ಬೆಂಗಳೂರು: ಇಲ್ಲಿನ ಸರ್ಜಾಪುರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ತಲೆ ಮೇಲೆ ದೊಡ್ಡ ಗಾತ್ರದ ತೆಂಗಿನ ಕಾಯಿ ಬಿದ್ದಿರುವ (Baby Injured) ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2 ವರ್ಷ 2 ತಿಂಗಳ ಸುಪ್ರಿತ್ (ಹೆಸರು ಬದಲಾಯಿಸಲಾಗಿದೆ) ಎಂಬ ಮಗುವಿನ ಮೇಲೆ ತೆಂಗಿನ ಕಾಯಿ ಬಿದ್ದಿದೆ. ಬಿದ್ದ ರಭಸಕ್ಕೆ ಮಗು ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಕ್ಟೋಬರ್ 23ರ ಬೆಳಗ್ಗೆ ಘಟನೆ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತೆಂಗಿನಕಾಯಿ ಬಿದ್ದ ಕೂಡಲೇ ಮಗುವಿನ ತಾಯಿ ಬಳಿಗೆ ಓಡಿ ಹೋಗಿ ಮಗುವನ್ನು ಎತ್ತುಕೊಂಡು ಬಂದಿದ್ದಾರೆ. ತಕ್ಷಣವೇ ಪೋಷಕರು ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವೈದ್ಯರು ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ತಲೆಬರುಡೆ ಮುರಿದಿರುವುದು ಗೊತ್ತಾಗಿದೆ. ತಡಮಾಡದೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ನಡೆದ ಎರಡೇ ದಿನಕ್ಕೆ ಮಗು ಸಹಜ ಸ್ಥಿತಿಗೆ ಮರಳಿದ್ದು, ಪೋಷಕರೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ | New Year 2023 | ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಖಾಕಿ ಹೈ ಅಲರ್ಟ್; ಏನೆಲ್ಲ ಇದೆ ರೂಲ್ಸ್?