Site icon Vistara News

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

#image_title

ಬೆಂಗಳೂರು: ಕನ್ನಡದ ಖ್ಯಾತ ವಿಮರ್ಶಕ, ಲೇಖಕ, ಕತೆಗಾರ ಹಾಗೂ ಕಾದಂಬರಿಕಾರ ಪ್ರೊ. ಮಾಧವ ಕುಲಕರ್ಣಿ (77) (Prof. Madhav Kulkarni) ಅವರು ನಗರದಲ್ಲಿ ಬುಧವಾರ ನಿಧನರಾದರು. ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾದ ಮಾಧವ ಅನಂತ ಕುಲಕರ್ಣಿ ಅವರು 2021ರಲ್ಲಿ ಮಾಸ್ತಿ ಪುರಸ್ಕಾರ ಪಡೆದಿದ್ದರು.

ವಿಮರ್ಶೆ, ಕತೆ, ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾಧವ ಕುಲಕರ್ಣಿ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೀವಂತ ಧೋರಣೆಗಳು, ತುಡಿತ, ಯೋಚನೆಗಳು ಇವರ ಪ್ರಮುಖ ವಿಮರ್ಶಾ ಸಂಕಲನಗಳಾಗಿವೆ.

ಇದನ್ನೂ ಓದಿ | Literature Award: ಕತೆಗಾರ ದಯಾನಂದ ರಚನೆಯ ‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ

Exit mobile version