ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Kunigal fire) ಆಟೋ ರಿಕ್ಷಾ ಮತ್ತು ಓಮ್ನಿ ಕಾರು ಸುಟ್ಟು ಭಸ್ಮವಾಗಿದೆ. ಪಟ್ಟಣದ ತಿರುಮಲ ಕಲ್ಯಾಣ ಮಂಟಪದ ಸಮೀಪ ಮನೆಯ ಎದುರು ನಿಲ್ಲಿಸಿದ್ದ ಈ ವಾಹನಗಳಿಗೆ ಬೆಂಕಿ ತಗುಲಿದೆ.
ಅಸ್ಲಾಂ ಎಂಬುವವರಿಗೆ ಸೇರಿದ ಆಟೋ ರಿಕ್ಷಾ ಮತ್ತು ರಫೀಕ್ ಎಂಬುವವರಿಗೆ ಸೇರಿದ ಓಮ್ನಿ ಕಾರುಗಳು ಇದಾಗಿದ್ದು, ಒಮ್ಮಿಂದೊಮ್ಮೆಗೇ ಕಾಣಿಸಿಕೊಂಡ ಬೆಂಕಿಗೆ ಆಹುತಿಯಾಗಿವೆ.
ಏಕಕಾಲದಲ್ಲಿ ಎರಡೂ ವಾಹನಗಳು ಹೊತ್ತಿ ಉರಿದಿವೆ. ವಾಹನಗಳು ಬೆಂಕಿಯಲ್ಲಿ ಧಗಧಗಿಸುತ್ತಿರುವುದನ್ನು ನೋಡಿ ಅಕ್ಕಪಕ್ಕದವರು ಧಾವಿಸಿ ಬಂದಿದ್ದು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಫೋನ್ ಮಾಡಿದರು. ಅವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
ಕುಣಿಗಲ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬೆಂಕಿಯ ಹಿಂದಿನ ಕಾರಣ ಬಗೆಯುತ್ತಿದ್ದಾರೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರೆ ಕೇವಲ ಎರಡು ವಾಹನಗಳು ಮಾತ್ರ ಯಾಕೆ ಸುಟ್ಟುಹೋಗುತ್ತಿದ್ದವು ಎಂಬ ಪ್ರಶ್ನೆ ಇದೆ. ಹಾಗಿದ್ದರೆ ಇವರಿಬ್ಬರ ವಾಹನಗಳನ್ನು ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿದರಾ ಎಂಬ ಸಂಶಯವಿದೆ.
ಇದನ್ನೂ ಓದಿ | Salon On Fire | ಮನಿ ಕಿರಿಕ್: ತಮ್ಮನ ಮೇಲಿನ ಸಿಟ್ಟಿಗೆ ಅಕ್ಕನ ಸೆಲೂನ್‌ಗೆ ಬೆಂಕಿ ಇಟ್ಟರು; ಕಂಬಿ ಹಿಂದೆ ಬಂದಿಯಾದರು