ಹುಬ್ಬಳ್ಳಿ: ಇಸ್ಪೀಟ್ ಆಟದ ವಿಚಾರದಲ್ಲಿ ಬುದ್ಧಿವಾದ ಹೇಳಿದ ಪೊಲೀಸ್ ಕಾನ್ಸ್‌ಟೇಬಲ್‌ಗೆ ದುಷ್ಕರ್ಮಿಯೊಬ್ಬ ಠಾಣೆಯಲ್ಲೇ ಚಾಕುವಿನಿಂದ ದಾಳಿ (Attack on police) ಮಾಡಿದ್ದಾನೆ.
ಹುಬ್ಬಳ್ಳಿಯ ಬಂಡಿವಾಡ ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಸುರೇಶ ಬಂಡವಾಡ ಎಂಬಾತನೇ ದುಷ್ಕೃತ್ಯ ನಡೆಸಿದನು. ಇಸ್ಪೀಟ್ ಆಟವಾಡುವ ವೇಳೆ ಸಿಕ್ಕಿಬಿದ್ದಿದ್ದ ಈತನನ್ನು ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಮಹಾಂತೇಶ ಮಡ್ಡಗೋಳಗೆ ಅವರು ಆತನಿಗೆ ಬುದ್ಧಿವಾದ ಹೇಳಿದ್ದರು. ಈ ರೀತಿ ಮಾಡಬೇಡ ಎಂದಿದ್ದರು.
ಆದರೆ, ದುಷ್ಕರ್ಮಿ ಸುರೇಶ್ ಬಂಡವಾದ ಯಾವ ಮಟ್ಟದ ಉದ್ಧಟತನ ತೋರಿದನೆಂದರೆ ತನಗೆ ಬುದ್ಧಿವಾದ ಹೇಳಿದ ಪೊಲೀಸ್‌ಗೇ ಚೂರಿಯಿಂದ ಇರಿದಿದ್ದಾನೆ. ಆದರೆ, ಪೊಲೀಸ್ ಠಾಣೆಯಲ್ಲಿ ಆತನಿಗೆ ಚೂರಿ ಎಲ್ಲಿ ಸಿಕ್ಕಿತು ಎನ್ನುವುದು ಸ್ಪಷ್ಟವಾಗಿಲ್ಲ.
ಗಾಯಾಳು ಕಾನ್ಸ್‌ಟೇಬಲ್ ಮಹಾಂತೇಶ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿ ಸುರೇಶ ಬಂಡವಾಡನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವೇಗವಾಗಿ ಬದಲಾಗ್ತಿದೆ ಕಾರ್ಪೊರೇಟ್ ಜಗತ್ತು: ಓಡ್ತಾ ಇದ್ರೆ ಮಾತ್ರ ಉಳಿಯೋ ಕಾಲ ಇದು!