Site icon Vistara News

Assault Case : ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

assault case

ಕಲಬುರಗಿ/ರಾಮನಗರ/ಮಂಗಳೂರು: ಇತ್ತೀಚೆಗೆ ಗುಂಪು ಘರ್ಷಣೆಗಳು ಹೆಚ್ಚಾಗುತ್ತಿದ್ದು, ಕೆಲವೆಡೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಕಲಬುರಗಿಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯೇ (Assault Case) ನಡೆದಿದೆ. ಪರಿಣಾಮ ಹರಕಂಚಿ ಗ್ರಾಮದಲ್ಲಿ ಪ್ರಕ್ಷುಬದ್ಧ ವಾತಾವರಣ ನಿರ್ಮಾಣವಾಗಿದೆ.

ಘಟನೆಯಲ್ಲಿ ಜಗದೇವಪ್ಪ ಶಂಕರ ಕ್ವಾಟನೂರ (45) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಹರಕಂಚಿ ಗ್ರಾಮದ ರೌಡಿಶೀಟರ್‌ ಶಂಕರ ಪರಮೇಶ್ವರ ನಾಯ್ಕೋಡಿ ಹಾಗೂ ಮಾಣಿಕಪ್ಪ ಶಾಮರಾವ ನಾಯಕೋಡಿ ಗುಂಪಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೆಹಬೂಬ ಸುಬಾನಿ ಸಂದಲ ನಡೆಯುತ್ತಿದ್ದ ವೇಳೆ ಜಗದೇವಪ್ಪ ಶಂಕರ ಸಹಚರರು ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುಂಪು ಘರ್ಷಣೆ ನಡೆದು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Husband Torture : ಪತ್ನಿಗೆ ಕಚ್ಚಿ, ಸಿಗರೇಟ್‌ನಿಂದ ಮೈ-ಕೈ ಸುಟ್ಟಿರುವ ಸೈಕೋ ಪತಿ!

ರಾಮನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ

ರಾಮನಗರದ ಮಾಗಡಿ ತಾಲೂಕಿನಲ್ಲಿರುವ ಮಂಚನಬೆಲೆ ಜಲಾಶಯದ ಬಳಿ ಪುಡಿ ರೌಡಿಗಳು ಅಟ್ಟಹಾಸ ತೋರಿದ್ದಾರೆ. ಹಾಡಹಗಲೇ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಜಲಾಶಯದ ಬಳಿ ನಾಲ್ವರು ಯುವಕರು ಕಂಠ ಪೂರ್ತಿ ಕುಡಿದು ರ‍್ಯಾಶ್‌ ಡ್ರೈವಿಂಗ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ಸ್ಥಳೀಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.

ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ವಿಡಿಯೊವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case : ಹೊಡೆದು ಬಡಿದು ಹಿಂಸೆ ಕೊಡುವ ಗಂಡ; ಠಾಣೆ ಮೆಟ್ಟಿಲೇರಿದ ನಾಯಕ ನಟಿ

ಗಾಯಾಳುಗಳು

ಚೂರಿ ಇರಿತ, ಮೂವರು ಗಂಭೀರ

ಚೂರಿ ಇರಿತದಿಂದ ಮೂವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್‌ನಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಶಾರದೋತ್ಸವ ವೇಳೆ ಹುಲಿ ವೇಷದ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು.

ನಂತರ ತಣ್ಣಗಾಗಿದ್ದ ಗಲಾಟೆ ಮುಂದುವರಿದು ಮೂವರಿಗೆ ಚೂರಿ ಇರಿಯಲಾಗಿದೆ. ದೇವದಾಸ್, ಸಂದೀಪ್, ಶಂಕರ್‌ ಎಂಬುವವರು ಗಾಯಗೊಂಡಿದ್ದಾರೆ. ಈ ಮೂವರು ಮೆಲ್ಕಾರ್‌ನ ಬೋಳಂಗಡಿ ನಿವಾಸಿಗಳಾಗಿದ್ದು, ಗಾಯಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version