Site icon Vistara News

Assembly Session: ಬಿಜೆಪಿ ಅವಧಿಯಲ್ಲಿ 224 ಎಕರೆ ಗೋಮಾಳ ಪರಭಾರೆ: ಇಸ್ಕಾನ್‌, ಆದಿಚುಂಚನಗಿರಿ, ಸಿದ್ಧಗಂಗಾ, ರಾಷ್ಟ್ರೋತ್ಥಾನ, ಇತ್ಯಾದಿ

cow in Gomala land

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ವರ್ಷ ಅವಧಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು 224 ಎಕರೆ ಗೋಮಾಳವನ್ನು ಪರಭಾರೆ ಮಾಡಿಕೊಡಲಾಗಿದೆ. ಈ ಮಾಹಿತಿಯನ್ನು ವಿಧಾನಪರಿಷತ್ತಿನಲ್ಲಿ (Assembly Session) ಕಂದಾಯ ಇಲಾಖೆ ಲಿಖಿತವಾಗಿ ನೀಡಿದೆ.

ಜೆಡಿಎಸ್‌ ಸದಸ್ಯ ಟಿ.ಎ. ಶರವಣ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಉತ್ತರಿಸಿದ್ದಾರೆ. ಒಟ್ಟು ಒಂಭತ್ತು ಜಿಲ್ಲೆಗಳಲ್ಲಿ ಗೋಮಾಳವನ್ನು ಪರಭಾರೆ ಮಾಡಲಾಗಿದೆ. 31 ಸಂಸ್ಥೆಗಳಿಗೆ 2019ರಿಂದ 2022ರ ಅವಧಿಯಲ್ಲಿ ಒಟ್ಟು 224 ಎಕರೆ ಪರಭಾರೆ ಅಥವಾ ದೀರ್ಘಾವಧಿ ಗುತ್ತಿಗೆಗಾಗಿ ಮಂಜೂರಾಗಿದೆ ಎಂದು ತಿಳಿಸಲಾಗಿದೆ.

ಗೋಮಾಳವನ್ನು ಪಡೆದ ಸಂಸ್ಥೆಗಳ ಪೈಕಿ ಪ್ರಮುಖವಾದವು ಈ ಕೆಳಕಂಡಂತಿವೆ.

  1. ಯಲಹಂಕದಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ 8.37 ಎಕರೆ
  2. ರಾಜ್ಯಪಾಲರ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಂಘಕ್ಕೆ ಹೆಸರಘಟ್ಟದಲ್ಲಿ 3.38 ಎಕರೆ
  3. ಹುರಳಿಚಿಕ್ಕನಹಳ್ಳಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 9.32 ಎಕರೆ
  4. ದಾಸನಪುರದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸಂಘಕ್ಕೆ 3.24 ಎಕರೆ
  5. ಎಳ್ಳೇನಹಳ್ಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 8.32 ಎಕರೆ
  6. ಕರ್ನಾಟಕ ಸಿಲ್ಕ್ಸ್‌ ಸ್ಲೀಟರ್ಸ್‌ ಮತ್ತು ವೀವರ್ಸ್‌ ಹೌಸ್‌ ಬಿಲ್ಡಿಂಗ್‌ ಕೊ ಆಪರೇಟಿವ್‌ ಸೊಸೈಟಿಗೆ 25 ಎಕರೆ
  7. ತಾವರೆಕೆರೆ ಕುರುಬರ ಹಳ್ಳಿಯಲ್ಲಿ ಜನಸೇವಾ ಟ್ರಸ್ಟ್‌ಗೆ 35.33 ಎಕರೆ
  8. ನೆಲಮಂಗಲದಲ್ಲಿ ಸಿದ್ಧಗಂಗಾ ಮಠಕ್ಕೆ 9.2 ಎಕರೆ
  9. ಕೋಲಾರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ 16 ಎಕರೆ
  10. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಇಸ್ಕಾನ್‌ ಸಂಸ್ಥೆಗೆ 30 ಎಕರೆ
  11. ಹುಣಸೂರಿನಲ್ಲಿ ಒಕ್ಕಲಿಗರ ಸಂಘಕ್ಕೆ 2 ಎಕರೆ
  12. ತೀರ್ಥಹಳ್ಳಿಯಲ್ಲಿ ಕ್ಷತ್ರಿಯ ಮರಾಠಾ ಸಂಘಕ್ಕೆ 1 ಎಕರೆ

ಇದನ್ನೂ ಓದಿ: Siddaramaiah: ಗೋಮಾಳಗಳನ್ನು ಆರ್‌ಎಸ್‌ಎಸ್‌ಗೆ ನೀಡುತ್ತಿದೆ ಬಿಜೆಪಿ ಸರ್ಕಾರ: ಹಾಲು ಉತ್ಪಾದಕರ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್‌

Exit mobile version