ಚಿಕ್ಕಮಗಳೂರು: ಕೊಲೆ ಯತ್ನ ಕೇಸ್ ಆರೋಪಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಘಟನೆ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ, ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಪೂರ್ಣೇಶ್ ಆಸ್ಪತ್ರೆಯಿಂದ ಎಸ್ಕೇಪ್ ಆದ ಆರೋಪಿ. ವಾರಂಟ್ ಜಾರಿಯಾಗಿದ್ದರೂ ಕೋರ್ಟ್‌ಗೆ ಗೈರಾಗಿದ್ದ ಪೂರ್ಣೇಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಕಾಡಿನಲ್ಲಿ ದೊಡ್ಡ-ದೊಡ್ಡ ಮರಗಳ ಮೇಲೆ ವಾಸ ಮಾಡುತ್ತಾ ಆತ ಪೊಲೀಸರಿಗೂ ಸಿಕ್ಕಿರಲಿಲ್ಲ.
ಅಕ್ಟೋಬರ್ 30ರಂದು ಬಾಳೆಹೊನ್ನೂರು ಸಮೀಪದ ಹಳ್ಳಿ ಮನೆಯಲ್ಲಿದ್ದಾಗ ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಪೂರ್ಣೇಶ್ ಮಚ್ಚು ಬೀಸಿದ್ದ. ಇದರಿಂದ ಪೇದೆ ಮಂಜುನಾಥ್‌ಗೆ ಗಾಯವಾಗಿತ್ತು. ಹೀಗಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.
ಇದನ್ನೂ ಓದಿ | Basavaraja Bommai : ಗ್ಯಾಂಗ್ ರೇಪ್ ತನಿಖೆಗೆ ಎಸ್‌ಐಟಿ ರಚಿಸಿ; ಬಸವರಾಜ ಬೊಮ್ಮಾಯಿ ಆಗ್ರಹ
ಗಾಯಾಳು ಆರೋಪಿ ಪೂರ್ಣೇಶ್ ಕುಟುಂಬಸ್ಥರು ಆತನ ಹಾರೈಕೆಗೆ ಜಿಲ್ಲಾಸ್ಪತ್ರೆಗೆ ಬಂದಿರಲಿಲ್ಲ. ಪೊಲೀಸರೇ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ನಂತರ ಬೆಂಗಳೂರಿನಂದ ಕರೆತಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ಪೂರ್ಣೇಶ್ ಶನಿವಾರ ಬೆಳಗಿನ ಜಾವ ಎಸ್ಕೇಪ್ ಆಗಿದ್ದಾನೆ.
ಪ್ರೀತ್ಸೆ ಪ್ರೀತ್ಸೆ ಎಂದು ಯುವಕನ ಕಿರುಕುಳ; ಅಪಮಾನದಿಂದ ಯುವತಿ ಆತ್ಮಹತ್ಯೆ
ಹಾಸನ: ಪ್ರೀತಿಸಿದ ಹುಡುಗ ಸಿಗಲಿಲ್ಲ ಎಂದು ನೊಂದು ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿವೆ. ಆದರೆ, ಇಲ್ಲೊಬ್ಬಳು ಯುವತಿ ಪ್ರೀತಿಸುವಂತೆ ಯುವಕನೊಬ್ಬ ಕಿರುಕುಳ (Love and Harassment) ನೀಡುತ್ತಿದ್ದಾನೆ ಎಂಬ ನೋವಿನಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ (Love and death). ಹಾಸನ ಜಿಲ್ಲೆ (Hassana News) ಬೇಲೂರು ತಾಲ್ಲೂಕಿನ ನಿಡಗೂಡು ಗ್ರಾಮ ಸಂಗೀತಾ (21) ಎಂಬ ಯುವತಿಯೇ ಪ್ರಾಣ ಕಳೆದುಕೊಂಡವಳು. ಅದೇ ಗ್ರಾಮದ ಯುವಕ ಶಿವು ಎಂಬಾತ ಆಕೆಗೆ ಕಿರುಕುಳ ನೀಡುತ್ತಿದ್ದ (Love and atrocity) ಎಂದು ಆರೋಪಿಸಲಾಗಿದೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ನಿಡಗೂಡು ಗ್ರಾಮದ ಯುವತಿಯಾಗಿರುವ ಸಂಗೀತಾ ಬಿಕಾಂ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದರು. ಈ ನಡುವೆ, ಅದೇ ಗ್ರಾಮದ ಶಿವು ಎಂಬಾತ ಆಕೆಗೆ ಗಂಟುಬಿದ್ದಿದ್ದ. ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು. ಆದರೆ, ಆತ ಪದೇಪದೆ ಕರೆ ಮಾಡಿ ಹಿಂಸೆ ನೀಡುತ್ತಿದ್ದ.
ಆಕೆ ಅವನ ಪ್ರೀತಿಯನ್ನು ನಿರಾಕರಿಸಿದ್ದರೂ ಆತ ಮಾತ್ರ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದ. ಸಂಗೀತಾಳನ್ನು ತನಗೇ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರ ಬಳಿಯೂ ಕೇಳಿದ್ದ. ಆದರೆ, ಆವನನ್ನು ಯಾವ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಸಂಗೀತ ತೀರ್ಮಾನ ಮಾಡಿದ್ದಳು. ಆದರೂ ಆತ ತನ್ನ ಕೃತ್ಯವನ್ನು ಬಿಡಲೇ ಇಲ್ಲ.
ಜ. 11ರಂದು ಸಂಗೀತಾ ಕುಟುಂಬ ಬೇಲೂರಿನ ಅಯ್ಯಪ್ಪಸ್ವಾ ಮಿ ದೇವಸ್ಥಾನಕ್ಕೆ ತೆರಳಿತ್ತು. ಆಗ ಅಲ್ಲಿಗೂ ಶಿವು ಬಂದಿದ್ದ. ಸಂಗೀತಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನನ್ನ ಫೋನ್ ಏಕೆ ರಿಸೀವ್ ಮಾಡಲ್ಲ ಎಂದು ತಲೆಗೆ ಹೊಡೆದಿದ್ದ. ಮಾತ್ರವಲ್ಲ, ನನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದ.
ಶಿವು ಇಷ್ಟೊಂದು ಕಿರುಕುಳ ನೀಡುತ್ತಿರುವುದು ಸಂಗೀತಾಗೆ ಬೇಸರವಾಗಿತ್ತು. ಆತ ತನ್ನನ್ನು ಎಲ್ಲಾದರೂ ನಿಲ್ಲಿಸ ಕೊಲೆ ಮಾಡಲೂ ಬಹುದು, ಮನೆಯವರಿಗೆ ತೊಂದರೆ ಉಂಟು ಮಾಡಬಹುದು ಎಂಬ ಆತಂಕದಲ್ಲಿದ್ದಳು. ತನ್ನಂದಾಗಿ ಮನೆಯವರಿಗೂ ತೊಂದರೆ ಆಗುತ್ತಿರುವುದಿಂದ ನೊಂದ ಆಕೆ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಳು.
ಕೊನೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಸಂಗೀತ. ಇದೀಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶಿವನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Love Case : ಮಂಡ್ಯದಲ್ಲಿ ಲವ್, ಸೆಕ್ಸ್ ದೋಖಾ; ಕೈ ಕೊಟ್ಟ ಪ್ರಿಯಕರನಿಂದ ಹೊಡಿಬಡಿ
ಶಿವು ತನ್ನ ವಿಕೃತ ಕೃತ್ಯದಿಂದ ಒಬ್ಬ ಯುವತಿಯ ಬಾಳಿಗೇ ಕೊಳ್ಳಿ ಇಟ್ಟಿದ್ದಾಳೆ. ಪ್ರೀತಿಸುವುದಿಲ್ಲ ಎಂದು ಎಷ್ಟು ಸಾರಿ ಹೇಳಿದರೂ ಅರ್ಥ ಮಾಡಿಕೊಳ್ಳದೆ ಆಕೆಯನ್ನು ಮತ್ತು ಕುಟುಂಬವನ್ನು ಪೀಡಿಸಿದ್ದಾನೆ. ಹೀಗೆ ಆಕೆಯ ಸಾವಿಗೆ ಕಾರಣನಾದ ದುಷ್ಟನಿಗೆ ಶಿಕ್ಷೆ ವಿಧಿಸಬೇಕು ಎಂದು ಕುಟುಂಬಿಕರು ಆಗ್ರಹಿಸಿದ್ದಾರೆ.