Site icon Vistara News

ಬಾಲಕನ ಅಪಹರಣಕ್ಕೆ ಯತ್ನ; ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಾರ್ಜಜನಿಕರು

ಬಾಲಕನ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದ ಪಿಂಜಾರ್‌ಗಲ್ಲಿಯಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ನಾಲ್ಕು ವರ್ಷದ ಬಾಲಕನ ಅಪಹರಣಕ್ಕೆ ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮನೆ ಬಳಿ ಮಗುವನ್ನು ಆರೋಪಿ ಅಪಹರಿಸಿ ಐಸ್‌ಕ್ರಿಂ ಡಬ್ಬಿಯಲ್ಲಿ ಕೂಡಿ ಹಾಕಿದ್ದ. ಮಗು ಅಳುವ ಶಬ್ದ ‌ಕೇಳಿ ಮನೆಯಿಂದ ಹೊರ ಬಂದ ತಾಯಿ ಆರೋಪಿಯನ್ನು ಮಗು ಎಲ್ಲಿ ಕೇಳಿದಾಗ ಆತ ಉತ್ತರಿಸದೇ ಮೌನವಾಗಿದ್ದ. ತಕ್ಷಣವೇ ತಾಯಿ ಕೂಗಾಡಿದ್ದರಿಂದ ಸ್ಥಳೀಯರು 35-40 ವರ್ಷದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಮಗುವನ್ನು ರಕ್ಷಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಬೈಲಹೊಂಗಲ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Snake Bite | ಆಟ ಆಡುವಾಗ ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವು

Exit mobile version