೆಯರ ಉಚಿತ ಪ್ರಯಾಣಕ್ಕೆ (Free bus service) ಅವಕಾಶವಿರುವ ಶಕ್ತಿ ಯೋಜನೆ (Shakti scheme) ಜಾರಿಗೆ ಬಂದ ಬಳಿಕ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂಬಂಧವೇ ಹದಗೆಟ್ಟು ಹೋಗಿದೆ. ಜನದಟ್ಟಣೆ, ಒತ್ತಡಗಳಿಂದ ಕಂಗೆಟ್ಟು ಹೋಗಿರುವ ಬಸ್ ಸಿಬ್ಬಂದಿ (KSRTC bus staff) ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಕೇವಲ ಅವರಷ್ಟೇ ಅಲ್ಲ, ಬಸ್ನಲ್ಲಿ ಸೀಟ್ಗಾಗಿ ಪ್ರಯಾಣಿಕರು ಪರಸ್ಪರ ಕಿತ್ತಾಡಿಕೊಂಡು, ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದು ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ