Site icon Vistara News

Cow slaughter : ಸೂಳೆಬೈಲಿನ ಕಸಾಯಿಖಾನೆ ಮೇಲೆ ದಾಳಿ; ಏಳು ಗೋವುಗಳ ಕತ್ತು ಸೀಳಿ ಹತ್ಯೆ, ವ್ಯಾಪಕ ಆಕ್ರೋಶ

cows

ಶಿವಮೊಗ್ಗ: ಇಲ್ಲಿನ ಸೂಳೆಬೈಲಿನ ಕಸಾಯಿಖಾನೆಯೊಂದರ (Cow slaughter) ಮೇಲೆ ನಿಖರ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 7 ಗೋವುಗಳನ್ನು ಕತ್ತು ಸೀಳಿ ದಾರುಣವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಸೂಳೆಬೈಲಿನ ಕಸಾಯಿಖಾನೆ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಹಸುಗಳ ಹತ್ಯೆ ಕಣ್ಣಿಗೆ ಬಿದ್ದಿದ್ದು, ಅಲ್ಲಿಯೇ ಇದ್ದ ಇನ್ನೂ 12 ಗೋವುಗಳನ್ನು ರಕ್ಷಿಸಿದ್ದಾರೆ. ಸೂಳೆಬೈಲಿನ ಅಜೀಜ್ ಎಂಬಾತನ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿ ಅಜೀಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್ ಇನ್ಸ್‌ಪೆಕ್ಟರ್‌ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗೋವುಗಳ ಕಾಲುಗಳನ್ನು ಕಟ್ಟಿ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಲಾಗಿದೆ. ಅವುಗಳನ್ನು ಕೊಟ್ಟಿಗೆಯ ಒಂದು ಮೂಲೆಯಲ್ಲಿ ಹಾಕಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದ ಹಸುಗಳನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಮಾಂಸ ಮಾರಾಟಕ್ಕಾಗಿ ಗೋವುಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿ ಅಜೀಜ್‌ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ | Tiger Safari : ಸಫಾರಿಯಲ್ಲಿ ಕಂಡವು ನಾಲ್ಕು ಹುಲಿ; ಪ್ರವಾಸಿಗರಿಗೆ ರೋಮಾಂಚನ ತಂದ ಹುಲಿಗಳ ದರ್ಶನ

Exit mobile version