Site icon Vistara News

Assembly Elections 2023 : ಈಗ ಏನಾದ್ರೂ ಹೇಳ್ತೀರಾ ಸರ್‌!; ಪ್ರಿಯಾಂಕ್‌ ಖರ್ಗೆಗೆ ಬಿ.ಎಲ್‌ ಸಂತೋಷ್‌ ಗೇಲಿ

BL Santhosh and Priyank Kharge

ಬೆಂಗಳೂರು: ಈಗ ಏನಾದರೂ ಹೇಳೋದಿದೆಯಾ ಸರ್‌!! (Any comments now Sir …!!!)- ಹೀಗೆಂದು ರಾಜ್ಯದ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರನ್ನು ಕೆಣಕಿದ್ದಾರೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರು.!

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ (Assembly Elections 2023) ಫಲಿತಾಂಶಗಳು ಪ್ರಕಟವಾಗಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನ್ನು ಕೆಡವಿ ಬಿಜೆಪಿ ಅಧಿಕಾರ ಸ್ಥಾಪಿಸಿದ್ದರೆ, ಮಧ್ಯ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ. ಈ ಎಲ್ಲ ಫಲಿತಾಂಶಗಳು ಬಂದ ಬಳಿಕ ಬಿ.ಎಲ್‌. ಸಂತೋಷ್‌ ಅವರು ಟ್ವೀಟ್‌ ಮಾಡಿ ಪ್ರಿಯಾಂಕ್‌ ಖರ್ಗೆ ಅವರನ್ನು ಕೇಳಿದ್ದಾರೆ: ಈಗ ಏನಾದರೂ ಹೇಳೋದಿದೆಯಾ ಸರ್‌!

ಬಿ.ಎಲ್‌. ಸಂತೋಷ್‌ ಅವರು ಈ ರೀತಿಯಾಗಿ ಪ್ರಶ್ನೆ ಕೇಳಲು ಒಂದು ಕಾರಣವಿದೆ. ಪ್ರಿಯಾಂಕ್‌ ಖರ್ಗೆ ಅವರು ಶನಿವಾರ ಒಂದು ಟ್ವೀಟ್‌ ಮಾಡಿ ಅದರಲ್ಲಿ ಈ ರೀತಿ ಹೇಳಿದ್ದರು: ಗೋಧಿ ಮೀಡಿಯಾವು ಟೆಲಿವಿಷನ್‌ ಸ್ಕ್ರೀನ್‌ಗಳಲ್ಲಿ ಎಲ್ಲಾ ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಚಿತ್ರಗಳನ್ನು ತೋರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬದಲು ನಡ್ಡಾ ಅವರ ಚಿತ್ರಗಳು ಕಾಣಿಸುತ್ತಿವೆ. ಇದು ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತಿರುವುದನ್ನು ಸೂಚಿಸುತ್ತಿದೆ. ಇದೆಲ್ಲ ಪ್ರಾಥಮಿಕ ಜ್ಞಾನ ಮಗು (Godhi Media is flashing BJP President JP Nadda’s pictures all over the television screens, instead of PM Modi’s. Looks like BJP is losing tomorrow’s elections for sure. Elementary, my dear Watson!) ಎಂದು ಅವರು ಬರೆದಿದ್ದರು.

ಅಂದರೆ, ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಇದರ ಸುಳಿವನ್ನು ಪಡೆದ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯ ಬದಲಿಗೆ ಜೆ.ಪಿ. ನಡ್ಡಾ ಅವರನ್ನು ಎತ್ತಿ ತೋರಿಸುತ್ತಿವೆ. ನಾಳೆ ಸೋತರೆ ಅದನ್ನು ಜೆ.ಪಿ. ನಡ್ಡಾ ಅವರ ತಲೆಗೆ ಕಟ್ಟುವ ಪ್ರಯತ್ನಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಸೂಚ್ಯವಾಗಿ ಹೇಳಿದ್ದರು.

ಇದಕ್ಕೆ ಸೂಚ್ಯವಾಗಿಯೇ ಪ್ರತಿಕ್ರಿಯೆ ನೀಡಿರುವ ಬಿ.ಎಲ್‌. ಸಂತೋಷ್‌ ಅವರು, ಈಗ ಏನು ಹೇಳುತ್ತೀರಿ ಪ್ರಿಯಾಂಕ್‌ ಖರ್ಗೆಯವರೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: Rajasthan Election Result: ಬಿಜೆಪಿ ನಾಯಕಿ ವಸಂಧರಾ ‘ರಾಜ’ಸ್ಥಾನದ ಮುಖ್ಯಮಂತ್ರಿ ಆಗ್ತಾರಾ?

ಬಿ.ಎಲ್‌. ಸಂತೋಷ್‌ ಅವರು ಈ ರೀತಿಯಾಗಿ ಕೆಲವೇ ಶಬ್ದಗಳಲ್ಲಿ ರಾಜಕೀಯ ವಿರೋಧಿಗಳನ್ನು ಕೆಣಕುವುದು ಹೊಸತೇನೂ ಅಲ್ಲ. ಹಿಂದೆಯೂ ಹಲವು ಬಾರಿ ಮಾಡಿದ್ದರು. ಈಗ ಪ್ರಿಯಾಂಕ್‌ ಖರ್ಗೆ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಿಯಾಂಕ್‌ ಖರ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Exit mobile version