Site icon Vistara News

Harassment Case : ಯುವತಿಯರ ಫೋಟೊ ತೆಗೆದು ನಂಬರ್‌ ಕೇಳಿದ ದುರುಳ ಯುವಕರು, ಪ್ರಶ್ನಿಸಿದ್ದಕ್ಕೆ ಹಲ್ಲೆ

harassment Case boys Harassment

ಬಾಗಲಕೋಟೆ: ಮಹಿಳಾ ದಿನಾಚರಣೆಯನ್ನೇನೋ (Women’s day) ಎಲ್ಲರೂ ಖುಷಿಯಿಂದ ಆಚರಿಸುತ್ತಾರೆ. ಶುಭಾಶಯಗಳನ್ನು ಕೋರುತ್ತಾರೆ. ಆದರೆ, ಅದರ ನಡುವೆಯೇ ಯುವತಿಯರನ್ನು ಕೆಣಕುವ (Harassment Case), ಅವರು ದಾರಿ ನಡೆಯದಂತೆ ಮಾಡುವ, ಸದಾ ಕಾಲ ಭಯದಿಂದಲೇ ಬದುಕುವಂತೆ ಮಾಡುವ ದುರುಳ ಪ್ರಯತ್ನಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಬಾಗಲಕೋಟೆಯ ರಬಕವಿ ಬಸ್‌ ನಿಲ್ದಾಣದಲ್ಲಿ (Rabakavi Bus station) ಸಂಭವಿಸಿದ ಒಂದು ಘಟನೆ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ಮೂವರು ಯುವಕರು ಕಾಲೇಜು ವಿದ್ಯಾರ್ಥಿನಿಯರ (College girl students Harassed) ಫೋಟೊ ತೆಗೆದು ಅವರ ಬಳಿ ನಂಬರ್‌ ಕೇಳಿದ್ದಾರೆ, ಕೊಡದಿದ್ದಕ್ಕೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಯರ ಪೈಕಿ ಒಬ್ಬಳಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ಮಾಡಿದವರು ಮುಸ್ಲಿಂ ಯುವಕರಾಗಿರುವುದರಿಂದ (Three youths Arrested) ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

Harassment Case1

ಸ್ವಾತಿ, ಸಾಕ್ಷಿ ಮತ್ತು ಕವಿತಾ ಮೂವರೂ ಸ್ನೇಹಿತೆಯರು ಮತ್ತು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಇವರು ತೇರದಾಳ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು. ಬುಧವಾರ ಸಂಜೆ ಇವರು ಕಾಲೇಜು ಮುಗಿಸಿ ತೇರದಾಳದಿಂದ ರಬಕವಿಗೆ ಬಂದು, ರಬಕವಿ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ಹೋಗಲು ಬಸ್‌ ಕಾಯುತ್ತಿದ್ದರು.

ಈ ವೇಳೆ ಬಸ್‌ ನಿಲ್ದಾಣಕ್ಕೆ ಮೂವರು ಯುವಕರು ಬಂದಿದ್ದಾರೆ. ಯುವತಿಯರನ್ನು ನೋಡಿದ ಇವರು ತಮಗೂ ಅಕ್ಕ ತಂಗಿ ಇದ್ದಾರೆ ಎಂಬುದನ್ನು ಮರೆತು ಕೆಟ್ಟದಾಗಿ ಚುಡಾಯಿಸಲು ಆರಂಭಿಸಿದರು. ಮಾತ್ರವಲ್ಲ ಯುವತಿಯರ ಚಿತ್ರಗಳನ್ನು ಬೇರೆ ಬೇರೆ ಕೋನಗಳಲ್ಲಿ ತೆಗೆದು ಕಿರಿಕಿರಿ ಮಾಡಿದರು.

Harassment Case1

ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿ ಅಹ್ಮದ್ ಎಂಬ ಹೆಸರಿನ ಈ ಯುವಕರು ಫೋಟೊ ಕ್ಲಿಕ್ಕಿಸಿದ ಬಳಿಕ ಯುವತಿಯರ ಬಳಿಗೆ ತೆರಳಿ ಮೊಬೈಲ್ ನಂಬರ್ ನೀಡುವಂತೆ ಕೇಳಿದ್ದಾರೆ. ಮೊದಲೇ ಕಿರಿಕಿರಿಗೆ ಒಳಗಾಗಿದ್ದ ವಿದ್ಯಾರ್ಥಿನಿಯರು ನಂಬರ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಿತರಾದ ಯುವಕರು ಈ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ : Harassment Case : ಸೈಕಲ್‌ ಅಡ್ಡ ಬಂತೆಂದು ಬಾಲಕಿಗೆ ಹಲ್ಲೆ; ಕಾಲು ಹಿಡಿದು ಬೇಡಿದರೂ ಕರಗದ ಪಾಪಿ ಮನಸ್ಸು

ಈ ಘಟನೆ ನಡೆದ ಬಳಿಕ ಯುವತಿಯರು ಮನೆಗೆ ತೆರಳಿದ್ದಾರೆ. ವಿದ್ಯಾರ್ಥಿನಿಯರ ಪೈಕಿ ಸ್ವಾತಿ ನಡಕಟ್ಟಿ ಎಂಬಾಕೆಗೆ ತೀವ್ರ ಗಾಯಗಳೇ ಆಗಿವೆ. ಆಕೆಯನ್ನು ಮನೆಯವರು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ರಬಕವಿ ಬಸ್‌ ನಿಲ್ದಾಣದಲ್ಲಿ ಮತ್ತು ಪೊಲೀಸ್‌ ಠಾಣೆ ಬಳಿ ಜಮಾಯಿಸಿ ಆರೋಪಿ ಯುವಕರ ಬಂಧನಕ್ಕೆ ಒತ್ತಾಯಿಸಿದರು.

ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿ ಅಹ್ಮದ್ ಎಂಬವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ಸ್ವಾತಿ ನಡಕಟ್ಟಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Exit mobile version