Site icon Vistara News

Electric shock : ಬೋರ್‌ವೆಲ್‌ ಆನ್‌ ಮಾಡುತ್ತಿದ್ದಂತೆ ಕರೆಂಟ್‌ ಶಾಕ್‌; ಹಾರಿ ಬಿದ್ದ ರೈತ ಸ್ಪಾಟ್‌ ಡೆತ್‌

Electric Shock

ಬಾಗಲಕೋಟೆ: ವಿದ್ಯುತ್ ತಗುಲಿ (Electric shock) ರೈತರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ನಡೆದಿದೆ. ಭೀಮಪ್ಪ ಯಾದವಾಡ (45) ಮೃತ ದುರ್ದೈವಿ.

ಭೀಮಪ್ಪ ನೀರು ಹಾಯಿಸಲು ಬೆಳಗ್ಗೆ ಹೊಲಕ್ಕೆ ಹೋಗಿದ್ದರು. ಬೋರ್‌ವೆಲ್‌ ಮೆಷಿನ್‌ ಡೋರ್‌ ತೆರೆದು ಆನ್ ಮಾಡಲು ಹೋಗಿದ್ದಾರೆ. ಆದರೆ ವಿದ್ಯುತ್ ತಂತಿ ಕಟ್ ಆಗಿ ಬೋರ್ಡ್‌ಗೆ ಸಂಚರಿಸಿ ಕರೆಂಟ್‌ ಶಾಕ್‌ ಹೊಡೆದಿದೆ.

ಸ್ಥಳಕ್ಕೆ ಲೊಕಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸ್ಟೇ ವೈಯರ್‌ಗೆ ವಿದ್ಯುತ್ ಸ್ವರ್ಶಿಸಿ ಯುವತಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಸ್ಟೇ ವೈಯರ್‌ಗೆ ವಿದ್ಯುತ್‌ ಸ್ಪರ್ಶಿಸಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ ಮೃತ ದುರ್ದೈವಿ.

ಗಣೇಶ್ ಶೆಟ್ಟಿ ಮತ್ತು ರೋಹಿನಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಕೊಕ್ಕಡ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮನೆಗೆ ಪಾರ್ಸೆಲ್ ಬಂದಿತ್ತು. ಹೀಗಾಗಿ ಅದನ್ನು ಪಡೆಯಲು ಹೋದಾಗ ಸ್ಟೇ ವೈಯರ್‌ನಿಂದ ನೀರಿಗೆ ವಿದ್ಯುತ್ ಪ್ರವಹಿಸಿದೆ. ಗಂಭೀರ ಗಾಯಗೊಂಡ ಪ್ರತೀಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

ಬಿಹಾರ: ಕೆಲವೊಂದು ಕಡೆಗಳಲ್ಲಿ ಮಹಿಳೆಯ ಕುತ್ತಿಗೆಗೆ ಮಾಂಗಲ್ಯ ಸರ ಕಟ್ಟಿದರೆ ಮದುವೆಯಾದ ಹಾಗೇ. ಅದೇರೀತಿ ಕೆಲವು ಕಡೆಗಳಲ್ಲಿ ಹಣೆಗ ಸಿಂಧೂರ ಹಚ್ಚಿದರೆ ಅವರಿಬ್ಬರು ದಂಪತಿ ಎಂದು ಪರಿಗಣಿಸುತ್ತಾರೆ. ಹಾಗಾಗಿ ಇಂತಹದೊಂದು ಸಂಪ್ರದಾಯವನ್ನಿಟ್ಟುಕೊಂಡು ಯುವಕನೊಬ್ಬ ಶಾಲಾ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಆಕೆಯ ತಂದೆಯ ಎದುರೇ ಬಲವಂತವಾಗಿ ಮದುವೆಯಾಗಲು ಯತ್ನಿಸಿದ ಘಟನೆ ಬಿಹಾರದ ಬಂಕಾ ಜಿಲ್ಲೆಯ ಅಮರಪುರ ಬ್ಲಾಕ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಶಾಲೆ ಕೆಲಸ ಮುಗಿಸಿ ಶಿಕ್ಷಕಿ ತನ್ನ ತಂದೆಯೊಂದಿಗೆ ಬೈಕಿನಲ್ಲಿ ಬರುವಾಗ ಯುವಕರಿಬ್ಬರು ಅವರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ಅದರಲ್ಲಿ ಒಬ್ಬ ಯುವಕ ಬಲವಂತವಾಗಿ ಆಕೆಯ ಹಣೆಗೆ ಸಿಂಧೂರವನ್ನು ಹಚ್ಚಲು ಪ್ರಯತ್ನಿಸಿದ್ದಾನೆ. ಯುವಕ ತನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಾನೆ. ಹಾಗೇ ಶಿಕ್ಷಕಿಯ ತಂದೆ ಯುವಕನಿಂದ ತಮ್ಮ ಮಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಕಿ ತಲೆಯನ್ನು ತನ್ನ ದುಪ್ಪಟ್ಟದಿಂದ ಮುಚ್ಚಿಕೊಂಡಿದ್ದರು ಕೂಡ ಆತ ಸಿಂಧೂರ ಹಚ್ಚಿದ್ದಾನೆ. ಇನ್ನೊಬ್ಬ ಯುವಕ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ವೈರಲ್ ಆಗಿದೆ.

ವಿಡಿಯೊದಲ್ಲಿ ಯುವಕ ತನ್ನ ಜೀವನ ಆಕೆಯಿಂದ ಹಾಳಾಗಿದೆ ಎಂದು ಹೇಳಿದ್ದಾನೆ. ಈ ಘಟನೆ ಬಳಿಕ ಶಿಕ್ಷಕಿ ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ ಶಿಕ್ಷಕಿ, ಬಭಂಗಮಾ ನಿವಾಸಿ ಸೌರಭ್ ಸೋನು ಎಂಬ ಯುವಕನೊಬ್ಬ ಪೋನ್‌ನಲ್ಲಿ ತನಗೆ ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ತಾನು ಬಿಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಮರಪುರದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು ಶುರುಮಾಡಿದಾಗಿನಿಂದ ತನ್ನನ್ನು ಮದುವೆಯಾಗುವಂತೆ ಆತ ಒತ್ತಡ ಹಾಕುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಅಲ್ಲದೇ ಎರಡು ತಿಂಗಳ ಹಿಂದೆ ಯುವಕನ ವಿರುದ್ಧ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಕರೆದು ಎಚ್ಚರಿಕೆ ನೀಡಿದ್ದರೂ ಕೂಡ ಆತ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾನೆ. ಇದೀಗ ಆತನ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಶಿಕ್ಷಕಿ ನ್ಯಾಯಕ್ಕಾಗಿ ಕಾಯುತ್ತಿದ್ದಾಳೆ.

ಈ ವಿಡಿಯೊ ಜೂನ್ 27ರಂದು ಪೋಸ್ಟ್ ಆಗಿದ್ದು, ಇದಕ್ಕೆ 3.5 ಲಕ್ಷ ಲೈಕ್ಸ್ ಬಂದಿದೆ. ಹಾಗೇ ಅನೇಕ ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇಂತಹ ಘಟನೆಗಳು ಹಲವು ಕಡೆ ನಡೆಯುತ್ತಿರುತ್ತದೆ. ಇದರಿಂದ ಅದೆಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ಹಾಗಾಗಿ ಭವಿಷ್ಯದಲ್ಲಿ ಮಹಿಳೆಯರ ಮೇಲೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version