Site icon Vistara News

Murugesh Nirani : ಐದಾರು ತಿಂಗಳಲ್ಲಿ ಸರ್ಕಾರ ಢಮಾರ್‌ ಎಂದ ನಿರಾಣಿ; ನಡೆಯುತ್ತಾ ಆಪರೇಷನ್‌?

Murugesh Nirani operation Kamala

#image_title

ಬಾಗಲಕೊಟೆ: ʻʻಈಗಿನ ಪರಿಸ್ಥಿತಿಯಲ್ಲಿ ಅವಧಿಗೆ ಮುನ್ನವೇ ಕಾಂಗ್ರೆಸ್​ ಸರ್ಕಾರ ಢಮಾರ್ (Congress Government will collapse) ಅನ್ನೋ ಸ್ಥಿತಿಯಲ್ಲಿದೆ. ಇನ್ನು ಐದಾರು ತಿಂಗಳೂ ಸಹ ಹೋಗೋದಿಲ್ಲ, ಸರ್ಕಾರ ಬಿದ್ದು ಹೋಗುತ್ತದೆʼʼ ಎಂದು ಹೇಳಿದ್ದಾರೆ ರಾಜ್ಯ ಬಿಜೆಪಿಯ ನೂತನ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್‌ ನಿರಾಣಿ (Murugesh Nirani). ಬಾಗಲಕೋಟೆಯಲ್ಲಿ‌ ಮಾತನಾಡಿದ ಅವರು, ಐದಾರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗಲಿದೆ. ಹಾಗೇನಾದ್ರೂ ಆಗಿ ಎಲೆಕ್ಷನ್​ ಪರಿಸ್ಥಿತಿ ಬಂದ್ರೆ ನಿಶ್ಚಿತವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿದರು.

ʻʻರಾಜ್ಯದ ಜನ ಕಾಂಗ್ರೆಸ್​ಗೆ ಐದು ವರ್ಷ ಅವಕಾಶ ಕೊಟ್ಟಿದ್ದಾರೆ. ಆದರೆ, ಅವರು ಅದನ್ನು ಉಳಿಸಿಕೊಳ್ಳುವ‌ ಹಾಗೆ ಕಾಣುತ್ತಿಲ್ಲ.ʼʼ ಎಂದು ಹೇಳಿದ ಅವರು, ನಾವೇನೂ ಆಪರೇಷನ್‌ ಕಮಲ (Opertion Kamala) ನಡೆಸಬೇಕಾದ ಅಗತ್ಯವೇ ಇಲ್ಲ. ಅವರಾಗಿಯೇ ಬಿದ್ದು ಹೋಗ್ತಾರೆ. ಕೋಮಾದಲ್ಲಿ ಇರುವವರ ಪೈಪ್​ ತೆಗೆದು ನಾವ್ಯಾಕೆ ಪಾಪ ಕಟ್ಟಿಕೊಳ್ಳೋಣʼʼ ಎಂದರು ಮುರುಗೇಶ್‌ ನಿರಾಣಿ.

ʻʻನಮ್ಮ ರಾಜ್ಯದಲ್ಲಿ ಸರ್ಕಾರ ಇದೆಯೋ ? ಸತ್ತು ಹೋಗಿದೆಯೋ ಎಂಬ ಸ್ಥಿತಿ ಇದೆ. ಸರ್ಕಾರ ಬಂದು 7-8 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಬಿಟ್ಟಿ ಭಾಗ್ಯಗಳ ನೆಪದಲ್ಲಿ ಅನೌನ್ಸ್ ಮಾಡಿದ್ದನ್ನೂ ಸಹ ಈಡೇರಿಸಿಲ್ಲ.ʼʼ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ʻʻಹಿಂದಿನ ಸರ್ಕಾರದಲ್ಲಿ ಮಂಜೂರಾದ ಯೋಜನೆಗಳ ಕೆಲಸ ಆರಂಭವಾಗಿ ಅಲ್ಲಲ್ಲೇ ನಿಂತಿವೆ. ಯಾಕಾದ್ರೂ ಕಾಂಗ್ರೆಸ್ ಆಯ್ಕೆ ಮಾಡಿದ್ದೇವೋ ಎಂದು. ರಾಜ್ಯದ ಏಳು ಕೋಟಿ ಜನ ಕಾಂಗ್ರೆಸ್‌ಗೆ ಶಾಪ ಹಾಕ್ತಿದ್ದಾರೆʼʼ ಎಂದು ಹೇಳಿದರು. ʻʻಸರ್ಕಾರ ಬರುವುದರ ಜೊತೆಗೆ ಬರಗಾಲವನ್ನೂ ತಂದರು. ಹಿಂದೆಂದೂ ಕಂಡರಿಯದ ಬರಗಾಲ ರಾಜ್ಯದಲ್ಲಿದೆ. ಪರಸ್ಪರ ದೋಷಾರೋಪಣೆ ಮಾಡೋದ್ರಲ್ಲೇ ಕಾಲಹರಣ ಮಾಡ್ತಿದ್ದರು. ಯಾವುದೇ ಹೊಸ ಯೋಜನೆಗಳು ಜಾರಿಗೆ ಬರ್ತಿಲ್ಲ.ʼʼ ಎಂದು ಹೇಳಿದರು.

ಈ ಕಾಂಗ್ರೆಸ್‌ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ, ಕಾರ್ಯವೈಖರಿಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಮುಂದುವರೆದ ದೇಶಗಳನ್ನು ಓವರ್ ಟೇಕ್ ಮಾಡಿ, ಜಗತ್ತಿನ ಆರ್ಥಿಕತೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಅದಕ್ಕೆ ಕಾರಣ ನರೇಂದ್ರ ಮೋದಿ ಅವರು. ಮುಂದುವರೆದ ದೇಶಗಳಿಗೆ ಪೈಪೋಟಿ ಕೊಡುವ ಕೆಲಸ ಪ್ರಧಾನಿಗಳು ಮಾಡಿದ್ದಾರೆ. ಹೀಗಾಗಿ ಅವರ ಕೈ ಬಲಪಡಿಸಿ, 3ನೇ ಬಾರಿಗೆ ದೇಶದ ಪ್ರಧಾನಿ ಮಾಡಬೇಕಿದೆ ಎಂದು ಹೇಳಿದರು.

ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಒಂದೊಂದು ಮಾತು!

ಹಿಜಾಬ್‌ ನಿಷೇಧ ರದ್ದತಿಯ ಹೇಳಿಕೆಯನ್ನು ಹಿಂಪಡೆದ ಸಿಎಂ ಸಿದ್ದರಾಮಯ್ಯ ಅವರ ನಿಲುವನ್ನು ಲೇವಡಿ ಮAಡಿದ ಅವರು, ಸಿದ್ದರಾಮಯ್ಯ ಅವರು ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಒಂದೊಂದು ಹೇಳಿಕೆ ಕೊಡ್ತಾರೆ. ವಿಷಯ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಸಹ. ಅದನ್ನು ಕ್ಯಾನ್ಸಲ್ ಮಾಡಿ, ಹಿಂಪಡೆಯುತ್ತೇವೆ ಅಂತಾರೆ. ಶಾಲೆಗೆ ಬರುವ ಮಕ್ಕಳು ಬೇಕಾದ ಉಡುಗೆಯಲ್ಲಿ ಬರಬಹುದು ಅಂತಾರೆ. ಶ್ರೀಮಂತರು-ಬಡವರು, ಮೇಲ್ಜಾತಿ-ಕೆಳಜಾತಿ ಎನ್ನುವ ತಾರತಮ್ಯ ಇಲ್ಲದಂತೆ ಎಲ್ಲಾರೂ ಸಮಾನರು ಅನ್ನುವ ದೃಷ್ಟಿಯಲ್ಲಿ ಯೂನಿಫಾರ್ಮ್ ಕೊಟ್ಟಿದ್ದಾರೆ. ಶಾಲೆ ಮಕ್ಕಳಿರಬಹುದು, ಪೊಲೀಸರಿರಬಹುದು ಸಮಾನತೆಗಾಗಿ ಯೂನಿಫಾರ್ಮ್ ನೀಡಿದ್ದಾರೆ. ಇವರಿಗೆ ಸಮಾನತೆ ಬೇಕಾಗಿಲ್ಲ ಎಂದು ಹೇಳಿದರು.

ʻʻನಮ್ಮ ದೇಶ ಹಿಂದೂ ರಾಷ್ಟ್ರ, ಜಗತ್ತಲ್ಲೇ ಹಿಂದೂ ರಾಷ್ಟ್ರ ಅಂದ್ರೆ ಭಾರತ ಮಾತ್ರ. ಅಂತದ್ದರಲ್ಲಿ ಇವರು(ಸಿಎಂ) ನಿತ್ಯ ಯಾರನ್ನ ಓಲೈಸುತ್ತಾರೆ ಅಂತ ನೋಡ್ತಾ ಇದ್ದೇವೆ. ಮುಸ್ಲಿಂ ಬಾಂಧವರಿಗೆ ಒಂದು ರೀತಿಯ ಕೊಡುಗೆ, ಹಿಂದೂಗಳಿಗೆ ಇನ್ನೊಂತರ. ಹಿಂದೂಗಳಿಗೆ ಅಸಹ್ಯ ಉಂಟು ಮಾಡುವ, ಅಪಮಾನ ಮಾಡುವ ರೀತಿಯಲ್ಲಿ ಸಿಎಂ ನಡೆದುಕೊಳ್ಳುತ್ತಿದ್ದಾರೆ. ಮುಸ್ಲಿಂ ಬಾಂಧವರಿಗೆ ಈ ವರ್ಷ 10 ಸಾವಿರ ಕೋಟಿ ಇಡ್ತೇನೆ ಅಂತಾರೆ. ಹಿಂದೂಗಳು ಏನು ಪಾಪ ಮಾಡಿದ್ದಾರೆ. ಹಿಂದೂಗಳಿಗೆ ಒಂದೂ ರೂ. ಕೂಡಾ ಘೋಷಣೆ ಮಾಡದ ಈ ಸರ್ಕಾರವನ್ನು ಸಾಧ್ಯವಾದಷ್ಟು ಬೇಗ ಕಿತ್ತು ಹಾಕೋಕೆ ರಾಜ್ಯದ, ದೇಶದ ಜನತೆ ತುದಿಗಾಲಲ್ಲಿ ನಿಂತಿದ್ದಾರೆʼʼ ಎಂದು ಮುರುಗೇಶ್‌ ನಿರಾಣಿ ಹೇಳಿದರು.

Exit mobile version