Site icon Vistara News

Assembly Session : KGSTಗೆ 2ನೇ ತಿದ್ದುಪಡಿ; ಇನ್ನು ಮುಂದೆ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್‌ಗೆ ಟ್ಯಾಕ್ಸ್‌

KGST in Assembly

KGST in Assembly

ಬೆಳಗಾವಿ: ಆನ್‌ಲೈನ್ ಗೇಮಿಂಗ್ (Online Gaming), ಆನ್‌ಲೈನ್‌ ಮನಿ ಗೇಮಿಂಗ್‌, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ತೆರಿಗೆ ವಿಧಿಸಲು ಅನುಕೂಲವಾಗುವಂತೆ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕ-2023 (KGST second Ammendment bill 2023) ವನ್ನು ಸೋಮವಾರ ವಿಧಾನಸಭೆಯಲ್ಲಿ (Assembly Session) ಅಂಗೀಕಾರ ಮಾಡಲಾಗಿದೆ.

ಆನ್‌ಲೈನ್ ಗೇಮಿಂಗ್, ಆನ್‌ಲೈನ್‌ ಮನಿ ಗೇಮಿಂಗ್‌, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ನಿರ್ದಿಷ್ಟ ಪಡಿಸಿದ ಕ್ರಮಗಳಲ್ಲಿ ಕ್ಲೇಮುಗಳ ಹಾಗೂ ವರ್ಚುವಲ್‌ ಡಿಜಿಟಲ್‌ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಮತ್ತು ಅನುಸೂಚಿ 3ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮದ ಮೂಲಕ ಸೇರ್ಪಡೆ ಮಾಡಲಾಗಿದೆ. 2023ರ ಅಕ್ಟೋಬರ್‌ 1ರಂದು ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ಈ ತಿದ್ದುಪಡಿಗಳನ್ನು ಸೇರಿಸುವಂತೆ ಜಿಎಸ್‌ಟಿ ಪರಿಷತ್‌ ಸಚಿವಾಲಯ ಸೂಚಿಸಿತ್ತು.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2023 ನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್​ ಖರ್ಗೆ ಕೆಲವು ದಿನಗಳ ಹಿಂದೆ ವಿಧಾನಸಭೆಯಲ್ಲಿ ಮಂಡಿಸಿದ್ದರು.

ಕೇಂದ್ರದ ಸೂಚನೆಯಂತೆ ಬದಲಾವಣೆ

ಪ್ರಸಕ್ತ ಸಾಲಿನ ಅ. 1ರಿಂದ ಜಾರಿಗೆ ಬರುವಂತೆ ಸಂಬಂಧಪಟ್ಟ ರಾಜ್ಯದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ಸೇರಿಸುವಂತೆ ಆ.11 ರಂದು ಜಿಎಸ್​​ಟಿ ಸಚಿವಾಲಯವು ತಿಳಿಸಿದೆ. ಹೀಗಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿತ್ತು. ಆ ನಿಟ್ಟಿನಲ್ಲಿ ಸದ್ಯ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ.

ಇದನ್ನೂ ಓದಿ: Assembly Session: ಹಿಂದುಗಳು ಮುಸ್ಲಿಮರ ಅಡಿಯಾಳುಗಳು ಎಂದೇ ಜಮೀರ್‌ ಹೇಳಿದ್ದು; ಆರ್‌ ಅಶೋಕ್‌

ಇನ್ನೂ ಹಲವು ವಿಧೇಯಕಗಳ ಮಂಡನೆ, ಅಂಗೀಕಾರ

1. 2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕ ಅಂಗೀಕಾರ

2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆ ಅಂಗೀಕರಿಸಿದೆ. ನೋಂದಣಿ ಇಲಾಖೆಯಲ್ಲಿ ಸ್ಟಾಂಪ್​ನಿಂದ ಬರುವ ಆದಾಯ ಕೇವಲ ಶೇಕಡಾ 10ಕ್ಕೆ ಸೀಮಿತವಾಗಿದೆ. ಸೋರಿಕೆ ತಡೆಗಟ್ಟಲು ಕ್ರಮದ ಜೊತೆಗೆ ಪರಿಷ್ಕರಣೆಗೆ ‌ ನಿರ್ಧರಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

2.ಕರ್ನಾಟಕ ನ್ಯಾಯವಾದಿಗಳ ವಿರುದ್ಧ ಹಿಂಸಾಚಾರ ತಡೆ ವಿಧೇಯಕ-2023 ಮಂಡನೆ

3. ಕರ್ನಾಟಕ ಅನುಸೂಚಿತ ಜಾತಿ/ಬುಡಕಟ್ಟುಗಳ ಉಪ ಹಂಚಿಕೆ ತಿದ್ದುಪಡಿ ವಿಧೇಯಕ -2023 ಮಂಡನೆ

4. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2023 ಮಂಡನೆ

5. 2023ನೇ ಸಾಲಿನ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ ಮಂಡನೆ.

6. 2023ನೇ ಸಾಲಿನ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ.

7. 2023ನೇ ಸಾಲಿನ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ ತಿದ್ದುಪಡಿ ವಿಧೇಯಕ ಅಂಗೀಕಾರ.

Exit mobile version