Site icon Vistara News

Yoga Day : 2023 ಜೂನ್‌ 21ರ ಯೋಗ ದಿನಕ್ಕೆ ಮೈಸೂರಿಗೆ ಬಾಬಾ ರಾಮದೇವ್‌: ಎಸ್‌.ಎ. ರಾಮದಾಸ್

ವಿಶ್ವ ಯೋಗ ದಿನ ಬಾಬಾ ರಾಮದೇವ್‌ ಎಸ್.ಎ. ರಾಮದಾಸ್‌

ಮೈಸೂರು: ಮೈಸೂರಿನಲ್ಲಿ ೨೦೨೩ರ ಜೂನ್‌ ೨೧ರಂದು ನಡೆಯುವ ವಿಶ್ವ ಯೋಗ ದಿನದಂದು (Yoga Day) ಯೋಗ ಗುರು ಬಾಬಾ ರಾಮದೇವ್‌ ಅವರಿಗೆ ಆಹ್ವಾನ ನೀಡಲಾಗುತ್ತದೆ. ಅವರ ಮುಂದಾಳತ್ವದಲ್ಲಿ ದಾಖಲೆ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ಹೇಳಿದರು.

ಮೈಸೂರಿನಲ್ಲಿ ಯೋಗ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಿ ಯೋಗದ ಮಹತ್ವದ ಬಗ್ಗೆ ದೇಶಕ್ಕೆ ಕರೆ ಕೊಟ್ಟಿದ್ದರು. ಈ ಬಾರಿ ಬಾಬಾ ರಾಮದೇವ್‌ ಅವರನ್ನು ಕರೆಸಲಾಗುವುದು. ಅವರ ಮುಂದಾಳತ್ವದಲ್ಲಿ ಸುಮಾರು ಒಂದೂವರೆ ಲಕ್ಷ ಜನರನ್ನು ಸೇರಿಸಿ ವಿಶ್ವ ದಾಖಲೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಾಬಾ ರಾಮದೇವ್‌ ಅವರೂ ಕಾರ್ಯಕ್ರಮಕ್ಕೆ ಬರಲು ಒಲವು ತೋರಿದ್ದಾರೆ. ಹೀಗಾಗಿ ಎಲ್ಲರ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಸೇರಿ ವಿಶ್ವದಾಖಲೆಯನ್ನು ನಿರ್ಮಾಣ ಮಾಡೋಣ ಎಂದು ರಾಮದಾಸ್‌ ಕರೆಕೊಟ್ಟರು.

ಮೈಸೂರು ಜಿಲ್ಲಾಡಳಿತದಿಂದ ಮೈಸೂರು ರೇಸ್ ಕೋರ್ಸ್ ಆವರಣದಲ್ಲಿ ಆಯೋಜನೆ ಮಾಡಲಾಗಿರುವ ಯೋಗಥಾನ್‌ಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು. ಇದೇ ವೇಳೆ ಕೊರೆಯುವ ಚಳಿ, ಇಬ್ಬನಿ‌ ಪರಿಣಾಮ ಮೂವರು ಯೋಗಪಟುಗಳು ಅಸ್ವಸ್ಥರಾದರು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ರೆಡ್ಡಿ ಆಸ್ತಿ ಜಪ್ತಿಗೆ ರಾಜಕೀಯ ಬಣ್ಣ
ಮಾಜಿ ಸಚಿವ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಸಂಸ್ಥಾಪಕ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾಮದಾಸ್‌, ಅವೆಲ್ಲವೂ ನಿರಂತರ ಪ್ರಕ್ರಿಯೆಯಾಗಿದೆ. ಬಹಳ ವರ್ಷಗಳಿಂದಲೂ ಇಂತಹ ಪ್ರಕರಣಗಳಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಹತ್ತಿರ ಬಂದಿರುವ ಕಾರಣಕ್ಕೆ ಬೇರೆ ರೀತಿ ಅರ್ಥೈಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Vishveshwar Hegde Kageri | ಮೃದು ಸ್ವಭಾವದ ಕಾಗೇರಿ ಯಾವಾಗ ಉಗ್ರ ರೂಪ ತಾಳುತ್ತಾರೆ ಗೊತ್ತಾಗೊಲ್ಲ: ಮಾಜಿ ಸಚಿವ ದೇಶಪಾಂಡೆ ಮಾತು

Exit mobile version