Site icon Vistara News

Athani Election Results: 75673 ಮತಗಳ ಭಾರೀ ಅಂತರದಲ್ಲಿ ಅಥಣಿ ಕ್ಷೇತ್ರದಲ್ಲಿ ಗೆದ್ದ ಬೀಗಿದ ಲಕ್ಷ್ಮಣ್ ಸವದಿ!

Laxman Savadi won Athani Constituency

ಬೆಂಗಳೂರು, ಕರ್ನಾಟಕ: ಟಿಕೆಟ್‌ ನೀಡದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಅಥಣಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಬಿಜೆಪಿಯ ಮಹೇಶ್ ಕುಮಠಳ್ಳಿ ಅವರ ವಿರುದ್ದ ಸವದಿ 75673 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿ ಹೀನಾಯ ಸೋಲಾಗಿದೆ. ಈ ಚುನಾವಣೆ ಬಹುತೇಕ ಒನ್‌ವೇ ಆಗಿತ್ತು. ಮಾಜಿ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಣ್ ಸವದಿ ಅವರನ್ನು ಸೋಲಿಸಬೇಕೆಂದು ಪಣತೊಟ್ಟಿದ್ದರು. ಆದರೆ, ಮತದಾರರು ಲಕ್ಷ್ಮಣ್ ಜಾರಕಿಹೊಳಿ ಅವರಿಗೆ ಮಣೆ ಹಾದ್ದಾರೆ. ಲಕ್ಷ್ಮಣ್ ಸವದಿ 1,30,428 ಮತ್ತು ಮಹೇಶ್ ಕುಮಠಳ್ಳಿ ಅವರು 54805 ಮತಗಳನ್ನು ಪಡೆದುಕೊಂಡಿದ್ದಾರೆ.

2023ರ ಚುನಾವಣೆ ಅಭ್ಯರ್ಥಿಗಳು

ಬಿಜೆಪಿಯಿಂದ ಮಹೇಶ್ ಕುಮಠಳ್ಳಿ, ಕಾಂಗ್ರೆಸ್‌ನಿಂದ ಲಕ್ಷ್ಮಣ್ ಸವದಿ ಹಾಗೂ ಆಪ್‌ನಿಂದ ಸಂಪತ್ ಕುಮಾರ್ ಶೆಟ್ಟಿ ಅವರು ಸ್ಪರ್ಧಿಸಿದ್ದರು.

2018ರ ಚುನಾವಣೆ ಫಲಿತಾಂಶ ಏನಾಗಿತ್ತು?

ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿರುವ ಅಥಣಿಯಲ್ಲಿ 2018ರಲ್ಲಿ ಕಾಂಗ್ರೆಸ್‌ನ ಮಹೇಶ್ ಕುಮಠಳ್ಳಿ ಅವರು ಬಿಜೆಪಿಯ ಲಕ್ಷ್ಮಣ್ ಸವದಿಯನ್ನು ಅವರನ್ನು ಸೋಲಿಸಿದ್ದರು. ಮುಂದೆ ಆಪರೇಷನ್ ಕಮಲಕ್ಕೆ ಒಳಗಾಗಿ, ಮಹೇಶ್ ಕುಮಠಳ್ಳಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರು. ಆಗ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿ ಅವರು ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ, ಗೆಲವು ಕಂಡರು. ಕಾಂಗ್ರೆಸ್‌ನಿಂದ ಗಜಾನನ ಮಂಗಸೂಳಿ ಅವರು ಸ್ಪರ್ಧಿಸಿದ್ದರು. ಅವರು 59214 ಮತಗಳನ್ನು ಪಡೆದುಕೊಂಡರೆ, ಕುಮಠಳ್ಳಿ ಅವರು 99203 ಮತಗಳನ್ನು ಪಡೆದುಕೊಂಡಿದ್ದರು.

Exit mobile version