Site icon Vistara News

Assembly session: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ನಾಳೆ ಮುಗಿಯಬೇಕಿದ್ದ ಕಲಾಪ ಇಂದೇ ಮೊಟಕು!

Assembly session

ಬೆಂಗಳೂರು: ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ನಾಳೆ (ಜು.26) ಮುಗಿಯಬೇಕಿದ್ದ ಅಧಿವೇಶನ (Assembly session) ಇಂದೇ ಮೊಟಕುಗೊಂಡಂತಾಗಿದೆ. 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ 8 ದಿನಗಳ ಕಾಲ (37 ಗಂಟೆ, 30 ನಿಮಿಷ) ನಡೆದಿದ್ದು, ರಾಷ್ಟ್ರಗೀತೆಯೊಂದಿಗೆ ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆಯಾಗಿದೆ.

ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ರಾಜಭವನಕ್ಕೆ ತೆರಳಲಿದರು. ಸ್ಪೀಕರ್ ನಡೆ ಕಾಂಗ್ರೆಸ್ ಕಡೆ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ನಲ್ಲಿ ಭೇಟಿ ಮಾಡಿ ದೂರು ನೀಡಿದ ಬಿಜೆಪಿ-ಜೆಡಿಎಸ್ ನಿಯೋಗ, ಮುಡಾ ಹಗರಣ ವಿಚಾರ ಚರ್ಚೆಗೆ ನೀಡದ ಬಗ್ಗೆ ಹಾಗೂ ನಾಳೆಗೆ ಮುಗಿಯುವ ಅಧಿವೇಶನ ಇಂದೇ ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುವಂತೆ ಮನವಿ ಮಾಡಿದ್ದಾರೆ.

12 ವಿಧೇಯಕಗಳ ಅಂಗೀಕಾರ

16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಲಾಪ ನಡೆದಿದ್ದು, ಪೂರಕ ಅಂದಾಜುಗಳು, ಲೆಕ್ಕಪರಿಶೋಧಕರ ವರದಿ ಮಂಡನೆ ಮಾಡಲಾಗಿದೆ. ಭರವಸೆಗಳ ಸಮಿತಿ, ಕಾಗದ ಪತ್ರಗಳ ಸಮಿತಿ, ಅಂದಾಜು ಸಮಿತಿ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಕಲ್ಯಾಣ ಸಮಿತಿ, ಅಲ್ಪಾಸಂಖ್ಯಾತ ಸಮಿತಿಯ ಮೊದಲ ವರದಿ ಮಂಡನೆ ಮಾಡಲಾಗಿದೆ.

ಇದನ್ನೂ ಓದಿ | Assembly session: ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ ಪಾಸ್; ಹೆಚ್ಚಲಿದೆ ಸಿನಿಮಾ ಟಿಕೆಟ್ ದರ, ಒಟಿಟಿ ಶುಲ್ಕ!

12 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದ್ದು, ಗ್ರೇಟರ್ ಬೆಂಗಳೂರು ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ. ನಿಯಮ 69 ಅಡಿಯಲ್ಲಿ 14 ಸೂಚನೆಗಳ ಅಂಗೀಕಾರ ಸಿಕ್ಕಿದ್ದು, 117 ಪ್ರಶ್ನೆಗಳಿಗೆ ಉತ್ತರ ಹಾಗೂ 1902 ಪ್ರಶ್ನೆಗಳಿಗೆ ಪೈಕಿ 1438 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 170 ಗಮನ ಸೆಳೆಯುವ ಸೂಚನೆ ಗಳಿಗೆ ಉತ್ತರ ನೀಡಲಾಗಿದೆ.

ನಾಲ್ಕು ನಿರ್ಣಯ ಪಾಸ್

ನಕಲಿ ವೈದ್ಯರಿಗೆ 1 ಲಕ್ಷದವರೆಗ ದಂಡ!

ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024 ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧೇಯಕ ಮಂಡಿಸಿದ್ದು, ನಕಲಿ ವೈದ್ಯರ ಮೇಲಿನ ದಂಡ 10 ಸಾವಿರದಿಂದ ಒಂದು ಲಕ್ಷದವರೆಗೆ ಏರಿಕೆ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ವೈದರ ಮೇಲೆ ಹಲ್ಲೆ, ನಿಂದನೆ, ಅವಮಾನಿಸುವುದನ್ನು ನಿಷೇಧಿಸಿರುವ ತಿದ್ದುಪಡಿ ತಂದಿದ್ದೇವೆ. ವೈದ್ಯರ ಮೇಲಿನ ಹಲ್ಲೆಗೆ ಮೂರು ವರ್ಷದಿಂದ 7 ವರ್ಷದ ತನಕ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಾಡಿದ್ದೇವೆ ಎಂದರು. ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಐತಿಹಾಸಿಕ ಸ್ಥಳ, ಸ್ಮಾರಕ ವಿರೂಪಗೊಳಿಸಿದ್ರೆ ಜೈಲು ಫಿಕ್ಸ್‌

ಇನ್ನು ಮುಂದೆ ಐತಿಹಾಸಿಕ ಸ್ಥಳಗಳ ವಿರೂಪ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಜೈಲು ಶಿಕ್ಷೆ ಖಚಿತ. ಐತಿಹಾಸಿಕ ಸ್ಥಳ, ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ (Assembly session), ಅಂಗೀಕಾರಗೊಂಡಿದೆ.

ವಿಧಾನ ಪರಿಷತ್‌ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರು ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ಮಂಡಿಸಿದರು. ಇದರಲ್ಲಿ ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಐತಿಹಾಸಿಕ ಸ್ಥಳ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಮೂರು ತಿಂಗಳ ಕಠಿಣ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ | Assembly session: ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ; ಉಭಯ ಸದನಗಳಲ್ಲೂ ಅಂಗೀಕಾರ

ಎಚ್.ಕೆ.ಪಾಟೀಲ್ ಅವರು ವಿಧೇಯಕದ ಬಗ್ಗೆ ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್​​ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿಯುಲ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

Exit mobile version