ಮೈಸೂರು/ಕೊಡಗು: ಪ್ರೀತಿಸಿ ಮದುವೆ ಆಗಿದ್ದ ಆತನಿಗೆ ಪತ್ನಿ ಮೇಲೆ ಎಲ್ಲಿಲ್ಲದ ಅನುಮಾನವು ಹುಟ್ಟಿಕೊಂಡಿತ್ತು. ಪತಿಯ ಸಂಶಯ ಸ್ವಭಾವವು ಪತ್ನಿಯನ್ನೂ ಸಾಯಿಸುವಷ್ಟು ಮುಂದುವರಿದು, ಸಾವಿನಲ್ಲಿ ಕೊನೆಯಾಗಿದೆ. ಪಾಪಿ ಪತಿಯೊಬ್ಬ ಪತ್ನಿಗೆ ಐದು ಬಾರಿ ಚಾಕುವಿನಿಂದ ಇರಿದು ಕೊಲೆಗೆ (Attempt To Murder) ಯತ್ನಿಸಿದ್ದಾನೆ. ಆದರೆ ಆಕೆ ಅಪಾಯದಿಂದ ಪಾರಾಗಿದ್ದರೆ, ಇತ್ತ ಚಾಕುವಿನಿಂದ ಇರಿದ ಪತಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಮುತ್ತಿನ ಮುಳ್ಸೋಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ವೇತ ಹಾಗೂ ಪ್ರಸನ್ನ ಪ್ರೀತಿಸಿ ಒಂದೂವರೆ ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಮೊದಮೊದಲು ಸೊಗಸಾಗಿಯೇ ಇದ್ದ ಇವರಿಬ್ಬರ ಸಂಸಾರಿಕ ಜೀವನವು, ಬರಬರುತ್ತಾ ಸಾಮರಸ್ಯವನ್ನು ಕಳೆದುಕೊಂಡಿತ್ತು. ಬಿಟ್ಟಲಾರದಷ್ಟು ಪ್ರೀತಿಸುತ್ತಿದ್ದವರು ಬಳಿಕ ನಿಧಾನವಾಗಿ ದೂರವಾಗಿದ್ದರು.
ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಶ್ವೇತಾಳ ಮೇಲೆ ಅತಿಯಾದ ಸಂಶಯವನ್ನು ಪಡುತ್ತಿದ್ದ ಎನ್ನಲಾಗಿದೆ. ಹೀಗಾಗಿಯೇ ಶ್ವೇತಾ, ಪತಿಯನ್ನು ತೊರೆದು ಕಳೆದ ಒಂದು ತಿಂಗಳಿಂದ ತಾಯಿ ಮನೆಯಲ್ಲೇ ಇದ್ದಳು. ಒಮ್ಮೆಲೆ ಮನೆಗೆ ಬಂದ ಪ್ರಸನ್ನ ಶ್ವೇತಾಗೆ ಮನಬಂದಂತೆ ಇರಿದಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶ್ವೇತಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಸನ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Viral video : ಶಾಲೆಗೆ ಹೊರಟಿದ್ದ ಟೀಚರ್ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್
ಜೀವನದಲ್ಲಿ ಜಿಗುಪ್ಸೆ; ಕಂದಮ್ಮಗಳ ಜತೆ ಕೆರೆಗೆ ಹಾರಿದ ತಾಯಿ!
ತುಮಕೂರು: ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿ (Self Harming) ಮೃತಪಟ್ಟಿರುವ ಘಟನೆ ತುಮಕೂರಿನ (Tumkur News) ಗುಬ್ಬಿ ತಾಲ್ಲೂಕಿನ ನಿಟ್ಟೂರು ಕೆರೆಯಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ವಿಜಯಲಕ್ಷ್ಮಿ ಎಂಬುವವರು ಯಶವಂತ್ ನಾಯಕ್ (5), ಜಸ್ವಂತ್ ನಾಯಕ್ (11 ತಿಂಗಳು) ಮಕ್ಕಳೊಂದಿಗೆ ಕೆರೆಗೆ ಬಿದ್ದಿದ್ದಾರೆ.
ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಎದೆಯೊಡ್ಡಲಾಗದೇ ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಮಕ್ಕಳೊಂದಿಗೆ ವಿಜಯಲಕ್ಷ್ಮಿ ಕೆರೆಗೆ ಹಾರಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಪತಿ ನವೀನ್ ಅನಾರೋಗ್ಯದಿಂದ ಸಾವನಪ್ಪಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಈ ನಡುವೆ 11 ತಿಂಗಳ ಮಗುವಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತ್ತು. ಲಕ್ಷಾಂತರ ರೂ. ಖರ್ಚು ಮಾಡಿದರೂ ಕಾಯಿಲೆ ವಾಸಿಯಾಗಿರಲಿಲ್ಲ. ಇದರಿಂದ ಮನನೊಂದು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಸ್ಥಳಕ್ಕಾಗಮಿಸಿದ ಪೊಲೀಸರು ಕೆರೆಯಿಂದ ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ