ಬಾಗಲಕೋಟೆ: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಜಾನುವಾರಗಳ (Cow Smugglers) ಪ್ರಾಣಹರಣಕ್ಕೆ ಸ್ಕೆಚ್ ಹಾಕಿದ್ದ ದುರುಳರು ಜೈಲುಪಾಲಾಗಿದ್ದಾರೆ. ಈ ಮೂಲಕ ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ಜಾನುವಾರಗಳ ರಕ್ಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ತಡರಾತ್ರಿ ಘಟನೆ ನಡೆದಿದೆ.
ಹಿಂದು ಜಾಗೃತಿ ವೇದಿಕೆ ಕಾರ್ಯಕರ್ತರು ಜಾನುವಾರುಗಳನ್ನು ತುಂಬಿದ್ದ ಲಾರಿಯನ್ನು ಹಿಂಬಾಲಿಸಿ ತಡೆದಿದ್ದಾರೆ. 13 ಎತ್ತುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಐವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ರಕ್ಷಣೆ ಮಾಡಿದ ಜಾನುವಾರುಗಳನ್ನು ನವನಗರದ ಗೋ ಶಾಲೆಗೆ ಒಪ್ಪಿಸಿದ್ದಾರೆ.
ಬೀಳಗಿಯಿಂದ ಮಹಾರಾಷ್ಟ್ರಕ್ಕೆ ಲಾರಿ ಮೂಲಕ ಎತ್ತುಗಳ ಸಾಗಿಸುತ್ತಿದ್ದರು ಎನ್ನಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಇದ್ದರೂ, ನಿರಂತರವಾಗಿ ಗೋವುಗಳ ಸಾಗಾಟ ನಡೆಯುತ್ತಿದೆ. ವಶಕ್ಕೆ ಪಡೆದ ಐವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್
ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್
ಆನೇಕಲ್: ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಗ್ರಾಹಕನೊಬ್ಬ ಪ್ರಶ್ನಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಹಾಗೂ ಸಪ್ಲೇಯರ್ ಸೇರಿ ಹಲ್ಲೆ (Assault Case) ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್‌ನಲ್ಲಿ ಘಟನೆ ನಡೆದಿದೆ.
ಕೊಪ್ಪಗೇಟ್ ನಿವಾಸಿ ಬಾಬು(30) ಹಲ್ಲೆಗೊಳಗಾದವರು. ಬಾರ್ ಕ್ಯಾಶಿಯರ್ ಸಮಂತ್ ಗೌಡ, ಸಪ್ಲೇಯರ್ ಜೀವನ್ ಗೌಡ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ನಿನ್ನೆ ಶುಕ್ರವಾರ ಸಂಜೆ 8ಗಂಟೆ ಸುಮಾರಿಗೆ ಬಾಬು ಬಾರ್‌ಗೆ ಹೋಗಿದ್ದರು. ಈ ವೇಳೆ ಮದ್ಯದ ಜತೆಗೆ ನೀಡಿದ್ದ ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದೆ. ಇದರಿಂದ ಸಿಟ್ಟಾದ ಬಾಬು ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಸಪ್ಲೇಯರ್ ಬಳಿ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಾದ ಸಪ್ಲೇಯರ್ ಜೀವನ್ ಗೌಡ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಅಲ್ಲೇ ಇದ್ದ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಬಾಬು ತಲೆ ತೂತಾಗಿದೆ. ಇತ್ತ ಜೀವನ್‌ಗೆ ಬಾರ್ ಕ್ಯಾಶಿಯರ್ ಸಮಂತ್ ಗೌಡ ಸಾಥ್ ನೀಡಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ಹಲ್ಲೆ, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಬಸಂದ್ರದಲ್ಲಿ ಡೆಡ್ಲಿ ಅಟ್ಯಾಕ್ ನಡೆದಿತ್ತು. ಇದೀಗ ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ