Site icon Vistara News

Award Ceremony: ನಾಡೋಜ ಡಾ. ಬಿ.ಟಿ. ರುದ್ರೇಶ್‌ಗೆ ಲೆಜೆಂಡ್ಸ್ ಆಫ್ ಹೋಮಿಯೊಪಥಿಕ್ ಬ್ರಿಲಿಯನ್ಸ್ ಅವಾರ್ಡ್

Award Ceremony Nadoja Dr BT Rudresh wins Legends of Homeopathic Brilliance Award

ಬೆಂಗಳೂರು: ಆಲ್ ಇಂಡಿಯಾ ಹೋಮಿಯೊಪತಿ ರಿಸರ್ಚ್ ಸಮಿತಿಯ 2023ರ ಪ್ರತಿಷ್ಠಿತ “ಲೆಜೆಂಡ್ಸ್ ಆಫ್ ಹೋಮಿಯೊಪಥಿಕ್ ಬ್ರಿಲಿಯನ್ಸ್ ಅವಾರ್ಡ್”ಗೆ (Legends of Homeopathic Brilliance Award) ಕರ್ನಾಟಕದಿಂದ ಅಂತಾರಾಷ್ಟ್ರೀಯ ಖ್ಯಾತಿಯ ಹೋಮಿಯೊಪಥಿ ವೈದ್ಯ, ನಾಡೋಜ ಡಾ. ಬಿ.ಟಿ. ರುದ್ರೇಶ್ (BT Rudresh) ಆಯ್ಕೆಯಾಗಿದ್ದಾರೆ.

ಮಾರ್ಚ್‌ 18 ಮತ್ತು 19ರಂದು ನಾಗಪುರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆರ್‌ಎಸ್ಎಸ್ ಸಂಚಾಲಕ ಮೋಹನ್ ಭಾಗವತ್‌, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅಶ್ವಿನಿ ಕುಮಾರ್ ಚೌಬೆ, ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟಿ ಆಶಾಫರೇಕ್ ಮತ್ತು ನಟಿ ಜ಼ೀನತಮಾನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

Exit mobile version