Site icon Vistara News

Operation Hasta : ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌, ನಾಗರಾಜಗೌಡ; ಜಿಲ್ಲಾ ನಾಯಕರ ಸೇರ್ಪಡೆಗೆ ಡಿಕೆಶಿ ಕರೆ

Ayanur Majunath and nagaraj gowda join congress infront of KPCC president and Deputy CM DK Shivakumar

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ (Operation Hasta) ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ವಿವಿಧ ಪಕ್ಷಗಳ ನಾಯಕರ ಕಾಂಗ್ರೆಸ್‌ ಸೇರ್ಪಡೆ ಕಾರ್ಯ ಭರದಿಂದ ಸಾಗುತ್ತಿದೆ. ಈಗ ಜೆಡಿಎಸ್‌ ನಾಯಕ, ವಿಧಾನ ಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ್‌ (Former MLC Ayanur Manjunath) ಹಾಗೂ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ತೊರೆದು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಶಿಕಾರಿಪುರದ ನಾಗರಾಜ್‌ ಗೌಡ (Shikaripura Nagaraj Gowda) ಅವರು ಗುರುವಾರ (ಆಗಸ್ಟ್‌ 24) ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ (KPCC president and Deputy CM DK Shivakumar) ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ವೇಳೆ, ಜಿಲ್ಲಾ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಡಿಕೆಶಿ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ (KPCC Office) ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆಯನೂರು ಮಂಜುನಾಥ್ ಹಾಗೂ ನಾಗರಾಜ್ ಗೌಡ ಅವರಿಗೆ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Shimoga incharge minister Madhu Bangarappa), ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ ಇಂದು ಚಿಟಪಟ ಮಳೆಗೆ ಗುಡುಗು, ಮಿಂಚು ಸಾಥ್

Ayanur Majunath and nagaraj gowda join congress infront of KPCC president and Deputy CM DK Shivakumar

ಇವರು ಯಾರಿಗೂ ನಾನು ಟಿಕೆಟ್‌ ಭರವಸೆ ಕೊಟ್ಟಿಲ್ಲ: ಡಿ‌.ಕೆ. ಶಿವಕುಮಾರ್

ನಾನು ಯಾರಿಗೂ ಟಿಕೆಟ್ ಭರವಸೆ ಕೊಟ್ಟಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ನವರು ತೀರ್ಮಾನ ಮಾಡುತ್ತಾರೆ. ನಾವು ಆಯನೂರು ಮಂಜುನಾಥ್ ಅವರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಾಗರಾಜ್ ಗೌಡಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ. ಕೊನೇ ಕ್ಷಣದಲ್ಲಿ ನಾಲ್ಕೈದು ಟಿಕೆಟ್ ಬದಲಾವಣೆ ಮಾಡಲು ಹೊರಟಿದ್ದೆ. ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದರು.

ಆಪರೇಷನ್‌ ಜಿಲ್ಲಾ ನಾಯಕರು: ಡಿ.ಕೆ. ಶಿವಕುಮಾರ್

ಪಕ್ಷದ ಸಿದ್ಧಾಂತ ಒಪ್ಪಿ ಯಾರು ಪಕ್ಷ ಸೇರಲು ಮುಂದೆ ಬರುತ್ತಾರೋ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಜಿಲ್ಲಾ ‌ಮಟ್ಟದಲ್ಲಿ‌ ಸೇರ್ಪಡೆ ಮಾಡಿಕೊಳ್ಳಿ. ವಿವಾದಿತ ವ್ಯಕ್ತಿಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ. ನಾವು ಯಾರನ್ನೂ ಖರೀದಿ ಮಾಡುವುದಿಲ್ಲ. ಸಿದ್ಧಾಂತ ಒಪ್ಪಿ ಬರುವವರನ್ನು ಸೇರಿಸಿಕೊಳ್ಳಿ. ಷರತ್ತು ಹಾಕುವವರು ಇದ್ದರೆ ನಮ್ಮ ಗಮನಕ್ಕೆ ತನ್ನಿ, ಯಾವುದೇ ವಿರೋಧಿಗಳು ಇದ್ದರೂ ಕರೆ ತನ್ನಿ‌. ಸ್ಥಳೀಯ ಮಟ್ಟದಲ್ಲಿ ಮತಗಳ ಪ್ರಮಾಣ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಎಲ್ಲ ಜಿಲ್ಲಾಧ್ಯಕ್ಷರಿಗೆ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದರು.

ಇದನ್ನೂ ಓದಿ: Operation Hasta : ಜೆಡಿಎಸ್‌ನಲ್ಲೂ ʼಹಸ್ತʼಕ್ಷೇಪ; ಆಪರೇಷನ್‌ ಹಸ್ತದ ಬಗ್ಗೆ ಶಾಸಕ ಮಂಜುನಾಥ್‌ ಸ್ಫೋಟಕ ಸುಳಿವು!

ಕಾಂಗ್ರೆಸ್ ಬಸ್‌ ಸೀಟ್‌ ತರ ಆಗಬಾರದು: ಡಿ.ಕೆ. ಶಿವಕುಮಾರ್

ಈ ಹಿಂದೆಯೇ ಆಯನೂರು ಮಂಜುನಾಥ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಸೇರಿಸಿಕೊಳ್ಳಲಾಗಿರಲಿಲ್ಲ. ಕಾಂಗ್ರೆಸ್ ಪಾರ್ಟಿ ಬಸ್‌ ಸೀಟ್‌ ರೀತಿ ಆಗಬಾರದು. ಹತ್ತುವುದು, ಇಳಿಯುವುದು ಇಲ್ಲಿ ಆಗಬಾರದು. ಕಾಂಗ್ರೆಸ್ ಸೇರಿಕೊಂಡು ಪಕ್ಷದಲ್ಲಿ ಇರುವುದೇ ಒಂದು ಸುದೈವ. ಕಾಂಗ್ರೆಸ್‌ಗೆ ಅದರದ್ದೇ ಆದ ಇಂದು ಇತಿಹಾಸ ಇದೆ. ಈ ಇತಿಹಾಸ ಜೆಡಿಎಸ್ ಮತ್ತು ಬಿಜೆಪಿಗೆ ಇಲ್ಲ. ಗ್ಯಾರಂಟಿಗಳನ್ನು ಯಾಕೆ ಜೆಡಿಎಸ್ ಮತ್ತು ಬಿಜೆಪಿಯವರು ಕೊಡಲು ಸಾಧ್ಯವಾಗಿಲ್ಲ? ಆದರೆ, ದೇಶಕ್ಕಾಗಿ ನಾವು ಈ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಮುಖ್ಯ ಅನ್ನೋದು ಇಲ್ಲಿ ಮುಖ್ಯ. ಶಕ್ತಿ ಸಾಮರ್ಥ್ಯ ನೋಡಿ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಪಕ್ಷಕ್ಕೆ ದುಡಿದವರನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ. ಪಕ್ಷಕ್ಕೆ ಬಂದವರನ್ನು ಪಕ್ಕಕ್ಕೆ ತಳ್ಳುವುದಕ್ಕೆ ಡಿಕೆಶಿ ಅವಕಾಶ ನೀಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version