Site icon Vistara News

Audio Viral: ಸ್ಥಳೀಯ ಮುಖಂಡನಿಗೆ ಬೆದರಿಕೆ ಹಾಕಿದರೇ ಬಿಜೆಪಿ ಶಾಸಕ?: ಆಡಿಯೊ ವೈರಲ್

audio viral shivanagouda nayak audio

#image_title

ರಾಯಚೂರು: ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಆಡಿಯೋ ವೈರಲ್ ಆಗಿದ್ದು, ಪಕ್ಷ ತೊರೆಯುತ್ತಿರುವವರಿಗೆ ಪಕ್ಷ ಬಿಡದಂತೆ ಮನವಿಯ ಆಡಿಯೋ ಎನ್ನಲಾಗಿದೆ. ಆದರೆ ಧಮ್ಕಿ ಹಾಕುತ್ತಿರುವುದಾಗಿ ಆರೋಪಿಸಿ ಆಡಿಯೋ ವೈರಲ್ ಆಗಿದೆ.

ಮುಖಂಡನ ಜತೆ ಶಿವನಗೌಡ ನಾಯಕ್ ಮಾತನಾಡಿರೋ ಆಡಿಯೋದಲ್ಲಿ “ನಮ್ಮ ಕಡೆ ಉಳಿದುಕೊಂಡ್ರೆ ಚೆನ್ನಾಗಿರತ್ತೆ. ನಿಮ್ಮ ಗ್ರಾಮದ ಪರಿಸ್ಥಿತಿ ನೋಡಿಕೊಳ್ಳಿ. ಬೇರೆ ಪಾರ್ಟಿಗೆ ಹೋದ್ರೆ ಅಲ್ಲಿ ನಿಮ್ಮ ಕೆಲಸ ಆಗುತ್ತವಾ? ರಾಜಕೀಯದಲ್ಲಿ ಮೂಗು ಕೊಯ್ದುಕೊಳ್ಳಬೇಡಿ. ತಪ್ಪು ಮಾಡಿ ಅಲ್ಲಿ ಹೋದ್ರೆ ನಿಮಗೆ ನಷ್ಡ ಆಗತ್ತೆ” ಎಂದಿದ್ದಾರೆ.

ಸರ್, 15 ವರ್ಷದಿಂದ ಏನು ಲಾಭ ಆಗಿದೆ ಸರ್? ಎಂದ ಬಿಜೆಪಿ ಮುಖಂಡನಿಗೆ, ನಿಮ್ಮೂರಿಗೆ ಸಿಸಿ ರಸ್ತೆ, ಶಾಲಾ ಕಟ್ಟಡ ಮಾಡಿದ್ದಿನಲ್ಲ? ರಾಜಕೀಯದಲ್ಲಿ ನನಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಇಬ್ಬರು ಒಟ್ಟಿಗೆ ಇರೋಣ. ನಮ್ಮನ್ನ ಬಿಟ್ಟು ಹೋಗ್ತಿಯಾ ಹಾಗಿದ್ರೆ? ಸಾಹುಕಾರn ಬಿಟ್ಟು ಹೋದವರ ಪರಿಸ್ಥಿತಿ ಏನಾಗಿದೆ ನೋಡ್ರಿ. ಯೋಚನೆ ಮಾಡಪ್ಪ.

ಎಲ್ಲ ಪಕ್ಷದಲ್ಲೂ ಇದೇ ರೀತಿ ಇರತ್ತೆ. ನೀನು ತಪ್ಪು ಮಾಡ್ತಿದ್ದಿಯಾ ಅನ್ಸತ್ತೆ. ಎನ್‌ಆರ್‌ಜಿಯಲ್ಲೂ ಅಲ್ಲೂ ನಿಮಗೆ ಅನಕೂಲ ಮಾಡಿ ಕೊಟ್ಟಿದ್ದೇನೆ. ಎಲ್ಲಿ ಕಳೆದುಕೊಂಡಿದ್ದಿರೋ ಅಲ್ಲೆ ಹುಡುಕೋ ಕೆಲಸ ಮಾಡಿ. ಫೈನಾನ್ಸ್ ಮಾಡಿಕೊಂಡಿದ್ದಿರಿ. ನೀವು ಏನು ಮಾತು ಕೊಟ್ಟಿದ್ದಿರಿ ಅದೇ ರೀತಿ ನಡೆದುಕೊಳ್ರಿ ಎಂದು ಶಿವನಗೌಡ ನಾಯಕ್‌ ಹೇಳಿದ್ದಾರೆ.

ಇದನ್ನೂ ಓದಿ: ನKarnataka Election: ಕನ್ನಡಿಗರ ವಿರುದ್ಧ ತಮಿಳರನ್ನು ಮುನಿರತ್ನ ಎತ್ತಿಕಟ್ಟುತ್ತಿದ್ದಾರೆ: ಆಡಿಯೊ ಬಿಡುಗಡೆ ಮಾಡಿದ ಡಿ.ಕೆ. ಸುರೇಶ್‌

Exit mobile version