ಶಿವಮೊಗ್ಗ: ಎರಡು ದಿನದ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ವೇಳೆ ನಡೆದ ಒಂದು ಘಟನೆಗೆ ಸಂಬಂಧಿಸಿ, ಕೊಲೆಯಾದ ಹಿಂದು ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ಅವರ ವಿರುದ್ಧ ಎಫ್‌ಆರ್ ದಾಖಲಾಗಿದೆ.
ಅಂದು ನಡೆದ ಬೃಹತ್ ಮೆರವಣಿಗೆ ಸಂದರ್ಭ, ಆಜಾದ್ ನಗರದಲ್ಲಿ ಸಯ್ಯದ್ ಪರ್ವೀಜ್ ಎಂಬುವರ ಕಾರಿಗೆ ಹಾನಿ ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿ ಹರ್ಷ ಸೋದರಿ ಅಶ್ವಿನಿ ಮತ್ತು ಸುಮಾರು ೧೦ರಿಂದ ೧೫ ಮಂದಿಯ ಮೇಲೆ ಕೇಸು ದಾಖಲು ಮಾಡಲಾಗಿದೆ.
ಆವತ್ತು ಕೆಎ 36 ಎಂ 2736 ನೋಂದಣಿ ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಸಾಗುತ್ತಿದ್ದಾಗ ಸೀಗೆಹಟ್ಟಿ ನಿವಾಸಿ ಅಶ್ವಿನಿ ಮತ್ತು 10ರಿಂದ 15 ಜನರ ಗುಂಪು ಹಾನಿ ಮಾಡಿದೆ ಎಂದು ಸಯ್ಯದ್ ಪರ್ವೀಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಲ್ಲಪ್ಪನಕೇರಿಯಿಂದ ಗುಂಪಾಗಿ ಬಂದ ಬೈಕ್ ಸವಾರರು ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್‌ಗಳಿಗೆ ಹೊಡೆದು ಹಾನಿ ಮಾಡಿದ್ದಾರೆ. ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡು ಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಯ್ಯದ್ ಪರ್ವೀಜ್ ಅವರು ಇತ್ತೀಚೆಗಷ್ಟೆ ಅಸ್ಲಾಂ ಎಂಬುವವರಿಂದ ಕಾರು ಖರೀದಿಸಿದ್ದರು. ಕಾರು ಮಾಲೀಕರ ಹೆಸರು ಬದಲಾವಣೆಗೆ ಆರ್ ಟಿ ಒ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಹಿಂದು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಹರ್ಷ ಅವರು ಫೆ.20ರಂದು ದುಷ್ಕರ್ಮಿಗಳಿಂದ ಕೊಲೆಗೀಡಾಗಿದ್ದರು.
ಇದನ್ನೂ ಓದಿ | ಕಾಫಿರರನ್ನು ಕೊಲ್ಲಿ ಎಂದು ಕೂಗುತ್ತಾ ಕೊಚ್ಚಿದರು! ಹರ್ಷ ಕೊಲೆ ನಡೆದದ್ದು ಹೀಗೆ | ಇಲ್ಲಿದೆ ಸ್ಫೋಟಕ ವಿವರ