Site icon Vistara News

Azadi Ka Amrit Mahotsav | ಸ್ವಾತಂತ್ರ್ಯ ವೀರರ ಕುರಿತ ಮಾಹಿತಿ ಇರುವ APP ಬಿಡುಗಡೆ, ಆ್ಯಪ್‌ನಲ್ಲಿ ಬೇರೇನಿದೆ?

Azadi

ಬೆಂಗಳೂರು: ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷವಾದ (Azadi Ka Amrit Mahotsav) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು Azadi Quest: Heroes of Bharat ಎಂಬ ಆ್ಯಪ್‌ ಬಿಡುಗಡೆ ಮಾಡಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರು, ಅವರ ಕಾಲಾವಧಿ, ಹೋರಾಟದ ರೀತಿ, ಹೋರಾಟಕ್ಕೆ ನೀಡಿದ ಕೊಡುಗೆ ಕುರಿತು ಆ್ಯಪ್‌ನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.

ಕೇಂದ್ರ ವಾರ್ತಾ ಶಾಖೆ ಹೆಚ್ಚುವರಿ ಮಹಾ ನಿರ್ದೇಶಕ ಎಸ್‌.ಜಿ.ರವೀಂದ್ರ ಅವರು ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಸ್ವಾತಂತ್ರ್ಯ ಹೋರಾಟಗಾರರ ಕುರಿತು ಜನರಿಗೆ ಮಾಹಿತಿ ನೀಡುವ ದಿಸೆಯಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಝಿಂಗಾ ಇಂಡಿಯಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ “ಆಜಾದ್‌ ಕ್ವೆಸ್ಟ್‌: ಹೀರೋಸ್‌ ಆಫ್‌ ಭಾರತ್”ಗೆ ಆಗಸ್ಟ್‌ 24ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಚಾಲನೆ ನೀಡಿದರು” ಎಂಬುದಾಗಿ ತಿಳಿಸಿದರು.

“ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಜ್ಞಾತ ವೀರ ಪರಿಚಯವೂ ಆ್ಯಪ್‌ನಲ್ಲಿ ಇದೆ. ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ಹಾಗೂ ಪ್ರಕಟಣಾ ವಿಭಾಗವು ಆ್ಯಪ್‌ಗೆ ಮಾಹಿತಿ ಒದಗಿಸಿದೆ. ಸದ್ಯ ಮಾಹಿತಿಯು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಲಭ್ಯವಿದೆ. ಸ್ಥಳೀಯ ಭಾಷೆಗಳಲ್ಲೂ ಮಾಹಿತಿ ಒದಗಿಸುವ ಚಿಂತನೆಯೂ ಇದೆ. ಮಾಹಿತಿ ಜತೆಗೆ ಆಜಾದಿ ಕ್ವೆಸ್ಟ್‌ ಆಟಗಳಿವೆ. ರಸ ಪ್ರಶ್ನೆ ರೂಪದಲ್ಲಿ ಆಟದ ಮಾದರಿಗಳನ್ನು ರೂಪಿಸಲಾಗಿದೆ. ಇದರಲ್ಲಿ 750 ಪ್ರಶ್ನೆಗಳು ಇವೆ. ಸೆಪ್ಟೆಂಬರ್‌ನಿಂದ ಆ್ಯಪ್‌ ವಿಶ್ವಾದ್ಯಂತ ಲಭ್ಯವಿರಲಿದೆ” ಎಂದು ಮಾಹಿತಿ ನೀಡಿದರು. APP ಡೌನ್‌ಲೋಡ್‌ ಮಾಡಲು https://play.google.com/store/apps/details?id=com.zynga.heroes.of.bharat ಗೆ ಭೇಟಿ ನೀಡಿ.

ಇದನ್ನೂ ಓದಿ | Azadi Quest : ಮೊಬೈಲ್ ಆಟಗಳ ಸರಣಿಯ ಡಿಜಿಟಲ್ ಕಲಿಕೆಯ ಅನುಭವ

Exit mobile version